• Home  
  • ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಸಾಧ್ಯ : ಗುರ್ಮೆ (If people’s representatives do their work honestly, prosperity and harmony can be maintained: Gurme)
- ರಾಜಕೀಯ

ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಸಾಧ್ಯ : ಗುರ್ಮೆ (If people’s representatives do their work honestly, prosperity and harmony can be maintained: Gurme)

Share: ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಸಾಧ್ಯ : ಗುರ್ಮೆ   ಕಾಪು ತಾಲೂಕು ಮಟ್ಟದ ಜನಸ್ಪಂಧನ ಸಭೆ (Kaup) ಕಾಪು: ಕಾಪುವಿನ ಅಭಿವೃದ್ಧಿಗೆ ಅಧಿಕಾರಿಗಳ ಹಾಗೂ ಜನರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೇ ಕುಟುಂಬದಂತೆ  ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಆಗಲಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.    ಕಾಪು ತಾಲೂಕು ಆಡಳಿತ ಸೌಧದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂಧನ […]

(Kaup) ಕಾಪು: ಕಾಪುವಿನ ಅಭಿವೃದ್ಧಿಗೆ ಅಧಿಕಾರಿಗಳ ಹಾಗೂ ಜನರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಒಂದೇ ಕುಟುಂಬದಂತೆ  ಕೆಲಸ ಮಾಡಿದಲ್ಲಿ ಸಮೃದ್ಧ ಕಾಪು, ಸಾಮರಸ್ಯದ ಕಾಪು ಆಗಲಿದೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

   ಕಾಪು ತಾಲೂಕು ಆಡಳಿತ ಸೌಧದಲ್ಲಿ ನಡೆದ ತಾಲೂಕು ಮಟ್ಟದ ಜನಸ್ಪಂಧನ ಸಭೆಯಲ್ಲಿ ಅವರು ಮಾತನಾಡಿದರು.

    ಇಂದಿನ ಸಭೆ ಫಲಪ್ರದವಾಗಿದೆ. ಕೆಲವೊಂದು ಸಮಸ್ಯೆಗಳ ಪರಿಹಾರಕ್ಕೆ ಸರಕಾರದ ಮಟ್ಟದಲ್ಲಿ ಚರ್ಚೆ ಆಗಬೇಕಾಗಿದೆ. ಮುಂದಿನ ಅಧಿವೇಶನದಲ್ಲಿ ಸಮಸ್ಯೆಗಳನ್ನು ಸರಕದ ಗಮನಕ್ಕೆ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

    ರಾಷ್ಟ್ರೀಯ ಹೆದ್ದಾರಿ ಸಮಸ್ಯೆ: ಉಚ್ಚಿಲ ಬಡಾ ಗ್ರಾಮದಲ್ಲಿದಲ್ಲಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ನಿರಂತರ ಅಪಘಾತಗಳು ಸಂಬಂಧಿಸಿದ್ದು, ಇಲ್ಲಿನ ಸಮಸ್ಯೆ ಪರಿಹರಿಸುವಂತೆ ಉಚ್ಚಿಲ ನಾಗರಿಕ ಹೋರಾಟ ಸಮಿತಿ ಮನವಿ ಸಲ್ಲಿಸಿತು.

    ಅಲ್ಲದೆ ರಾಷ್ಟ್ರೀಯ ಹೆದ್ದಾರಿ ೬೬ರ ಉಚ್ಚಿಲ ಸಹಿತ ತೆಂಕ, ಪಡುಬಿದ್ರಿ, ಕಟಪಾಡಿ, ಕಾಪುವಿನಲ್ಲಿ ಅವೈಜ್ಞಾನಿಕ ಕಾರ್ಯಕ್ರಮಗಳಿಂದ ಅಪಘಾತಗಳು ಹೆಚ್ಚುತಿದ್ದು, ಈ ಸಮಸ್ಯೆಗಳ ಬಗ್ಗೆ ಜನರು ದೂರಿದರು. ಸರ್ವೀಸ್ ರಸ್ತೆ ಹಾಗೂ ಹೆದ್ದಾರಿ ಸಮಸ್ಯೆಗಳ ಪರಿಹರಿಸಲು ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿ ಸಂಸದರ ಉಪಸ್ಥಿತಿಯಲ್ಲಿ ಸಭೆಯನ್ನು ಕರೆಯಲಾಗುವುದು ಎಂದು ಶಾಸಕರು ತಿಳಿಸಿದರು.

     ಜಲಜೀವನ್ ಯೋಜನೆಯಿಂದ ಅಲ್ಲಲ್ಲಿ ಪೈಪ್‌ಲೈನ್‌ಗಳನ್ನು ಸಮರ್ಪಕವಾಗಿ ಅಳವಡಿಸದೆ ಇರುವುದರಿಂದ ಸಮಸ್ಯೆಗಳು ಉಂಟಾಗಿರುವ ಬಗ್ಗೆಯೂ ವ್ಯಾಪಕ ದೂರುಗಳು ಕೇಳಿಬಂತು.

  ಆಡಳಿತ ಸೌಧದ ಮೊದಲ ಮಹಡಿಯಲ್ಲಿ ಜನಸ್ಪಂಧನ ನಡೆದಿದ್ದು, ವಯೋವೃದ್ಧರಿಗೆ ಹಾಗೂ ವಿಶೇಷ ಚೇತನರಿಗೆ ಮೇಲಂತಸ್ತಿಗೆ ಬರಲು ಅನಾನುಕೂಲವಾಗುತಿದ್ದು, ಇಲ್ಲಿನ ಲಿಫ್ಟ್ ಸಡಿಪಡಿಸುವಂತೆ ಒತ್ತಾಯಿಸಿದರು.

   ತಾಲೂಕು ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವಾ, ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಮುಖ್ಯಾಧಿಕಾರಿ ಶಶಿಕಲಾ ಉಪಸ್ಥಿತರಿದ್ದರು.

 ಗ್ರಾಮಾಡಳಿತಾಧಿಕಾರಿ ಶ್ರೀನಿವಾಸ ಆರ್. ಟಿ. ಕಾರ್ಯಕ್ರಮ ನಿರ್ವಹಿಸಿದರು.

ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.