• Home  
  • ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ 28ನೇ ವರ್ಷದ ಭಜನಾ ಕಮ್ಮಟ”ಕ್ಕೆ ಚಾಲನೆ (Dharmasthala: Launch of the 28th annual Bhajan workshop organized by the Sri Dharmasthala Manjunatheshwara Bhajana Parishat.)
- ಧಾರ್ಮಿಕ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ 28ನೇ ವರ್ಷದ ಭಜನಾ ಕಮ್ಮಟ”ಕ್ಕೆ ಚಾಲನೆ (Dharmasthala: Launch of the 28th annual Bhajan workshop organized by the Sri Dharmasthala Manjunatheshwara Bhajana Parishat.)

Share: ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ 28ನೇ ವರ್ಷದ ಭಜನಾ ಕಮ್ಮಟ”ಕ್ಕೆ ಚಾಲನೆ  ಭಜನಾ ಕಮ್ಮಟ ಉದ್ಘಾಟಿಸಿದ  ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ   (Dharmastala) ಧರ್ಮಸ್ಥಳ:  ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸೆ. 28 ರಿಂದ ಅ. 04 ರ ವರೆಗೆ ನಡೆಯಲಿರುವ “28ನೇ ವರ್ಷದ ಭಜನಾ ಕಮ್ಮಟದ ಉದ್ಘಾಟನಾ ಸಮಾರಂಭ”ಶ್ರೀ ಕ್ಷೇತ್ರದ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.   28 […]

  (Dharmastala) ಧರ್ಮಸ್ಥಳ:  ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಸೆ. 28 ರಿಂದ ಅ. 04 ರ ವರೆಗೆ ನಡೆಯಲಿರುವ “28ನೇ ವರ್ಷದ ಭಜನಾ ಕಮ್ಮಟದ ಉದ್ಘಾಟನಾ ಸಮಾರಂಭ”ಶ್ರೀ ಕ್ಷೇತ್ರದ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.

  28 ನೇ ವರ್ಷದ ಭಜನಾ ಕಮ್ಮಟವನ್ನು ಸುಬ್ರಹ್ಮಣ್ಯ ಜಗದ್ಗುರು ಶ್ರೀ ಮಲಾಚಾರ್ಯ ಮಹಾಸಂಸ್ಥಾನ ಶ್ರೀ ಸುಬ್ರಹ್ಮಣ್ಯ ಮಠದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

  ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, “ಹಿಂದೆ ಎಲ್ಲಾ ಒಂದು ಕಾರ್ಯಕ್ರಮಕ್ಕೆ ತೆರಳಿದಾಗ ಅಲ್ಲಿ ಬ್ಯಾಂಡ್ ಮಾತ್ರವೇ ಇತ್ತು. ಆದರೆ ಇಂದು ಭಜನಾರ್ಥಿಗಳು ನಮ್ಮನ್ನು ಸ್ವಾಗತಿಸಲು ಮುಂದೆ ಬರುತ್ತಾರೆ. ಇದು ಬಹಳ ಶ್ರೇಷ್ಠವಾದದ್ದು. ಕಮ್ಮಟದಲ್ಲಿ ಭಾಗವಹಿಸಿರುವ ಎಲ್ಲಾ ಶಿಬಿರಾರ್ಥಿಗಳ ಬದುಕು ಹಸನಾಗಲಿ ಎಂದು ಶುಭಹಾರೈಸಿದರು.

  ಉದ್ಘಾಟನೆ ನೆರವೇರಿಸಿ ಮಾತನಾಡಿದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದಂಗಳವರು ತಮ್ಮ ಆಶೀರ್ವಚನದಲ್ಲಿ, ಭಗವಂತ ಮನುಷ್ಯನಿಗೆ ಮಾತನಾಡಲು ನಾಲಗೆ, ನಗುವ ಮೊಗ, ಅನುಭವಿಸುವ ಭಾವನೆ ಎಲ್ಲವನ್ನೂ ಕೊಟ್ಟಿದ್ದಾನೆ. ಹೀಗಾಗಿ ಎಲ್ಲಾ ಕೊಟ್ಟ ಭಗವಂತನನ್ನು ನಾವು ಪ್ರತೀ ದಿನ ಸ್ಮರಿಸದೇ ಇದ್ದಲ್ಲಿ ನಮ್ಮ ಬದುಕು ಅಪೂರ್ಣವಾಗುತ್ತದೆ. ಶ್ರೀ ಕ್ಷೇತ್ರ ಆರಂಭಿಸಿರುವ ಈ ಭಜನಾ ಕಮ್ಮಟ ಅತ್ಯಂತ ಶ್ರೇಷ್ಠವಾಗಿದೆ. ಇಂತದನ್ನು ಸಮಾಜಕ್ಕೆ ಕೊಟ್ಟ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಎಷ್ಟು ಅಭಿನಂದನೆ ಸಲ್ಲಿಸಿದರೂ ಅದು ಪೂರ್ಣವಾಗದು ಎಂದರು.

 ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಉಪಸ್ಥಿತಿಯಿದ್ದ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ “ಶ್ರೀ ಧರ್ಮಸ್ಥಳ ಕ್ಷೇತ್ರದಲ್ಲಿ ನೀಡುವ ಈ ಭಜನಾ ಕಮ್ಮಟದಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು ಇಲ್ಲಿನ ಸಂಸ್ಕಾರವನ್ನು ತಮ್ಮ ಊರುಗಳಿಗೆ ಪಸರಿಸಿದಾಗ ಅದು ನಿಜವಾಗಿ ಮಂಜುನಾಥನ ಸೇವೆ ಆಗುತ್ತದೆ ಎಂದು ಆಶೀರ್ವಾದಗೈದರು.

  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ ಉಪಾಧ್ಯಕ್ಷರಾದ ಮಾತೃಶ್ರೀ ಡಾ. ಹೇಮಾವತಿ ವೀ. ಹೆಗ್ಗಡೆಯವರು, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

   ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ವಂದನಾರ್ಪಣೆಗೈದರು. ಶ್ರೀ ಧ.ಮಂ. ಪ್ರಾಥಮಿಕ ಶಾಲೆ ಪುದುವೆಟ್ಟು ಇದರ ಶಿಕ್ಷಕರಾದ ಶ್ರೀ ನಿಶಾಂತ್ ಇವರು ನಿರೂಪಣೆಗೈದರು.

 28ನೇ ವರ್ಷದ ಭಜನಾ ಕಮ್ಮಟದಲ್ಲಿ 200ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳಿಗೆ ರಾಜ್ಯದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.