“ಟೀಂ ಮಾರುತಿ ಮೂಳೂರು” ಸಂಸ್ಥೆಯಿಂದ ಅಶಕ್ತರಿಗೆ ದೀಪಾವಳಿ ಹಬ್ಬದ ಕೊಡುಗೆ
26 ಕೆಜಿ ಅಕ್ಕಿ , ಬೆಲ್ಲ , ಬೇಳೆ ಸಹಿತ ನಿತ್ಯೋಪಯೋಗಿ ವಸ್ತುಗಳ ಕೊಡುಗೆ
(Muluru) ಮೂಳೂರು : ದೀಪಾವಳಿ ಹಬ್ಬವು ಎಲ್ಲರ ಮನೆ ಮನಗಳಲ್ಲಿ ಬೆಳಗಲಿ ಎಂಬ ಆಶಯದಂತೆ ಮೂಳೂರಿನ ಯುವಕರ ʼಟೀಮ್ ಮಾರುತಿ ಮೂಳೂರುʼ ತಂಡದ ಸದಸ್ಯರು ಆಯ್ದ 8 ಕುಟುಂಬಗಳಿಗೆ ದಿನಬಳಕೆಯ 26 ಕೆಜಿ ಅಕ್ಕಿ , ಬೆಲ್ಲ, ಬೇಳೆ ಇತ್ಯಾದಿ ನಿತ್ಯೋಪಯೋಗಿ ವಸ್ತುಗಳನ್ನು ನೀಡಿ ಕೃತಾರ್ಥತೆ ಮೆರೆದಿದ್ದಾರೆ.
ಈ ಸಂದರ್ಭ ಸಂಸ್ಥೆಯ ಅಧ್ಯಕ್ಷ ಪ್ರಹಾರ್, ಪ್ರಧಾನ ಕಾರ್ಯದರ್ಶಿ ಗಗನ್ ಮೆಂಡನ್, ಕೋಶಾಧಿಕಾರಿ ಹವ್ಯಾಸ್ ಪೂಜಾರಿ, ಸದಸ್ಯರಾದ ಪ್ರಶಾಂತ್ ಸುವರ್ಣ, ಧೀರೇಶ್ ಡಿ ಪೂಜಾರಿ ಮೂಳೂರು, ಜೀವನ್ ಪೂಜಾರಿ, ಅವಿಸ್ ಅಂಚನ್, ಆಕಾಶ್ ಪೂಜಾರಿ, ವಿಕಾಸ್ ಪ್ರಜೇಶ್ ಉಪಸ್ಥಿತರಿದ್ದರು.
ಟೀಮ್ ಮಾರುತಿ ಮೂಳೂರು ತಂಡದ ಈ ಕಾರೈ ಶ್ಲಾಘನೆಗೆ ಪಾತ್ರವಾಗಿದೆ.

