ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರ ಗೃಹ ಕಚೇರಿ ಮೇಲಿನ ದಾಳಿ ತಪ್ಪು : ಡೇವಿಡ್ ಡಿಸೋಜ ಪ್ರಿನ್ಸ್ ಪಾಯಿಂಟ್
ಆ.24 ರ ಟೋಲ್ ಪ್ರತಿಭಟನೆಗೆ ಸಂಪೂರ್ಣ ಬೆಂಬಲ
(Mudarangadi) ಮುದರಂಗಡಿ: ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರ ಗೃಹ ಕಚೇರಿಯ ಮೇಲಿನ ಕಲ್ಲು ತೂರಾಟಕ್ಕೆ ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಮುದರಂಗಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಡೇವಿಡ್ ಡಿಸೋಜ ಪ್ರಿನ್ಸ್ ಪಾಯಿಂಟ್ರವರು ಖೇದ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ಹಕ್ಕು ಸಹಜ. ಆದರೆ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರ ಮನೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣವು ಅತ್ಯಂತ ಹೇಯ ಕೃತ್ಯವಾಗಿದೆ.
ಈ ಕೃತ್ಯದ ಹಿಂದಿರುವ ಎಲ್ಲಾ ಆರೋಪಿಗಳನ್ನು ಬಂಧಿಸಿ ಸೂಕ್ತ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವಂತೆ ಡೇವಿಡ್ ಡಿಸೋಜ ಪೋಲಿಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಆ.24 ರ ಟೋಲ್ ಪ್ರತಿಭಟನೆಗೆ ಸಂಪೂರ್ಣ ಬೆಂಬಲ : ಆಗಸ್ಟ್ ೨೪ರಂದು ಪಡುಬಿದ್ರಿಯ ಕಂಚಿನಡ್ಕದಲ್ಲಿ ನಡೆಯಲಿರುವ ಟೋಲ್ಗೇಟ್ ವಿರೋಧಿ ಪ್ರತಿಭಟನೆಗೆ ಮುದರಂಗಡಿ ಗ್ರಾಮೀಣ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದೂ ಡೇವಿಡ್ ಡಿಸೋಜ ಪ್ರಿನ್ಸ್ ಪಾಯಿಂಟ್ ತಿಳಿಸಿದ್ದಾರೆ.

