ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸ್ವಚ್ಚ ಭಾರತ್ ಅಭಿಯಾನ
ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯಾಧಿಕಾರಿ ಜೈ ಶಂಕರ್
(Kinnigoli) ಕಿನ್ನಿಗೋಳಿ : ಕಿನ್ನಿಗೋಳಿ ಪಟ್ಟಣ ಪಂಚಾಯತಿಯ ಸಂಯೋಜನೆಯಲ್ಲಿ ಸ್ವಚ್ಚ ಭಾರತ್ ಅಭಿಯಾನ ನಡೆಯಿತು.
ಕಿನ್ನಿಗೋಳಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಜೈ ಶಂಕರ್ ಸ್ವಚ್ಚ ಭಾರತ್ ಅಭಿಯಾನಕ್ಕೆ ಚಾಲನೆ ನೀಡಿದರು.
ಅವರು ಮಾತನಾಡಿ, ಸ್ವಚ್ಚತೆ ಪ್ರತೀ ನಾಗರಿಕನ ಕರ್ತವ್ಯವಾಗಿದೆ. ಪರಿಸರವನ್ನು ಸ್ವಚ್ಚವಾಗಿಟ್ಟಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು. ಪ್ಲಾಸ್ಟಿಕ್ ವಸ್ತುಗಳನ್ನು ಆದಷ್ಟು ಕಡಿಮೆ ಉಪಯೋಗಿಸಿ ಪರಿಸರ ಸ್ನೇಹಿಯಾಗಿ ಬಾಳೋಣ ಎಂದರು.
ಕಟೀಲು ಶ್ರೀ ದುರ್ಗಾ ಸಂಜೀವಿನಿ ಆಸ್ಪತ್ರೆಯಿಂದ ಶ್ರೀ ಕಟೀಲು ದೇವಸ್ಥಾನದವರೆಗೆ ಕಟೀಲು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳೊಂದಿಗೆ ಕಾಲ್ನಡಿಗೆ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಕಟೀಲು ಬಸ್ ನಿಲ್ದಾಣದಲ್ಲಿ ಬೀದಿ ನಾಟಕ, ಕಿನ್ನಿಗೋಳಿ ಸಂತೆ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮತ್ತು ಉಚಿತ ಬಟ್ಟೆಯ ಕೈಚೀಲಗಳನ್ನು ವಿತರಿಸಲಾಯಿತು.
ಆರೋಗ್ಯಾಧಿಕಾರಿ ಬ್ರಹ್ಮಾನಂದ, ಕಂದಾಯ ನಿರೀಕ್ಷಕ ರಾಘವೇಂದ್ರ, ಇಂಜಿನಿಯರಿಂಗ್ ವಿಭಾಗದ ಪವನ್ ಕುಮಾರ್, ಸಿಬ್ಬಂದಿ ವರ್ಗ, ಪ್ರಮುಖರಾದ ಈಶ್ವರ್ ಕಟೀಲ್, ಪ್ರಕಾಶ್ ಆಚಾರ್ಯ, ಪ್ರೇಮ್ರಾಜ್ ಶೆಟ್ಟಿ, ಕಾರ್ಯಕ್ರಮದ ಸಹ ಸಂಯೋಜನೆಯ ಮೂಲ್ಕಿ ಸುಧಾಮ ಫೌಂಡೇಶನ್ನ ಶೈಲೇಶ್ ಕುಮಾರ್, ನವೀನ್ ರಾಜ್, ವೀರಣ್ಣ, ರಮೇಶ್, ಶಿಕ್ಷಣ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

