• Home  
  • ಕೆಎಂಎಫ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಬೆಳಪುವಿನಲ್ಲಿ ಅಭಿನಂದನೆ (Congratulations to KMF Director Belapu Deviprasad Shetty in “Belapu”)
- ಸನ್ಮಾನ, ಅಭಿನಂದನೆ

ಕೆಎಂಎಫ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಬೆಳಪುವಿನಲ್ಲಿ ಅಭಿನಂದನೆ (Congratulations to KMF Director Belapu Deviprasad Shetty in “Belapu”)

Share: ಕೆಎಂಎಫ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಬೆಳಪುವಿನಲ್ಲಿ ಅಭಿನಂದನೆ (Belapu) ಬೆಳಪು: ಕೆಎಂಎಫ್ ನಿರ್ದೇಶಕ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರಿಗೆ “ಬೆಳಪು” ಗ್ರಾಮ ಪಂಚಾಯತ್‌ನಲ್ಲಿ ಅಭಿನಂದನೆ ಸಲ್ಲಿಸಲಾಯಿತು. ಸನ್ಮಾನ ಸ್ವೀಕರಿಸಿದ ಬೆಳಪು ಗ್ರಾಪಂ ಅಧ್ಯಕ್ಷ ಡಾ. ದೇವಿ ಪ್ರಸಾದ್‌ ಶೆಟ್ಟಿ ಮಾತನಾಡಿ, ಕಳೆದ 10ನೇ ಅವಧಿಯಲ್ಲಿ 30 ವರ್ಷಗಳಿಂದ ಬೆಳಪು ಗ್ರಾಮದ ಅಧ್ಯಕ್ಷರಾಗಿ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಪಕ್ಷ ಭೇದ-ಭಾವ ಮಾಡದೆ ಎಲ್ಲಾ ಗ್ರಾಮಸ್ಥರ ಸಹಕಾರ ವಿಶ್ವಾಸ ಗಳಿಸಿದ್ದೇನೆಂಬ ಹೆಮ್ಮೆ ನನ್ನಲ್ಲಿದೆ.ನನ್ನ ಗ್ರಾಮದ ಯುವಕರಿಗಾಗಿ ಶಿಕ್ಷಣ-ಆರೋಗ್ಯ-ಕೈಗಾರಿಕೆ-ಉದ್ಯೋಗ-ವಸತಿಗೆ […]

(Belapu) ಬೆಳಪು: ಕೆಎಂಎಫ್ ನಿರ್ದೇಶಕ ಬೆಳಪು ಡಾ. ದೇವಿಪ್ರಸಾದ್ ಶೆಟ್ಟಿಯವರಿಗೆ “ಬೆಳಪು” ಗ್ರಾಮ ಪಂಚಾಯತ್‌ನಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ಸನ್ಮಾನ ಸ್ವೀಕರಿಸಿದ ಬೆಳಪು ಗ್ರಾಪಂ ಅಧ್ಯಕ್ಷ ಡಾ. ದೇವಿ ಪ್ರಸಾದ್‌ ಶೆಟ್ಟಿ ಮಾತನಾಡಿ, ಕಳೆದ 10ನೇ ಅವಧಿಯಲ್ಲಿ 30 ವರ್ಷಗಳಿಂದ ಬೆಳಪು ಗ್ರಾಮದ ಅಧ್ಯಕ್ಷರಾಗಿ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಪಕ್ಷ ಭೇದ-ಭಾವ ಮಾಡದೆ ಎಲ್ಲಾ ಗ್ರಾಮಸ್ಥರ ಸಹಕಾರ ವಿಶ್ವಾಸ ಗಳಿಸಿದ್ದೇನೆಂಬ ಹೆಮ್ಮೆ ನನ್ನಲ್ಲಿದೆ.ನನ್ನ ಗ್ರಾಮದ ಯುವಕರಿಗಾಗಿ ಶಿಕ್ಷಣ-ಆರೋಗ್ಯ-ಕೈಗಾರಿಕೆ-ಉದ್ಯೋಗ-ವಸತಿಗೆ ಆದ್ಯತೆ ನೀಡಿ ಯೋಜನೆ ರೂಪಿಸಿದ್ದೇವೆ.ನಾನು ಹೈನುಗಾರನಾಗಿ, ಬೆಳಪು ಹಾಲು ಉತ್ಪಾದಕರ ಸಂಘದ ಅಧ್ಯಕ್ಷನಾಗಿ, ಇದೀಗ ಕರ್ನಾಟಕ ಸರಕಾರದ ಪ್ರತಿಷ್ಥಿತ ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳ ಬೆಂಗಳೂರು ಇದರ ನಿರ್ದೇಶಕನಾಗಿ ಆಯ್ಕೆಯಾಗಿರುವುದರಿಂದ ರೈತರ ಹೈನುಗಾರರ ಸೇವೆಗೆ ಅವಕಾಶವಾಗಿದೆ. ನಾನು ಎಷ್ಟೇ ಎತ್ತರಕ್ಕೆ ಬೆಳೆದರೂ ಇದರ ಹಿಂದಿನ ಶಕ್ತಿ ಬೆಳಪು ಮತ್ತು ಇಲ್ಲಿನ ಗ್ರಾಮಸ್ಥರು, ಎಂದದರು

 ಈ ಸಂದರ್ಭ ಬೆಳಪು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ  ಡಿ’ಸೋಜ, ಉಪಾಧ್ಯಕ್ಷೆ ಶೋಭಾ ಭಟ್,ಸದಸ್ಯರಾದ ಶರತ್ ಕುಮಾರ್, ಸುಲೇಮಾನ್,ಪ್ರಕಾಶ್ ರಾವ್, ಸೌಮ್ಯ ಸುರೇಂದ್ರ ಪೂಜಾರಿ, ರೂಪ ಆಚಾರ್ಯ, ಅನಿತಾ ಆನಂದ, ಉಷಾ ವಾಸು, ನಫೀಸಾ ಭಾನು ಮತ್ತು ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.