• Home  
  • ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ
- ದೇಶ-ವಿದೇಶ

ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ

Share: ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ  ಕಳೆದ ಜುಲೈ 14ರಂದು ಚಂದ್ರನತ್ತ ಚಿಮ್ಮಿದ ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯಲ್ಲಿ ಹಲವು ಕಂಪೆನಿಗಳು ಇಸ್ರೋ ಜೊತೆ ಕೈಜೋಡಿಸಿವೆ. ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಹೊತ್ತಿಗೆ ಕಂಪೆನಿಗಳ ಶೇರುಗಳ ಮೌಲ್ಯ ಹೆಚ್ಚುವ ಸಾಧ್ಯತೆ ಇದೆ. ನೌಕೆಯನ್ನು ಸರಿಯಾದ ಕಕ್ಷೆಗೆ ಸೇರಿಸುವಲ್ಲಿ ನೆರವಾಗುವ ತಂತ್ರಾಂಶವನ್ನು ಸಿದ್ದಪಡಿಸಿದ ಟಾಟಾ ಎಲೆಕ್ಸಿ ಕಂಪೆನಿಯ ಪ್ರತಿ ಶೇರಿಗೆ ಉಡ್ಡಯನದ ದಿನವಾದ ಜುಲೈ 14ರಂದು 7,600 ರೂ. ಇತ್ತು. ಅದು ಸದ್ಯ […]

ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ

 ಕಳೆದ ಜುಲೈ 14ರಂದು ಚಂದ್ರನತ್ತ ಚಿಮ್ಮಿದ ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯಲ್ಲಿ ಹಲವು ಕಂಪೆನಿಗಳು ಇಸ್ರೋ ಜೊತೆ ಕೈಜೋಡಿಸಿವೆ. ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಹೊತ್ತಿಗೆ ಕಂಪೆನಿಗಳ ಶೇರುಗಳ ಮೌಲ್ಯ ಹೆಚ್ಚುವ ಸಾಧ್ಯತೆ ಇದೆ.

ನೌಕೆಯನ್ನು ಸರಿಯಾದ ಕಕ್ಷೆಗೆ ಸೇರಿಸುವಲ್ಲಿ ನೆರವಾಗುವ ತಂತ್ರಾಂಶವನ್ನು ಸಿದ್ದಪಡಿಸಿದ ಟಾಟಾ ಎಲೆಕ್ಸಿ ಕಂಪೆನಿಯ ಪ್ರತಿ ಶೇರಿಗೆ ಉಡ್ಡಯನದ ದಿನವಾದ ಜುಲೈ 14ರಂದು 7,600 ರೂ. ಇತ್ತು. ಅದು ಸದ್ಯ 7360 ರೂ.ಗೆ ಇಳಿದಿದೆ.

 ಲ್ಯಾಂಡರ್ ಅಭಿವೃದ್ದಿಪಡಿಸಿದ ಟಾಟಾ ಅಡ್ವಾನ್ಸ್ಡ್ ಸಿಸ್ಟಂನ ಶೇರು ಶೇ. 7ರ ವೃದ್ಧಿ ದರದಲ್ಲಿ ಸದ್ಯ 14.95 ರೂ.ಗೆ ಲಭ್ಯ. ಇನ್ನು ಶ್ರೀಹರಿಕೋಟಾದಲ್ಲಿರುವ ಉಡ್ಡಯನ ಕೇಂದ್ರದಲ್ಲಿನ ಲ್ಯಾಂಚ್ ಪ್ಯಾಡ್ ನಿರ್ಮಿಸಿದ ಎಲ್ ಆ್ಯಂಡ್ ಟಿ ಕಂಪೆನಿಯ ಶೇರು 2,557 ರೂ. ಮೌಲ್ಯ ಹೊಂದಿದೆ. ಜುಲೈ 14ರಂದು 2,460 ರೂ. ಇತ್ತು.

 ಮಾರ್ಕ್-3 ರಾಕೆಟ್ ನ ಎಂಜಿನ್ ಮತ್ತು ಕೋರ್ ಪಂಪ್ ಗಳನ್ನು ಸಿದ್ಧಪಡಿಸಿದ ಎಂಟಿಎಆರ್ ಟೆಕ್ ನ ಶೇರು ಕೂಡ ಏರಿಕೆಯಾಗಿ 2,124 ರೂ.ಗೆ ತಲುಪಿದೆ. ಲ್ಯಾಂಡರ್ ಮತ್ತು ರೂವರ್ ಹೊತ್ತೊಯ್ಯುವ ಪೇಲೋಡ್ ಸಿದ್ದಪಡಿಸಿದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಶೇರು 125 ರೂ. ಆಸುಪಾಸಿನಲ್ಲಿದ್ದು ಬೆಳವಣಿಗೆಯ ಹಾದಿಯಲ್ಲಿದೆ.

 ಲ್ಯಾಂಡರ್ ಸಿದ್ಧಪಡಿಸುವುದು ಮತ್ತು ಇತರ ಮೆಕ್ಯಾನಿಕಲ್ ಭಾಗಗಳನ್ನು ಸಜ್ಜುಗೊಳಿಸುವಲ್ಲಿ ನೆರವಾದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಶೇರಿನ ಬೆಲೆ 3,873 ರೂ. ಇದೆ. ಜು. 14ರಂದು 3,840 ರೂ. ಇತ್ತು. ಎಲೆಕ್ಟ್ರಾನಿಕ್ ಭಾಗಗಳನ್ನು ಅಭಿವೃದ್ದಿಪಡಿಸಿದ ಸೆಂಟಮ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನ ಶೇರು ಬೆಲೆ 1,396 ರೂ.ಗೆ ತಲುಪಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.