• Home  
  • ಜವನೆರ್ ಉಚ್ಚಿಲ ಸಂಸ್ಥೆಯಿಂದ ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಟೆಲಿವಿಜನ್ ಕೊಡುಗೆ (Gift of Television to Uchila Anganwadi Center by Javaner Uchila Organization)
- help

ಜವನೆರ್ ಉಚ್ಚಿಲ ಸಂಸ್ಥೆಯಿಂದ ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಟೆಲಿವಿಜನ್ ಕೊಡುಗೆ (Gift of Television to Uchila Anganwadi Center by Javaner Uchila Organization)

Share: ಜವನೆರ್ ಉಚ್ಚಿಲ ಸಂಸ್ಥೆಯಿಂದ ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಟೆಲಿವಿಜನ್ ಕೊಡುಗೆ ಜವನೆರ್ ಉಚ್ಚಿಲ ಸಂಸ್ಥೆಯ ಅಧ್ಯಕ್ಷ ಉಮೇಶ್ ದೇಜಾಡಿ ಮತ್ತು ಸದಸ್ಯರಿಂದ ಕೊಡುಗೆ (Uchila) ಉಚ್ಚಿಲ: ಉಚ್ಚಿಲದ ಸಾಮಾಜಿಕ, ಸಾಂಸ್ಕೃತಿಕ  ಸಂಸ್ಥೆ ಜವನೆರ್‌ ಉಚ್ಚಿಲ ಸಂಸ್ಥೆಯು ೩೯ನೇ ವಾರ್ಷಿಕೋತ್ಸವ ಆಚರಿಸಿದ್ದು, ಅದರಿಂದ ಉಳಿಕೆ ಹಣದಲ್ಲಿ ಉಚ್ಚಿಲ ಗ್ರಾಮ ಪಂಚಾಯತ್‌ ಕಛೇರಿ ಬಳಿ ಕಾರ್ಯನಿರ್ವಹಿಸುವ ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ಕಲಿಕೆಯ ಉಪಯೋಗಕ್ಕಾಗಿ ಬುಧವಾರ ಟೆಲಿವಿಜನ್‌ ಕೊಡುಗೆಯಾಗಿ ನೀಡಿದೆ.  ಬಹುದಿನದ ಬೇಡಿಕೆಯನ್ನು ಜವನೆರ್‌ ಉಚ್ಚಿಲ ಸಂಸ್ಥೆ ಈಡೇರಿಸಿದಕ್ಕಾಗಿ […]

(Uchila) ಉಚ್ಚಿಲ: ಉಚ್ಚಿಲದ ಸಾಮಾಜಿಕ, ಸಾಂಸ್ಕೃತಿಕ  ಸಂಸ್ಥೆ ಜವನೆರ್‌ ಉಚ್ಚಿಲ ಸಂಸ್ಥೆಯು ೩೯ನೇ ವಾರ್ಷಿಕೋತ್ಸವ ಆಚರಿಸಿದ್ದು, ಅದರಿಂದ ಉಳಿಕೆ ಹಣದಲ್ಲಿ ಉಚ್ಚಿಲ ಗ್ರಾಮ ಪಂಚಾಯತ್‌ ಕಛೇರಿ ಬಳಿ ಕಾರ್ಯನಿರ್ವಹಿಸುವ ಉಚ್ಚಿಲ ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ಕಲಿಕೆಯ ಉಪಯೋಗಕ್ಕಾಗಿ ಬುಧವಾರ ಟೆಲಿವಿಜನ್‌ ಕೊಡುಗೆಯಾಗಿ ನೀಡಿದೆ.

 ಬಹುದಿನದ ಬೇಡಿಕೆಯನ್ನು ಜವನೆರ್‌ ಉಚ್ಚಿಲ ಸಂಸ್ಥೆ ಈಡೇರಿಸಿದಕ್ಕಾಗಿ ಉಚ್ಚಿಲ ಅಂಗನವಾಡಿ ಶಿಕ್ಷಕಿ ಶ್ರೀಮತಿ ಉಷಾ ಸತೀಶ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು.

  ಈ ಸಂದರ್ಭ ಜವನೆರ್ ಉಚ್ಚಿಲ ಸಂಸ್ಥೆಯ ಅಧ್ಯಕ್ಷ ಉಮೇಶ್ ದೇಜಾಡಿ, ಕಾರ್ಯದರ್ಶಿ ಪ್ರಶಾಂತ್ ಕೋಟ್ಯಾನ್ ಉಚ್ಚಿಲ, ಕೋಶಾಧಿಕಾರಿ ದಿನೇಶ್ ಸುವರ್ಣ ಉಚ್ಚಿಲ, ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ ಉಚ್ಚಿಲ, ಶರತ್ ಉಚ್ಚಿಲರವರು ಉಚ್ಚಿಲ ಅಂಗನವಾಡಿ ಶಿಕ್ಷಕಿ ಶ್ರೀಮತಿ ಉಷಾ ಸತೀಶ್, ಸಹಾಯಕಿ ಶ್ರೀಮತಿ ರೋಹಿಣಿ ರವಿಕಿರಣ್ ಮತ್ತು ಮಕ್ಕಳಿಗೆ ಹಸ್ತಾಂತರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.