• Home  
  • ಡಿ.14 : ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ (December 14: Vitla Swara Sinchana Music School Tenth Anniversary Awards Ceremony)
- ಮನೋರಂಜನೆ

ಡಿ.14 : ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ (December 14: Vitla Swara Sinchana Music School Tenth Anniversary Awards Ceremony)

Share: ಡಿ.14 : ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ  (Vithla) ವಿಟ್ಲ : ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆಯು 10 ವರ್ಷಗಳನ್ನು ಪೂರೈಸಿ ದಶ ಸಂಭ್ರಮದಲ್ಲಿದ್ದು, ಡಿಸೆಂಬರ್ 14ರಂದು ವಿಟ್ಲದ ಜೆ ಎಲ್ ಆಡಿಟೋರಿಯಂ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದಶ ಸಂಭ್ರಮವು ವಿಜ್ರಂಭಣೆಯಿಂದ  ನಡೆಯಲಿದೆ.   ಬೆಳಗ್ಗೆ ವಿದ್ವಾನ್  ಕೋಡಂಪಳ್ಳಿ ಗೋಪ ಕುಮಾರ್ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.   ಸಮಾರಂಭದ ಅಧ್ಯಕ್ಷತೆಯನ್ನು ಸ್ವರ ಸಿಂಚನ ಸಂಗೀತ […]

(Vithla) ವಿಟ್ಲ : ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆಯು 10 ವರ್ಷಗಳನ್ನು ಪೂರೈಸಿ ದಶ ಸಂಭ್ರಮದಲ್ಲಿದ್ದು, ಡಿಸೆಂಬರ್ 14ರಂದು ವಿಟ್ಲದ ಜೆ ಎಲ್ ಆಡಿಟೋರಿಯಂ ಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದಶ ಸಂಭ್ರಮವು ವಿಜ್ರಂಭಣೆಯಿಂದ  ನಡೆಯಲಿದೆ.

  ಬೆಳಗ್ಗೆ ವಿದ್ವಾನ್  ಕೋಡಂಪಳ್ಳಿ ಗೋಪ ಕುಮಾರ್ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

  ಸಮಾರಂಭದ ಅಧ್ಯಕ್ಷತೆಯನ್ನು ಸ್ವರ ಸಿಂಚನ ಸಂಗೀತ ಶಾಲೆ ದಶಮಾನೋತ್ಸವ ಸಮಿತಿಯ ಅಧ್ಯಕ್ಷ ರವಿಶಂಕರ್ ಸಿ ಮೂಡಂಬೈಲು ವಹಿಸಲಿದ್ದಾರೆ.

     ವಿಶೇಷ ಆಹ್ವಾನಿತರಾಗಿ ವಿಟ್ಲ ಅರಮನೆಯ ಕೆ ಕೃಷ್ಣಯ್ಯ, ವ್ಯವಸ್ಥಾಪಕರು ಶ್ರೀ ಭಗವತಿ ದೇವಸ್ಥಾನ ವಿಟ್ಲ, ಕೇಶವ್ ಆರ್ ವಿ, ರಾಜ್ಯಪ್ರಶಸ್ತಿ ಪುರಸ್ಕೃತ ಕಲಾ ಪೋಷಕ ಕಲಾ ನಿರ್ದೇಶಕರಾದ ಕುಮಾರ ಪೆರ್ನಾಜೆ ಭಾಗವಹಿಸಲಿದ್ದಾರೆ.

     ಪಿಟೀಲು ವಾದಕ  ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರರವರಿಗೆ, ಹಿರಿಯ ಯಕ್ಷಗಾನ ಭಾಗವತರು ಹಾಗೂ ಗುರುಗಳಾಧ ಎಸ್ ಎಲ್ ಗೋವಿಂದ ನಾಯಕ್ ಪಾಲೆಚ್ಚಾರು ರವರಿಗೆ “ಸ್ವರ ಸಿಂಚನ” ಸನ್ಮಾನ ನಡೆಯಲಿದೆ.

 ಸ್ವರ ಸಿಂಚನ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವಯಲಿನ್ ಕಚೇರಿ ನಡೆಯಲಿದೆ.

ಕು. ಸಿಂಚನ ಲಕ್ಷ್ಮಿ ಕೊಡಂದೂರು (ಸಹ ಶಿಕ್ಷಕಿ) ಇವರಿಂದ ಸಂಗೀತ ಹಾಗೂ ವಯಲಿನ್ ಜುಗಲ್ ಬಂದಿ ನಡೆಯಲಿದೆ.

  ಪಕ್ಕ ವಾದ್ಯದಲ್ಲಿ ಮೃದಂಗವಾದಕರಾಗಿ ವಿದ್ವಾನ್ ಡಾ. ವಿ. ಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್, ಪಿಟೀಲು ವಾದಕರಾಗಿ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್, ಘಟಂ ವಾದಕರಾಗಿ ವಿದ್ವಾನ್ ಆಲುವ ರಾಜೇಶ್ ಕ್ಯಾಲಿಕಟ್ ಮೃದಂಗ, ಕ್ಶಿತೀಶ ರಾಮ ಕೆ ಎಸ್ ಸುಳ್ಯ, ಪಿಟೀಲು ಅಭಿರಾಮ್ ಕೋಡಂಪಳ್ಳಿ ಸಾಥ್‌ ನೀಡಲಿದ್ದಾರೆ.

ಪದ್ಮರಾಜ ಚಾರ್ವಾಕ  ನಿರೂಪಿಸಲಿದ್ದಾರೆ.

  ಸ್ವರಸಿಂಚನ ಕಲಾತಂಡದ ಮುಖ್ಯ ಶಿಕ್ಷಕಿ ಸವಿತಾ ಕೊಡಂದೂರು, ರಘುರಾಮ ಶಾಸ್ತ್ರಿ  ಕೊಡಂದೂರು, ಕುಮಾರಿ ಸಿಂಚನ ಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ವರಸಿಂಚನ ಸಂಗೀತ ಶಾಲೆಗೆ ದೊಡ್ಡ ಶಕ್ತಿ ಪೆರ್ನಾಜೆ ಕುಟುಂಬ

 ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕೋಡಂದೂರು ಮನೆಯ ಸವಿತಾ ಕೊಡಂದೂರುರವರು ಬಾಲ್ಯದಲ್ಲೇ ಸಂಗೀತ ಅಭ್ಯಾಸ ಮಾಡಿದ್ದರು. ಮದುವೆ, ಮಕ್ಕಳು ಆದನಂತರ ಹೆಚ್ಚಿನ ಮುತುವರ್ಜಿಯಲ್ಲಿ ಕಲಿತು ಇಂದು ವೈವಿಧ್ಯಮಯ ಕಾರ್ಯಕ್ರಮಗಳ ಜೊತೆ ನಾಡಿನದ್ಯಂತ ಖ್ಯಾತಿ ಪಡೆದಿದ್ದಾರೆ.

ಕುಮಾರ್  ಪೆರ್ನಾಜೆ ಇವರ ಸಾರಥ್ಯದಲ್ಲಿದಲ್ಲಿ ಸ್ವರ ಸಿಂಚನ ಹೆಸರನ್ನು ಇಡಲಾಗಿದೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನೀಡಿದ್ದು ಹೆಗ್ಗಳಿಕೆ.  ಕರ್ನೂರು ಸತೀಶ್ ರವರ ಪ್ರಯೋಜಕತ್ವದಲ್ಲಿ ಕಾರ್ಯಕ್ರಮ ನೀಡಿದ್ದು ವಿಶೇಷ ಹಾಗೆ ಕಾವು ,ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಐವರ್ನಾಡು, ಪರ್ಪುಂಜ, ಕನಕಮಜಲು ಕೋಟೆ ಮುಂತಾದ ಕಡೆಗಳಲ್ಲಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

    ಸ್ಯಾಕ್ಸೋಫೋನ್ ಸಂಗೀತ ಪ್ರದರ್ಶನ ಕರ್ನಾಟಕದಲ್ಲೇ  ಮೊತ್ತಮೊದಲಿಗೆ ಈಶ್ವರಮಂಗಳದಲ್ಲಿ, ಧರ್ಮಸ್ಥಳದ ಲಕ್ಷ ದೀಪೋತ್ಸವದಲ್ಲಿ ಪ್ರದರ್ಶಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.