ಜ. 28: ಆಪ್ತ ಗೆಳೆಯರು, ಹೆಜಮಾಡಿಯಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆಯ ಉದ್ಘಾಟನೆ
ಹೆಜಮಾಡಿ: ಆಪ್ತ ಗೆಳೆಯರ ಬಳಗವು ಸುಮಾರು ರೂ.10 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ನೂತನ ಉಚಿತ ಆ್ಯಂಬುಲೆನ್ಸ್ ಸೇವೆಯು ಜ. 28ರಂದು ನಂದಿಕೂರಿನ ಕೈಗಾರಿಕಾ ಪ್ರದೇಶದ ಪ್ಲಾಟ್ ನಂಬ್ರ 41ಬಿ ಯಲ್ಲಿ ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳಲಿರುವುದಾಗಿ ಕಾಪು ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಜರಗಿದ ಸುದ್ದಿಗೋಷ್ಟಿಯಲ್ಲಿ ಪಾವ್ಲ್ ರಾಲ್ಫಿ ಡಿಕೋಸ್ತ (Rolfi d’casta)ತಿಳಿಸಿದರು.
24ಗಂಟೆಗಳಲ್ಲೂ ಹೆಜಮಾಡಿ ಹಾಗೂ ನಡ್ಸಾಲು ಗ್ರಾಮಗಳ ವ್ಯಾಪ್ತಿಯ ಬಡವರು, ಕಷ್ಟ, ಕಾರ್ಪಣ್ಯಗಳಿಗೆ ಒಳಗಾದವರ ಅಪಘಾತ ಅಥವಾ ಅನಾರೋಗ್ಯದ ಸಂದರ್ಭಗಳಲ್ಲಿ 9494685454ಗೆ ಕರೆಯೊಂದನ್ನು ರವಾನಿಸಿದಲ್ಲಿ ಕೂಡಲೇ ತಮ್ಮ ಸಹಾಯಕ್ಕೆ ಈ ಆ್ಯಂಬುಲೆನ್ಸ್ ಸೇವೆಯು ಉಚಿತವಾಗಿ ಲಭ್ಯವಿರುವುದಾಗಿಯೂ, ಮುಂದಿನ ದಿನಗಳಲ್ಲಿ ಜನತೆಗೆ ತುರ್ತು ಸಂದರ್ಭಗಳಲ್ಲಿ ಬೇಕಾಗುವ ಶೀಥಲೀಕರಣ ಪೆಟ್ಟಿಗೆಯನ್ನೂ ಒದಗಿಸುವ ಯೋಜನೆಯೂ ತಮ್ಮಲ್ಲಿರುವುದಾಗಿ ರಾಲ್ಫಿ ಅವರು ತಿಳಿಸಿದ್ದಾರೆ.
ಜ. 28ರ ಉದ್ಘಾಟನಾ ಸಮಾರಂಭಕ್ಕೆ ಕಟೀಲು ಅನಂತ ಆಸ್ರಣ್ಣ (Ananth Asranna), ಕಟೀಲು ಹರಿನಾರಾಯಣ ಆಸ್ರಣ್ಣ(Harinarayana Asranna), ರೆ. ಫಾ. ಸಿಲ್ವೆಸ್ಟರ್ ಡಿಕೋಸ್ತ(REV Fr Silvester D’Casta), ಹಾಜಿ ಅಶ್ರಫ್ ಸಖಾಫಿ (Haji Ashraf Sakhafi), ರೆ. ಫಾ ಕ್ಸೇವಿಯರ್ ಗೋಮ್ಸ್, ಫಾ. ಮಾರ್ಸೆಲ್ ಸಲ್ದಾನ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶಶಿಕಲಾ ಹಾಗೂ ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್ ಉಪಸ್ಥಿತರಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ರಾಲ್ಫಿಯವರೊಂದಿಗೆ ಮಾಜಿ ಗ್ರಾ. ಪಂ. ಅಧ್ಯಕ್ಷರಾದ ಸುಭಾಸ್ ಜಿ. ಸಾಲ್ಯಾನ್ ಮತ್ತು ಪಾಂಡುರಂಗ ಸಿ.ಕರ್ಕೇರ, ಯುವ ನಾಯಕ ಸುಧೀರ್ ಕರ್ಕೇರ, ನಿವೃತ್ತ ಎಲ್‌ಐಸಿ ಉದ್ಯೋಗಿ ರಾಜು ಹೆಜಮಾಡಿ, ಗೆಳೆಯರ ಬಳಗದ ಕಾರ್ಯದರ್ಶಿ ಸನಾ ಇಬ್ರಾಹಿಂ ಹೆಜಮಾಡಿ, ಪಡುಬಿದ್ರಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹಾಗೂ ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ರೇಶ್ಮಾ ಮೆಂಡನ್ ಉಪಸ್ಥಿತರಿದ್ದರು.

