ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಗ್ರಹಣ ಶಾಂತಿ ಸಂಪನ್ನ
ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ನಡೆದ ಗ್ರಹಣ ಶಾಂತಿ
(Udupi) ಉಡುಪಿ: ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಕೇತು ಗ್ರಸ್ತ ಚಂದ್ರ ಗ್ರಹಣದ ಪ್ರಯುಕ್ತ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಗ್ರಹಣ ಶಾಂತಿಯನ್ನು ಸಾಮೂಹಿಕವಾಗಿ ಹಮ್ಮಿಕೊಳ್ಳಲಾಯಿತು.
ಗಣೇಶ್ ಸರಳಾಯ ಅವರ ನೇತೃತ್ವದಲ್ಲಿ ವಿಜಯ ಭಟ್ ವಿಜಯೇಂದ್ರ ಮೇಲಂಟ ಹಾಗೂ ಅನಿಶ್ ಆಚಾರ್ಯ ಅವರ ಸಹಕಾರದೊಂದಿಗೆ ಗ್ರಹಣ ಮಧ್ಯಕಾಲದಿಂದ ಶಾಂತಿಗೆ ಚಾಲನೆ ನೀಡಲಾಯಿತು.
ಗ್ರಹಣ ಸ್ಪರ್ಶಕಾಲದಿಂದಲೇ ಕ್ಷೇತ್ರದಲ್ಲಿ ಲಲಿತಾ ಸಹಸ್ರನಾಮ ಪಾರಾಯಣ ಪಠಣೆ, ಶ್ರೀ ಲಕ್ಷ್ಮಿ ಶೋಭಾನೆ, ವಿಷ್ಣು ಸಹಸ್ರನಾಮ ಪಾರಾಯಣ ಪಠಣೆ, ಹಾಗೂ ಭಜನೆಯಿಂದ ಭಜನೆ ಸಂಕೀರ್ತನೆ ನಿರಂತರವಾಗಿ ನೆರವೇರಿತು. ಸಾಮೂಹಿಕವಾಗಿ ಸಂಪನ್ನಗೊಂಡ ಈ ಗ್ರಹಣ ಶಾಂತಿಯಲ್ಲಿ ಭಕ್ತಾಧಿಗಳು ಉತ್ತಮ ಸಹಕಾರ ನೀಡಿದ್ದು, ಭಕ್ತಿ ಶ್ರದ್ಧತೆಯಿಂದ ಶಾಂತಿಯಲ್ಲಿ ಪಾಲ್ಗೊಂಡು ಗ್ರಹಣದೋಷದಿಂದ ವಿಮುಕ್ತರಾದರು ಎಂದು ಕ್ಷೇತ್ರದ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ತಿಳಿಸಿದ್ದಾ

