• Home  
  • ಕುಂದಾಪುರ: ಜಡ್ಕಲ್ ಗ್ರಾಮದ ಕಿಂಡಿ ಅಣೆಕಟ್ಟು ಕುಸಿದು ಬೀಳುವ ಸ್ಥಿತಿ, ಜನರಲ್ಲಿ ಆತಂಕ (Kundapura : Kindi dam in Jadkal village is in danger of collapsing, causing panic among the people)
- PROBLEMS

ಕುಂದಾಪುರ: ಜಡ್ಕಲ್ ಗ್ರಾಮದ ಕಿಂಡಿ ಅಣೆಕಟ್ಟು ಕುಸಿದು ಬೀಳುವ ಸ್ಥಿತಿ, ಜನರಲ್ಲಿ ಆತಂಕ (Kundapura : Kindi dam in Jadkal village is in danger of collapsing, causing panic among the people)

Share: ಕುಂದಾಪುರ: ಜಡ್ಕಲ್ ಗ್ರಾಮದ ಕಿಂಡಿ ಅಣೆಕಟ್ಟು ಕುಸಿದು ಬೀಳುವ ಸ್ಥಿತಿ, ಜನರಲ್ಲಿ ಆತಂಕ (Kundapura) ಕುಂದಾಪುರ :  ಕೊಲ್ಲೂರು ಅಭಯಾರಣ್ಯ ವ್ಯಾಪ್ತಿಯ ಜಡ್ಕಲ್ ಗ್ರಾಮದ ಹೊಳ್ಮಕ್ಕಿ- ಕಾನ್ಕಿ ಹಾಗೂ ಹರುಮನೆ ನಡುವೆ ಸಂಪರ್ಕ ಬೆಸೆಯುವ ಹಾಗೂ ನೀರಾವರಿ ಉದ್ದೇಶಕ್ಕೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅರಣ್ಯದಂಚಿನ ಜನರು ಜೀವ ಭಯದಲ್ಲಿ ಕಾಲ ಕಳೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.     ಹರುಮನೆ ಮತ್ತು ಹೊಳ್ಮಕ್ಕಿ ನಡುವೆ ಕಿರು ಹೊಳಗೆ 20 ವರ್ಷ ಹಿಂದೆ ಕಿಂಡಿ […]

(Kundapura) ಕುಂದಾಪುರ :  ಕೊಲ್ಲೂರು ಅಭಯಾರಣ್ಯ ವ್ಯಾಪ್ತಿಯ ಜಡ್ಕಲ್ ಗ್ರಾಮದ ಹೊಳ್ಮಕ್ಕಿ- ಕಾನ್ಕಿ ಹಾಗೂ ಹರುಮನೆ ನಡುವೆ ಸಂಪರ್ಕ ಬೆಸೆಯುವ ಹಾಗೂ ನೀರಾವರಿ ಉದ್ದೇಶಕ್ಕೆ ನಿರ್ಮಿಸಲಾದ ಕಿಂಡಿ ಅಣೆಕಟ್ಟು ಕುಸಿದು ಬೀಳುವ ಸ್ಥಿತಿಯಲ್ಲಿದ್ದು, ಅರಣ್ಯದಂಚಿನ ಜನರು ಜೀವ ಭಯದಲ್ಲಿ ಕಾಲ ಕಳೆಯುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

    ಹರುಮನೆ ಮತ್ತು ಹೊಳ್ಮಕ್ಕಿ ನಡುವೆ ಕಿರು ಹೊಳಗೆ 20 ವರ್ಷ ಹಿಂದೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಇದು ಎರಡು ಊರುಗಳ ನಡುವೆ ಸಂಪರ್ಕ ಕೊಂಡಿಯೂ ಆಗಿದೆ. ಅದರೀಗ ನೀರಿನ ಸೆಳೆತಕ್ಕೆ ಸಿಲುಕಿ ಕಿಂಡಿ ಅಣೆಕಟ್ಟು ಶಿಥಿಲಾವಸ್ಥೆಗೆ ತಲುಪಿದೆ.

  ಸೇತುವೆಯ ಎರಡೂ ಬದಿಯ ರಿವಿಟ್‌ಮೆಂಟ್ ಬೀಳುವ ಸ್ಥಿತಿಯಲ್ಲಿದೆ. ಅಣೆಕಟ್ಟು ಹಲಗೆ ಕಾಣದೆ ದಶಕವೇ ಕಳೆದಿದೆ. ಸೂಕ್ತ ನಿರ್ವಹಣೆಯಿಲ್ಲದೆ ಕಿಂಡಿ ಅಣೆಕಟ್ಟಿನ ಎರಡೂ ಬದಿಗಳಲ್ಲಿ ಜನರು ಸಂಪರ್ಕ ಬೆಸೆಯಲು ಮರದ ಕಾಲುಸಂಕ ಮಾಡಿಕೊಂಡಿದ್ದಾರೆ.

 ಹೊಳ್ಮಕ್ಕಿಯಿಂದ ಸೆಳ್ಕೋಡು ಶಾಲೆಗೆ ಹೋಗುವ ಮಕ್ಕಳು, ದೈನಂದಿನ ದುಡಿಮೆಗೆ ಹೋಗುವವರು ಇದೇ ಮಾರ್ಗವಾಗಿ ಪಯಣಿಸಬೇಕಿದೆ. ಇತ್ತೀಚಿಗೆ ಶಾಲಾ ಬಾಲಕನೊಬ್ಬ ಮರದ ಕಾಲು ಸಂಕದಿಂದ ಜಾರಿ ನೀರಿಗೆ ಬಿದ್ದಿದ್ದು ಸ್ಥಳೀಯರು ರಕ್ಷಿಸಿದ್ದರು. ಪ್ರತಿ ವರ್ಷ ಅಡಿಕೆ ಮರ ಕಡಿದು ಸೇತುವೆಯ ಎರಡು ಬದಿ ಸಂಕ ನಿರ್ಮಿಸಿ ದಾಟುವ ಸ್ಥಿತಿ ಇಲ್ಲಿಯದು.

    ಒಂದು ತಿಂಗಳಲ್ಲಿ ಮುಂಗಾರು ಮಳೆ ಎದುರಾಗುವುದರಿಂದ ಕಿಂಡಿ ಅಣೆಕಟ್ಟಿನ ಸ್ಥಿತಿ ನೆನೆದು ಜನರು ಕಂಗಾಲಾಗಿದ್ದಾರೆ.

 ಹೊಳ್ಮಕ್ಕಿ ,ಕಾನ್ಕಿ , ಹಯ್ಯಂಗಾರು ಪರಿಸರದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ಸಂಪರ್ಕಕ್ಕೆ ಇದೇ ಪ್ರಮುಖ ಹಾದಿ ಆಗಿರುವುದರಿಂದ ಮಳೆಗಾಲದಲ್ಲಿನ ಸ್ಥಿತಿ ನೆನೆದು ಕಂಗೆಟ್ಟಿದ್ದಾರೆ.

ಶಾಲೆಗೆ ಹೋಗುವ ಮಕ್ಕಳು, ಹಿರಿಜೀವಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಯಾವುದೇ ವಾಹನಗಳು ಬಾರದ  ಊರು ನಮ್ಮದು. ಕಿಂಡಿ ಅಣೆಕಟ್ಟನ್ನೇ ಸಂಪರ್ಕ ಮಾಡಿಕೊಂಡಿದ್ದೇವೆ. ಶಾಶ್ವತ ಸೇತುವೆ ನಿರ್ಮಾಣ ಬೇಡಿಕೆ ಇನ್ನೂ ಈಡೇರಿಲ್ಲ. ಕೊಚ್ಚಿ ಹೋಗಿರುವ ಎರಡು ಬದಿಯ ರಿವೀಟ್ ಮೆಂಟ್ ದುರಸ್ತಿಯೂ ನಡೆದಿಲ್ಲ. ಮಳೆಗಾಲ ಎಣಿಸಿದರೆ ಭಯವಾಗುತ್ತದೆ ಎಂದು ಗ್ರಾಮಸ್ಥರು ಅಲವತ್ತು ಕೊಂಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.