ಚಲಿಸುವ ಬೈಕಿನಲ್ಲಿ ಯುವಕನ ರೋಮಾನ್ಸ್ : ವೀಡಿಯೋ ವೈರಲ್
ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಲ್ಲಿ ಯುವಕನು ತನ್ನ ಮಡಿಲಲ್ಲಿ ಯುವತಿಯನ್ನು ಕೂರಿಸಿಕೊಂಡು ಬೈಕ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ನಂತರ ಜನರು ಇದನ್ನು ಪ್ರೀತಿಯ ಪರಾಕಾಷ್ಠೆ ಎಂದು ಕರೆಯುತ್ತಿದ್ದಾರೆ.
ಲಕ್ನೋ ಪೊಲೀಸರಿಂದ ಕ್ರಮಕ್ಕೆ ಒತ್ತಾಯಿಸಲಾಗುತ್ತಿದ್ದು, ಈ ವಿಡಿಯೋ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಲಖನೌ ಅಲಿಗಂಜ್ ಪ್ರದೇಶದ ನಿರಾಲ ನಗರದ ಸೇತುವೆ ಪ್ರದೇಶ ಎಂದು ಹೇಳಲಾದ ವಿಡಿಯೋ ವೈರಲ್ ಆಗುತ್ತಿದೆ.
ಐದು ಸೆಕೆಂಡುಗಳ ಈ ವಿಡಿಯೋದಲ್ಲಿ ಯುವಕ ಮತ್ತು ಹುಡುಗಿ ಚಲಿಸುವ ಬುಲೆಟ್ ನಲ್ಲಿ ರೋಮ್ಯಾನ್ಸ್ ಮಾಡುತ್ತಿರುವುದು ಕಂಡು ಬಂದಿದೆ.

