ಛಾಯಾಗ್ರಾಹಕರು ತನ್ನ ದುಖ: ಮರೆತು ಇನ್ನೊಬ್ಬರನ್ನು ನಗಿಸುವವರು : ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಎಸ್ಕೆಪಿಎ ಕಾಪು ವಲಯದ 2025- 27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ
(Kaup) ಕಾಪು: ಛಾಯಾಗ್ರಾಹಕರು ತಮ್ಮ ದುಖ: ದುಮ್ಮಾನಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ, ಉತ್ತಮ ಛಾಯಾಚಿತ್ರ ಮೂಡುವಂತೆ ಪ್ರಯತ್ನಿಸುವ
ಶ್ರಮ ಜೀವಿಗಳು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಕಾಪು ಕೆ-ವನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ನ ಕಾಪು ವಲಯದ 2025- 27ನೇ ಸಾಲಿನ ನೂತನ ಅಧ್ಯಕ್ಷ ಸಂತೋಷ್ ನಾಯ್ಕ್ ಕಾಪು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹೊತ್ತಲ್ಲದ ಹೊತ್ತಿನಲ್ಲಿ ಸಂಚರಿಸಿ, ತಮ್ಮ ಆರೋಗ್ಯ ಮತ್ತು ಕುಟುಂಬವನ್ನು ಲೆಕ್ಕಿಸಿದೆ ಕೆಲಸ ಮಾಡುವ ಕಾಪು ವಲಯದ ಎಲ್ಲಾ ಸಂಘದ ಸದಸ್ಯ ಛಾಯಾಗ್ರಾಹಕರಿಗೆ ತನ್ನ ವತಿಯಿಂದ ಜೀವವಿಮೆ ಯೋಜನೆಗೆ ಮುನ್ನಡಿ ಇಡುತ್ತೇನೆ ಎಂದೂ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಶ್ವಾಸನೆ ನೀಡಿದರು.
ಕಾಪು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಛಾಯಾಗ್ರಾಹರಿಗೆ ಜೀವವಿಮೆಯ ಅಗತ್ಯದಷ್ಟೇ ಸಂಘಟನೆಗೆ ಸ್ವಂತ ಕಟ್ಟಡವೂ ಬೇಕು. ಅದಕ್ಕೆ ಬೇಕಾದ ಜಾಗವನ್ನು ಹೊಂದಿಸಿಕೊಂಡು ಕಟ್ಟಡ ನಿರ್ಮಾಣ ಮಾಡುವುದಾದರೆ, ಪ್ರಥಮ ದೇಣಿಗೆಯಾಗಿ ನಾನು 1 ಲಕ್ಷ ರೂ. ನೀಡುತ್ತೇನೆ ಎಂದರು.
ಎಸ್ಕೆಪಿಎ ಕೇಂದ್ರ ಸಮಿತಿಯ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಅಧ್ಯಕ್ಷತೆ ವಹಿಸಿದ್ದರು.
ಅವರು, ನೂತನ ಅಧ್ಯಕ್ಷ ಸಂತೋಷ್ ನಾಯ್ಕ್ ಕಾಪು ಮತ್ತು ಪದಾಧಿಕಾರಿಗಳಿಗೆ ಶುಭ ಕೋರಿ, ಮುಂದಿನ ಎರಡು ವರ್ಷಗಳಲ್ಲಿ ಕಾಪು ವಲಯ ಉತ್ತಮ ಸಮಾಜ ಮುಖಿ ಕೆಲಸನ್ನು ಮಾಡುವಂತಾಗಲಿ. ಎಲ್ಲಾ ಕಾರ್ಯಕ್ರಮಗಳಿಗೂ ಜಿಲ್ಲಾ ಸಮಿತಿಯ ಬೆಂಬಲ ಇದೆ ಎಂದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ಕಾಪು ವಲಯದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸನ್ಮಾನ ಮತ್ತು ಅಶಕ್ತಿಗೆ ಸಹಾಯ ಧನ ನೀಡಲಾಯಿತು.
ಸದಸ್ಯರ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸದಸ್ಯರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.
ವೇದಿಕೆಯಲ್ಲಿ ಹೋಟೆಲ್ ಉದ್ಯಮಿ ಪ್ರಭಾಕರ ಪೂಜಾರಿ ಕಾಪು, ಫೊಟೋ ಪ್ಯಾಲೆಸ್ ನ ರವಿರಾಜ್ ಕಿದಿಯೂರು, ಎಸ್ ಕೆಪಿಎ ಸಂಚಾಲಕ ಗೋಪಾಲ್ ಸುಳ್ಯ, ಎಸ್ಕೆಪಿಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಎಸ್ಕೆಪಿಎ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್. ಬಂಟ್ವಾಳ, ಎಸ್ಕೆಪಿಎ
ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಉಪಾಧ್ಯಕ್ಷ ದತ್ತಾತ್ರೇಯ ಕಾರ್ಕಳ, ಕಾಪು ವಲಯದ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ ಉಪಸ್ಥಿತರಿದ್ದರು.
ನಿರ್ಗಮನ ಅಧ್ಯಕ್ಷ ಸಚಿನ್ ಉಚ್ಚಿಲ, ಕೋಶಾಧಿಕಾರಿ ಕಿರಣ್ ಕಾಪು ಉಪಸ್ಥಿತರಿದ್ದರು.
ನಿರ್ಗಮನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.

