• Home  
  • ಕಾರ್ಕಳ : ತಮ್ಮನಿಂದ ಅಣ್ಣನ ಕೊಲೆ (Karkala: Brother murdered by younger brother)
- ಅಪರಾಧ

ಕಾರ್ಕಳ : ತಮ್ಮನಿಂದ ಅಣ್ಣನ ಕೊಲೆ (Karkala: Brother murdered by younger brother)

Share: ಕಾರ್ಕಳ : ತಮ್ಮನಿಂದ ಅಣ್ಣನ ಕೊಲೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು (Karkala) ಕಾರ್ಕಳ: ಕುಡಿದ ಮತ್ತಿನಲ್ಲಿ ನಡೆದ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿ, ಒಡಹುಟ್ಟಿದ ತಮ್ಮನೇ ಅಣ್ಣನನ್ನು ಮರದ ರೀಪಿನಿಂದ ಹೊಡೆದು ಹತ್ಯೆಗೈದ ಘಟನೆ ಕಾರ್ಕಳದಲ್ಲಿ ಘಟಿಸಿದೆ.    ರಿಚಾರ್ಡ್‌ ಡಿಸೋಜಾ (65) ಹತ್ಯೆಗೀಡಾದ ವ್ಯಕ್ತಿ.   ಕೊಲೆಗಾರ ಹೆರಾಲ್ಡ್ ಡಿಸೋಜಾರವರು ರಿಚಾರ್ಡ್‌ ಡಿಸೋಜಾರವರ ಮನೆಯಲ್ಲೇ ವಾಸವಾಗಿದ್ದರು.  ರಿಚಾರ್ಡ್‌ ಡಿಸೋಜಾ ಅವರು ಮದ್ಯಪಾನ ಮಾಡಿ ಮನೆಯಲ್ಲಿ ಗಲಾಟೆ ಮಾಡಿದ್ದರೆನ್ನಲಾಗಿದೆ. ಈ ಸಂದರ್ಭ ಮಾತಿಗೆ […]

(Karkala) ಕಾರ್ಕಳ: ಕುಡಿದ ಮತ್ತಿನಲ್ಲಿ ನಡೆದ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿ, ಒಡಹುಟ್ಟಿದ ತಮ್ಮನೇ ಅಣ್ಣನನ್ನು ಮರದ ರೀಪಿನಿಂದ ಹೊಡೆದು ಹತ್ಯೆಗೈದ ಘಟನೆ ಕಾರ್ಕಳದಲ್ಲಿ ಘಟಿಸಿದೆ.

   ರಿಚಾರ್ಡ್‌ ಡಿಸೋಜಾ (65) ಹತ್ಯೆಗೀಡಾದ ವ್ಯಕ್ತಿ.

  ಕೊಲೆಗಾರ ಹೆರಾಲ್ಡ್ ಡಿಸೋಜಾರವರು ರಿಚಾರ್ಡ್‌ ಡಿಸೋಜಾರವರ ಮನೆಯಲ್ಲೇ ವಾಸವಾಗಿದ್ದರು.  ರಿಚಾರ್ಡ್‌ ಡಿಸೋಜಾ ಅವರು ಮದ್ಯಪಾನ ಮಾಡಿ ಮನೆಯಲ್ಲಿ ಗಲಾಟೆ ಮಾಡಿದ್ದರೆನ್ನಲಾಗಿದೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು, ಸಿಟ್ಟಾದ ಹೆರಾಲ್ಡ್‌ ಮನೆಯಲ್ಲಿದ್ದ ಮರದ ರೀಪಿನಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ತೀವ್ರತೆಗೆ ರಿಚಾರ್ಡ್‌ ಅವರ ದೇಹದ ಮೇಲೆ ಗಂಭೀರ ಗಾಯಗಳಾಗಿದ್ದು, ವಿಪರೀತ ರಕ್ತಸ್ರಾವ ಉಂಟಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಾಗದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

  ಮೃತ ರಿಚರ್ಡ್‌ ಅವರಿಗೆ ಪತ್ನಿ ಹಾಗೂ ಮೂವರು ಮಕ್ಕಳಿದ್ದು, ಅವರು ಶಿರ್ವ ಸಮೀಪದ ಮಂಚಕಲ್ಲಿನಲ್ಲಿ ವಾಸವಾಗಿದ್ದಾರೆ. ರಿಚಾರ್ಡ್‌ ಆಗೊಮ್ಮೆ ಈಗೊಮ್ಮೆ ಮಂಚಕಲ್ಲಿನ ಮನೆಗೆ ಹೋಗಿ ಬರುತ್ತಿದ್ದರು.

  ಸದ್ಯಕ್ಕೆ ಮದ್ಯಪಾನದ ಅಮಲಿನಲ್ಲಿ ನಡೆದ ಗಲಾಟೆ ಎ೦ದು ಮೇಲ್ನೋಟಕ್ಕೆ ಕಂಡುಬಂದರೂ, ಈ ಹತ್ಯೆಯ ಹಿಂದೆ ಆಸ್ತಿ ಹ೦ಚಿಕೆಯ ವಿವಾದವೂ ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ.

   ಘಟನಾ ಸ್ಥಳಕ್ಕೆ ಕಾರ್ಕಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  ಪೊಲೀಸರು ಆರೋಪಿ ಹೆರಾಲ್ಡ್ ಡಿಸೋಜಾರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.