ಕುಂದಾಪುರ : ಪಟಾಕಿ ಅಂಗಡಿಗೆ ಬೆಂಕಿ – ಹಲವು ಅಂಗಡಿಗಳು ಸುಟ್ಟು ಕರಕಲು
ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನ ಮುಂಭಾಗದ ಅಂಗಡಿ
(Kundapura) ಕುಂದಾಪುರ: ಕುಂದಾಪುರದ ಹೆಸರಾಂತ ಪುಸ್ತಕ ಮಳಿಗೆ ಹಾಗೂ ಪಟಾಕಿ ಮಳಿಗೆಗಳನ್ನು ಹೊಂದಿದ್ದ ಕಟ್ಟಡಕ್ಕೆ ಬೆಂಕಿ ತಗುಲಿ ಅಪಾರ ನಷ್ಟ ಉಂಟಾದ ಘಟನೆ ಸೋಮವಾರ ಮುಂಜಾನೆ 3:30ರ ಸುಮಾರಿಗೆ ಘಟಿಸಿದೆ.
ಕುಂದಾಪುರ ಪೇಟೆಯ ವೆಂಕಟರಮಣ ದೇವಸ್ಥಾನದ ಎದುರು ರಥಬೀದಿಯಲ್ಲಿರುವ ಪುಸ್ತಕ ಮಳಿಗೆ ಹಾಗೂ ಪಟಾಕಿ ಅಂಗಡಿಗೆ ಆಕಸ್ಮಿಕ ಬೆಂಕಿ ತಗಲಿ ಸುಟ್ಟು ಭಸ್ಮವಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಕಟ್ಟಡದಲ್ಲಿದ್ದ ಮೂರು ಅಂಗಡಿಗಳೂ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.
ಕುಂದಾಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿನೀಡಿದ್ದಾರೆ.

