ಕೋಟದ ಪಂಚವರ್ಣ ಸಂಸ್ಥೆಯ ಸದಸ್ಯರಿಂದ ಕೇದರನಾಥದಲ್ಲಿ ಸ್ವಚ್ಛತಾ ಕಾರ್ಯ
ಕೋಟ: ಸದಾ ಕ್ರೀಯಾಶೀಲ ಸಂಸ್ಥೆಯಾಗಿರುವ ಪರಿಸರ ಕಾಳಜಿ ಕಾರ್ಯಕ್ರಮಗಳಿಂದ ಮನೆಮಾತಾಗಿರುವ ಕೋಟ ಪಂಚವರ್ಣ ಯುವಕ ಮಂಡಲ ಇದರ ಸದಸ್ಯರು ಕೇದನಾಥ ಸೇರಿದಂತೆ ಉತ್ತರ ಭಾರತ ವಿವಿಧ ಧಾರ್ಮಿಕ ಕ್ಷೇತ್ರಗಳ ಸಂದರ್ಶನದ ಸಂದರ್ಭದಲ್ಲಿ ಪರಿಸರ ಜಾಗೃತಿ ಮೆರೆದಿದ್ದಾರೆ.
ಕೋಟದ ಪಂಚವರ್ಣ ಸಂಸ್ಥೆಯ ಗೌರವ ಸದಸ್ಯ ಕೋಟ ದಿನೇಶ್ ಗಾಣಿಗ, ಸದಸ್ಯ ಸಂತೋಷ್ ಸಾಲಿಯಾನ್, ಧನುಷ್ಯ ಗಾಣಿಗ, ಕೇದರನಾಥ ದೇವಸ್ಥಾನದ ಸಮೀಪ ಸುತ್ತಮುತ್ತಲಿನ ಪರಿಸರದಲ್ಲಿ ಬಿದ್ದಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸುವುದರ ಮೂಲಕ ಅಲ್ಲಿನ ಯಾತ್ರಾರ್ಥಿಗಳಿಗೆ ಸ್ವಚ್ಛತಾ ಅಭಿಯಾನ ಪರಿಕಲ್ಪನೆ ಬಿತ್ತಿದ್ದರು.
ಈಗಾಗಲೇ ಪಂಚವರ್ಣ ಸಂಸ್ಥೆ ತನ್ನ ಸ್ಥಳೀಯ ಸಂಘಸಂಸ್ಥೆಗಳ ನೆರವಿನೊಂದಿಗೆ ೧೭೩ ವಾರಗಳ ಪರಿಸರಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಗಮನಾರ್ಹವಾಗಿದೆ.

