• Home  
  • ಜೆಸಿಐಯಿಂದ ಸಮಾಜಮುಖಿ ಕಾರ್ಯಕ್ಕೆ ಚಾಲನೆ : ಜೇಸಿಐ ರಾಷ್ಟ್ರೀಯ ಅಧ್ಯಕ್ಷ, ನ್ಯಾಯವಾದಿ ಜೆ ಎಫ್ ಎಸ್ ರೆಖೇಶ್ ಶರ್ಮ (JCI drive toward’s social work: JCI National president Advocate JFS Rekhesh sharma)
- social service - ವಿಡಿಯೋ

ಜೆಸಿಐಯಿಂದ ಸಮಾಜಮುಖಿ ಕಾರ್ಯಕ್ಕೆ ಚಾಲನೆ : ಜೇಸಿಐ ರಾಷ್ಟ್ರೀಯ ಅಧ್ಯಕ್ಷ, ನ್ಯಾಯವಾದಿ ಜೆ ಎಫ್ ಎಸ್ ರೆಖೇಶ್ ಶರ್ಮ (JCI drive toward’s social work: JCI National president Advocate JFS Rekhesh sharma)

Share: ಜೆಸಿಐಯಿಂದ ಸಮಾಜಮುಖಿ ಕಾರ್ಯಕ್ಕೆ ಚಾಲನೆ : ಜೇಸಿಐ ರಾಷ್ಟ್ರೀಯ ಅಧ್ಯಕ್ಷ, ನ್ಯಾಯವಾದಿ ಜೆ ಎಫ್ ಎಸ್ ರೆಖೇಶ್ ಶರ್ಮ ಕಾಪುವಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೇಸಿಐ ರಾಷ್ಟ್ರೀಯ ಅಧ್ಯಕ್ಷ (Kaup) ಕಾಪು: ಜಾಗತಿಕವಾಗಿ 115 ದೇಶದಲ್ಲಿ ಯುವ ನಾಯಕರು, ಉದ್ಯಮಿಗಳ ಜೊತೆಗೆ 5 ಲಕ್ಷ ಸಕ್ರಿಯ ಸದಸ್ಯರನ್ನು ಹೊಂದಿರುವ ಜೇಸಿಐ ಸಂಸ್ಥೆ, ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ವಿವಿಧ ಝೋನ್ ಗಳ  ಘಟಕಗಳ ಭೇಟಿಯ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಚಾಲನೆ ಕಾರ್ಯ ನೀಡಲಾಗುತ್ತಿದೆ ಎಂದು ಜೇಸಿಐ ಭಾರತದ ರಾಷ್ಟ್ರೀಯ […]

ಜೆಸಿಐಯಿಂದ ಸಮಾಜಮುಖಿ ಕಾರ್ಯಕ್ಕೆ ಚಾಲನೆ : ಜೇಸಿಐ ರಾಷ್ಟ್ರೀಯ ಅಧ್ಯಕ್ಷ, ನ್ಯಾಯವಾದಿ ಜೆ ಎಫ್ ಎಸ್ ರೆಖೇಶ್ ಶರ್ಮ

ಕಾಪುವಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜೇಸಿಐ ರಾಷ್ಟ್ರೀಯ ಅಧ್ಯಕ್ಷ

(Kaup) ಕಾಪು: ಜಾಗತಿಕವಾಗಿ 115 ದೇಶದಲ್ಲಿ ಯುವ ನಾಯಕರು, ಉದ್ಯಮಿಗಳ ಜೊತೆಗೆ 5 ಲಕ್ಷ ಸಕ್ರಿಯ ಸದಸ್ಯರನ್ನು ಹೊಂದಿರುವ ಜೇಸಿಐ ಸಂಸ್ಥೆ, ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ವಿವಿಧ ಝೋನ್ ಗಳ  ಘಟಕಗಳ ಭೇಟಿಯ ಜೊತೆಗೆ ಸಮಾಜಮುಖಿ ಕಾರ್ಯಗಳಿಗೆ ಚಾಲನೆ ಕಾರ್ಯ ನೀಡಲಾಗುತ್ತಿದೆ ಎಂದು ಜೇಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ, ನ್ಯಾಯವಾದಿ ಜೆ ಎಫ್ ಎಸ್ ರೆಖೇಶ್ ಶರ್ಮ ಹೇಳಿದರು.

ಅವರು ಗುರುವಾರ ಸಂಜೆ ಜೇಸಿಐ‌ ಕಾಪು ಭೇಟಿಯ ಸಂದರ್ಭ ಕಾಪುವಿನ ಮಂದಾರ ಹೊಟೇಲ್ ಸಭಾಂಗಣದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ದ.ಕ. ಉಡುಪಿ, ಉ.ಕ ದ ವಿವಿಧ ಘಟಕಗಳು ಸೇರಿದ ಝೋನ್ 15 ರಲ್ಲಿ ಯುವಕರನ್ನು ಗಮನದಲ್ಲಿರಿಸಿಕೊಂಡು ವಾಯ್ಸ್ ಆಫ್ ಯುತ್ ಕಾರ್ಯಕ್ರಮದ ಮೂಲಕ ಯುವಕರನ್ನು ಭೇಟಿಯಾಗಿ ಅವರ ಮುಂದಿನ ಸವಾಲು, ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುವುದು. ಗ್ರಾಮೀಣ ಭಾಗದ ಆಯ್ದ ವಿದ್ಯಾರ್ಥಿಗಳಿಗೆ ರೂ.3 ಕೋಟಿ ಮೌಲ್ಯದ ವಿದ್ಯಾರ್ಥಿವೇತನ, ನಾಯಕತ್ವ ‌ಶಿಬಿರಗಳ ಆಯೋಜನೆ ಮಾಡಲಾಗುತ್ತಿದೆ.

ಸಾಮಾಜಿಕ ಕಾರ್ಯದ ಪ್ರಯುಕ್ತ ಜೆಸಿಐ ಸಂಸ್ಥೆಯಿಂದ ಕೇರಳದ ವಯನಾಡು ದುರಂತಕ್ಕೆ 1 ಕೋಟಿ ಸಹಾಯಧನ ನೀಡಲಾಗಿದೆ ಎಂದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಜೆಸಿಐ  15ರ ವಲಯಾಧ್ಯಕ್ಷ ಗಿರೀಶ್ ಎಸ್ ಪಿ, ಕಾಪು ಜೆಸಿಐ ಅಧ್ಯಕ್ಷೆ ಸುಖಲಾಕ್ಷಿ ಬಂಗೇರ, ಸನತ್ ಕುಮಾರ್, ಸೌಮ್ಯ ರಾಕೇಶ್, ಸತೀಶ್ ಪೂಜಾರಿ, ಅಭಿಲಾಷ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.