• Home  
  • ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸನಾತನ ಸಂಸ್ಕಾರ ಕೇಂದ್ರದಲ್ಲಿ “ಗಮಕ ಕಾರ್ತಿಕ” (“Gamaka Karthika” at the Sri Abhirama Dhama Sanatana Samskara Kendra in Gundibailu)
- ಸನ್ಮಾನ, ಅಭಿನಂದನೆ - ಸಾಂಸ್ಕೃತಿಕ

ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸನಾತನ ಸಂಸ್ಕಾರ ಕೇಂದ್ರದಲ್ಲಿ “ಗಮಕ ಕಾರ್ತಿಕ” (“Gamaka Karthika” at the Sri Abhirama Dhama Sanatana Samskara Kendra in Gundibailu)

Share: ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸನಾತನ ಸಂಸ್ಕಾರ ಕೇಂದ್ರದಲ್ಲಿ “ಗಮಕ ಕಾರ್ತಿಕ”  ಸತೀಶ ಕುಮಾರ್ ಕೆಮ್ಮಣ್ಣು ಗಮಕ ಕಲೆಯ ಆರಾಧಕ :  ಪ್ರೊ. ಎಂ .ಎಲ್. ಸಾಮಗ (Udupi) ಉಡುಪಿ: ನಿರಂತರವಾಗಿ  ಗಮಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕನ್ನಡ ಕಾವ್ಯಗಳನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತಿರುವ ಸತೀಶ ಕುಮಾರ್ ಕೆಮ್ಮಣ್ಣು ಇವರು ನಿಜ ಅರ್ಥದಲ್ಲಿ ಗಮಕ ಕಲೆಯ ಆರಾಧಕರಾಗಿದ್ದಾರೆ ಎಂದು ಪ್ರೊ. ಎಂ .ಎಲ್. ಸಾಮಗ ಇವರು ಹೇಳಿದರು.   ಅವರು ಗುಂಡಿಬೈಲಿನ ಶ್ರೀ ಅಭಿರಾಮ […]

(Udupi) ಉಡುಪಿ: ನಿರಂತರವಾಗಿ  ಗಮಕ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕನ್ನಡ ಕಾವ್ಯಗಳನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ಕಾರ್ಯವನ್ನು ಮಾಡುತ್ತಿರುವ ಸತೀಶ ಕುಮಾರ್ ಕೆಮ್ಮಣ್ಣು ಇವರು ನಿಜ ಅರ್ಥದಲ್ಲಿ ಗಮಕ ಕಲೆಯ ಆರಾಧಕರಾಗಿದ್ದಾರೆ ಎಂದು ಪ್ರೊ. ಎಂ .ಎಲ್. ಸಾಮಗ ಇವರು ಹೇಳಿದರು.

  ಅವರು ಗುಂಡಿಬೈಲಿನ ಶ್ರೀ ಅಭಿರಾಮ ಧಾಮ ಸನಾತನ ಸಂಸ್ಕಾರ ಕೇಂದ್ರ ಮತ್ತು ಉಡುಪಿ ಜಿಲ್ಲಾ ಗಮಕಕಲಾ ಅಭಿಮಾನಿ ಬಳಗ ಇವರು ಆಯೋಜಿಸಿದ್ದ ಗಮಕ ಕಾರ್ತಿಕ ಕಾರ್ಯಕ್ರಮದಲ್ಲಿ ಗಮಕ ಕಲಾಆರಾಧಕ ಎಂಬ ಪ್ರಶಸ್ತಿ ಪುರಸ್ಕೃತರಾದ ಸತೀಶ್ ಕುಮಾರ್ ಕೆಮ್ಮಣ್ಣು ಇವರನ್ನು ಅಭಿನಂದಿಸಿ ಮಾತನಾಡುತ್ತಿದ್ದರು.

 ಕಾವ್ಯವು ಅಮಂಗಲದ ನಿವಾರಣೆಗಾಗಿ ಎಂಬ ಆಶಯದೊಂದಿಗೆ  ನಡೆದ ಗಮಕ ಕಾರ್ತಿಕ – 2026 –  ಕಾರ್ಯಕ್ರಮದಲ್ಲಿ  ಸತೀಶ್ ಕುಮಾರ್ ಕೆಮ್ಮಣ್ಣು ದಂಪತಿಗಳಿಗೆ ಅಭಿನಂದನೆ ಕಾರ್ಯಕ್ರಮ ಹಾಗೂ ಗಮಕ ವಿದ್ಯಾರ್ಥಿಗಳಿಗೆ ಗಮಕ ಪರೀಕ್ಷೆಯ  ಪ್ರಮಾಣ ಪತ್ರ ಪ್ರದಾನ ಸಮಾರಂಭವು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಲತ್ತಾಯ ಡಾ. ಸುದರ್ಶನ ಭಾರತೀಯ ವಹಿಸಿದ್ದರು.

  ಹಿರಿಯ ಗಮಕ ಕಲಾವಿದೆ ಯಾಮಿನಿ ಭಟ್ ಮಾತನಾಡಿದರು.    

  ಕಾರ್ಯಕ್ರಮವನ್ನು ಡಾ. ರಾಘವೇಂದ್ರ ರಾವ್ ಸಂಯೋಜಿಸಿದರು. ವಿದ್ವಾನ್ ನಟರಾಜ ಹೆಚ್ .ಎನ್. ಪ್ರಾರ್ಥಿಸಿದರು. ಕೃಷ್ಣಕುಮಾರ್ ಸ್ವಾಗತಿಸಿದರು. ಡಾ . ಪ್ರಫುಲ್ಲ ಜಿ. ಭಟ್ ಕಾರ್ಯಕ್ರಮ ನಿರೂಪಿಸಿದರು.

  ಸಭಾ ಕಾರ್ಯಕ್ರಮದ ಅನಂತರ ನಡೆದ ಗಮಕ ವಾಚನ ವ್ಯಾಖ್ಯಾನ ಕಾರ್ಯಕ್ರಮದಲ್ಲಿ ಕುಮಾರವ್ಯಾಸ ಭಾರತದ ಕರ್ಣಪರ್ವ ಕಥಾಭಾಗವನ್ನು  ಮಂಜುಳಾ ಸುಬ್ರಹ್ಮಣ್ಯ ಭಟ್ ಮಂಚಿಯವರು ವಾಚನ ಮಾಡಿದರೆ, ಪ್ರೊ. ಎಮ್. ಎಲ್. ಸಾಮಗತವರು ವ್ಯಾಖ್ಯಾನಿಸಿದರು.

  ಗಮಕ ಕಲಾಭಿಮಾನಿಗಳು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.