• Home  
  • ಬ್ರಹ್ಮಾವರ ನಾಲ್ಕೂರಿನಲ್ಲಿ ಚಿರತೆಗೆ ಬೈಕ್‌ ಡಿಕ್ಕಿ, ಚಿರತೆ ಸಾವು, ಬೈಕ್‌ ಸವಾರ ಗಂಭೀರ (Bike collides with leopard in Brahmavara Nalkuru, leopard dies, biker in critical condition)
- ಅಪಘಾತ

ಬ್ರಹ್ಮಾವರ ನಾಲ್ಕೂರಿನಲ್ಲಿ ಚಿರತೆಗೆ ಬೈಕ್‌ ಡಿಕ್ಕಿ, ಚಿರತೆ ಸಾವು, ಬೈಕ್‌ ಸವಾರ ಗಂಭೀರ (Bike collides with leopard in Brahmavara Nalkuru, leopard dies, biker in critical condition)

Share: ಬ್ರಹ್ಮಾವರ ನಾಲ್ಕೂರಿನಲ್ಲಿ ಚಿರತೆಗೆ ಬೈಕ್‌ ಡಿಕ್ಕಿ, ಚಿರತೆ ಸಾವು, ಬೈಕ್‌ ಸವಾರ ಗಂಭೀರ  ಗಾಯಗೊಂಡ ಬೈಕ್ ಸವಾರ ನಂಚಾರ್ ಭಾಸ್ಕರ್ ಶೆಟ್ಟಿ   (Brahmavara) ಬ್ರಹ್ಮಾವರ: ಚಿರತೆಯೊಂದು ಚಲಿಸುತ್ತಿದ್ದ ಬೈಕ್​ಗೆ ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು, ಚಿರತೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂಚಾರ್ ನಲ್ಲಿ ಸಂಭವಿಸಿದೆ.   ಗಂಭೀರ ಗಾಯಗೊಂಡ ಬೈಕ್ ಸವಾರ ನಂಚಾರ್ ಭಾಸ್ಕರ್ ಶೆಟ್ಟಿ […]

(Brahmavara) ಬ್ರಹ್ಮಾವರ: ಚಿರತೆಯೊಂದು ಚಲಿಸುತ್ತಿದ್ದ ಬೈಕ್​ಗೆ ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು, ಚಿರತೆ ಸ್ಥಳದಲ್ಲೇ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಂಚಾರ್ ನಲ್ಲಿ ಸಂಭವಿಸಿದೆ.

  ಗಂಭೀರ ಗಾಯಗೊಂಡ ಬೈಕ್ ಸವಾರ ನಂಚಾರ್ ಭಾಸ್ಕರ್ ಶೆಟ್ಟಿ ಎಂದು ಗುರುತಿಸಲಾಗಿದೆ.

   ಭಾಸ್ಕರ್ ಶೆಟ್ಟಿ ರಾತ್ರಿ ತನ್ನ ಬೈಕ್ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಒಮ್ಮೆಲೇ ಚಿರತೆಯೊಂದು ಅಡ್ಡ ಬಂದ ಪರಿಣಾಮ ಸವಾರ ನಿಯಂತ್ರಣ ತಪ್ಪಿ ಚಿರತೆಗೆ ಡಿಕ್ಕಿ ಹೊಡೆದು ಬೈಕ್ ಪಲ್ಟಿ ಯಾಗಿದೆ.

    ಡಿಕ್ಕಿಯ ರಭಸಕ್ಕೆ ಚಿರತೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರ ಗಂಭೀರ ಗಾಯ ಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.   

   ಹೆಬ್ರಿ ಅರಣ್ಯಇಲಾಖೆಯವರು ಸ್ಥಳಕ್ಕಾಗಮಿಸಿ ಮೃತಪಟ್ಟ ಚಿರತೆಯ ಪಂಚನಾಮೆ ನಡೆಸಿ ಅತ್ಯ ಸಂಸ್ಕಾರ ಮಾಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.