ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗೆ ಲಯನ್ಸ್ ಪುತ್ತೂರು ವತಿಯಿಂದ ಗ್ರಾಮೀಣ ಸಾಧಕ ಪುರಸ್ಕಾರ
ಸ್ವಾರ್ಥಗಳನ್ನು ತ್ಯಜಿಸಿದರೆ ಸಾರ್ಥಕತೆ ಖಚಿತ : ಕುಮಾರ್ ಪೆರ್ನಾಜೆ
(Putturu) ಪುತ್ತೂರು: ಲಯನ್ಸ್ ಕ್ಲಬ್ ಎಂದಾಗ ಇದು ಪಟ್ಟಣಕ್ಕೆ ಅಷ್ಟೇ ಸೀಮಿತ ಎಂದು ಭಾವಿಸುವ ಕಾಲವೊಂದು ಇತ್ತು ಅದನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಾಪಿಸಿದ ಕಾವು ಹೇಮನಾಥ ಶೆಟ್ಟಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೊಂದು ಸೇವಾ ಸಂಸ್ಥೆ ಎಲ್ಲರೂ ತಮ್ಮ ತಮ್ಮ ಸ್ವಾರ್ಥಗಳನ್ನು ತ್ಯಾಗ ಮಾಡಿದಾಗಲೇ ಇದಕ್ಕೊಂದು ಅರ್ಥ ಸಿಗುತ್ತದೆ ಎಂದು ಕುಮಾರ್ ಪೆರ್ನಾಜೆ ಹೇಳಿದರು.
ಕಾವು ಮುಖ್ಯರಸ್ತೆಯ ಸಮುದಾಯ ಭವನದಲ್ಲಿ ನಡೆದ ಅಂತರ್ ರಾಷ್ಟ್ರೀಯ ಲಯನ್ಸ್ ಜಿಲ್ಲೆ 317d , 7 ವಲಯ ಎರಡರ ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಪ್ರಾಂತ್ಯ ಅಧ್ಯಕ್ಷರ ಅಧಿಕೃತ ಬೇಟಿಯ ಸಂದರ್ಭದಲ್ಲಿ ಕಲಾ ನಿರ್ದೇಶಕರು, ಕಲಾಪೋಷಕ, ಜೇನು ಗಡ್ಡ ದಾರಿ ಬರಹಗಾರ ಕುಮಾರ್ ಪೆರ್ನಾಜೆ ಮತ್ತು ಸೌಮ್ಯ ದಂಪತಿಯನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಅಧ್ಯಕ್ಷರಾದ ದಿವ್ಯ ನಾಥ ಶೆಟ್ಟಿ, ಹಿರಿಯರಾದ ಮೋಹನ್ ಶಣೈ ಬಂಡಸಾಲೆ, ಪ್ರಾಂತ್ಯ ಅಧ್ಯಕ್ಷ ಎಂ ಆನಂದ ರೈ, ಲಯನ್ಸ್ ವಲಯ ಅಧ್ಯಕ್ಷ ಜಗನ್ನಾಥ ರೈ ಗುತ್ತು, ವಲಯ ರಾಯಭಾರಿ ರಮೇಶ್ ರೈ, ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಕೆ ಇಬ್ರಾಹಿಂ ಹಾಜಿ, ಕ್ಲಬ್ ಕೋಶಾಧಿಕಾರಿ ರಮೇಶ್ ಆಳ್ವ ಆಲೆಪ್ಪಾಡಿ ಗುತ್ತು, ಕಾರ್ಯದರ್ಶಿ ದೇವಣ್ಣ ರೈ ಮುದರ್ಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

