ಕಾರ್ಕಳ : ಸುವರ್ಣ ನದಿಗೆ ಈಜಲು ತೆರಳಿದ್ದ ಯುವಕರಿಬ್ಬರ ಸಾವು
ಭರತ ಪೂಜಾರಿ (30) ಮತ್ತು ಹರ್ಶನ್ ಆಚಾರ್ಯ (23) ಮೃತರು.
(Karkala) ಕಾರ್ಕಳ : ಹಿರ್ಗಾನ ಗ್ರಾಮದ ಮಂಗಿಲಾರು ಬಳಿ ಸುವರ್ಣ ನದಿಗೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ ಮದ್ಯಾಹ್ನ ಘಟಿಸಿದೆ. ಗಂಟೆಗೆ ಸಂಭವಿಸಿದೆ.
ಹಿರ್ಗಾನ ಗ್ರಾಮದ ರಾಜೀವ ನಗರದ ನಿವಾಸಿಗಳಾದ ಪೈಂಟಿಂಗ್ ವೃತ್ತಿ ಮಾಡುತ್ತಿದ್ದ ಭರತ ಪೂಜಾರಿ (30) ಹಾಗೂ ಕೊರಿಯರ್ ಕೆಲಸ ಮಾಡುತ್ತಿದ್ದ ಹರ್ಶನ್ ಆಚಾರ್ಯ (23) ಮೃತಪಟ್ಟವರು.
ಭರತ್ ಪೂಜಾರಿ, ಹರ್ಷನ್ ಆಚಾರ್ಯ, ವಿತೇಶ್ ಶೆಟ್ಟಿ, ರಂಜಿತ್ ನಾಯಕ್, ಕೇತನ್ ನಾಯಕ್, ಸ್ಥಾನ ಮಾಡಲೆಂದು ಸುವರ್ಣ ನದಿಗೆ ನದಿಗೆ ತೆರಳಿದ್ದು, ನದಿಯಲ್ಲಿ ಈಜಾಟ ನಡೆಸುತ್ತಿದ್ದ ವೇಳೆ ನೀರಿನ ಬೃಹತ್ ಸುಳಿಗೆ ಸಿಲುಕಿದ ಭರತ ಹಾಗೂ ಹರ್ಷನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ವಾಹನಗಳ ಸಂಚಾರಕ್ಕೆ ದಾರಿ ವ್ಯವಸ್ಥೆ ಇಲ್ಲದೆ ಇರುವುದರಿಂದ ತಕ್ಷಣ ರಕ್ಷಣೆ ಮಾಡುವುದು ಅಸಾಧ್ಯವಾಗಿತ್ತು.
ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಬಂದ ಅಗ್ನಿಶಾಮಕ ದಳದ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದ ತಂಡ ಸ್ಥಳೀಯರ ಸಹಕಾರದೊಂದಿಗೆ ಮೂರು ಗಂಟೆಗೂ ಅಧಿಕಕಾಲ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ನದಿಯಿಂದ ಮೇಲಕ್ಕೆ ಎತ್ತಿದ್ದಾರೆ.
ಬಡ ಕುಟುಂಬದವರಾದ ಮೃತ ಭರತ್ ಪೂಜಾರಿ ಅವರು ತಂದೆ ತಾಯಿ ಜೊತೆಗೆ ವಾಸವಾಗಿದ್ದರು. ಅಕ್ಕನಿಗೆ ಮದುವೆಯಾಗಿದ್ದು ಕುಟುಂಬದ ಜವಾಬ್ದಾರಿ ಸಂಪೂರ್ಣ ಇವರ ಮೇಲೆ ಇದ್ದು ಭರತ್ ಅವರು ಹೊಸ ಮನೆ ನಿರ್ಮಿಸುತ್ತಿದ್ದು ಈಗಾಗಲೇ ಸ್ಲಾಬ್ ಹಂತದಲ್ಲಿದೆ ಎನ್ನಲಾಗಿದೆ.
ಹರ್ಚನ ಆಚಾರ್ಯ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾಗಿದ್ದು, ತಂದೆ ನಿಧನ ಹೊಂದಿದ್ದಾರೆ. ಅವರು ತಾಯಿ ಹಾಗೂ ಅಕ್ಕನ ಜೊತೆ ವಾಸವಾಗಿದ್ದರು.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

