• Home  
  • ಡೆಂಟಾ ಕೇರ್ ತಂಡದಿಂದ ಅದ್ದೂರಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ (Grand celebration of Shri Krishna Janmashtami by Denta Care team)
- fastival

ಡೆಂಟಾ ಕೇರ್ ತಂಡದಿಂದ ಅದ್ದೂರಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ (Grand celebration of Shri Krishna Janmashtami by Denta Care team)

Share: ಡೆಂಟಾ ಕೇರ್ ತಂಡದಿಂದ ಅದ್ದೂರಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಭವನದಲ್ಲಿ ನಡೆದ ಕಾರ್ಯಕ್ರಮ (Udupi) ಉಡುಪಿ : ನಗರದ ಹೃದಯ ಭಾಗದಲ್ಲಿರುವ ಖ್ಯಾತ ದಂತ ಚಿಕಿತ್ಸಾಲಯ ಡೆಂಟಾ ಕೇರ್ ಸಂಸ್ಥೆ ಕಳೆದ ಎರಡು ವರ್ಷಗಳಂತೆ ಈ ವರ್ಷವೂ ಅದ್ದೂರಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹೋಟೆಲ್ ಕಿದಿಯೂರ್ ನ ಶೇಷಶಯನ ಸಭಾಭವನದಲ್ಲಿ ಆಚರಿಸಲಾಯಿತು.     ಕಾರ್ಯಕ್ರಮವನ್ನು ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು   ದೀಪ […]

(Udupi) ಉಡುಪಿ : ನಗರದ ಹೃದಯ ಭಾಗದಲ್ಲಿರುವ ಖ್ಯಾತ ದಂತ ಚಿಕಿತ್ಸಾಲಯ ಡೆಂಟಾ ಕೇರ್ ಸಂಸ್ಥೆ ಕಳೆದ ಎರಡು ವರ್ಷಗಳಂತೆ ಈ ವರ್ಷವೂ ಅದ್ದೂರಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಹೋಟೆಲ್ ಕಿದಿಯೂರ್ ನ ಶೇಷಶಯನ ಸಭಾಭವನದಲ್ಲಿ ಆಚರಿಸಲಾಯಿತು.

    ಕಾರ್ಯಕ್ರಮವನ್ನು ಶ್ರೀ ಪೇಜಾವರ ಅಧೋಕ್ಷಜ ಮಠದ ಪರಮ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು   ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

    ಭಾವಿ ಪರ್ಯಾಯ ಪೀಠಾರೋಹಣ ಗೈಯಲಿರುವ ಪರಮ ಪೂಜ್ಯ ಶ್ರೀ ವೇದವರ್ಧನ ತೀರ್ಥರು ಮಕ್ಕಳನ್ನು ಮತ್ತು ಪೋಷಕರನ್ನು ಆಶೀರ್ವದಿಸಿದರು.

   ಡೆಂಟಾ ಕೇರ್ ಸಂಸ್ಥೆಯ ಮಾಲಿಕರಾದ ಡಾ,  ವಿಜಯೇಂದ್ರ ವಸಂತ್, ಪ್ರಕಾಶಚಂದ್ರ ಶೆಟ್ಟಿ, ಬ್ರಹ್ಮಾವರ ಜಿ ಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್, ಕಿದಿಯೂರ್-ಹೋಟೆಲ್ ಕಿದಿಯೂರ್ ಹೊಟೇಲಿನ ಭುವನೇಂದ್ರ ಕಿದಿಯೂರು, ಪ್ರಭಾಕರ್ ನಾಯಕ್ ಅಮ್ಮುಂಜೆ,   ಯುವರಾಜ್ ಸಾಲಿಯಾನ್ ಮಸ್ಕತ್ ಇವರುಗಳ ಜೊತೆಗೂಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

 ಮುಖ್ಯ ಅತಿಥಿಗಳಾಗಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ  ಹರಿರಾಮ್ ಶಂಕರ್, ಅವರ ಪತ್ನಿ ಶ್ರೀಮತಿ ಶ್ರುತಿ, ಸು ಫ್ರಮ್ ಸೋ ಖ್ಯಾತಿಯ ಶ್ರೀಮತಿ ಪೂರ್ಣಿಮಾ ಸುರೇಶ್, ಪರ್ಯಾಯ ಸಮಿತಿಯ ಕಾರ್ಯದರ್ಶಿಗಳಾದ ಮೋಹನ್ ಭಟ್ ಹಾಗೂ ಆಯೋಜಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

   ಶ್ರೀ ಕೃಷ್ಣ, ರಾಧೆ, ಶ್ರೀ ಕೃಷ್ಣನ ಜೀವನ ಕಥೆಯಲ್ಲಿ ಬರುವ ಪಾತ್ರಗಳ ಕೃಷ್ಣ ಕಥಾ ವೇಷ ಸ್ಪರ್ಧೆ ಹಾಗೂ ಶಂಖ ಮೊಳಗಿಸುವ ಶ್ರೀ ಕೃಷ್ಣ ಪಾಂಚಜನ್ಯ ಸ್ಪರ್ಧೆಗಳಲ್ಲಿ ನಿರೀಕ್ಷೆಗೂ ಮಿಗಿಲಾಗಿ 110 ಮಕ್ಕಳು ವೇಷ ಭಾಗವಹಿಸಿ ಸಂಭ್ರಮಿಸಿದರು.

   ವಿಜೇತ ಮಕ್ಕಳನ್ನು ಅಭಿನಂದಿಸಿ ಪಾರಿತೋಷಕಗಳನ್ನು ನೀಡಲಾಯಿತು.

     ಅದೃಷ್ಟಶಾಲಿ ಮಗುವಿಗೆ ಚೀಟಿ ಎತ್ತಿ ಬಾಲಕೃಷ್ಣನ ವಿಗ್ರಹ ನೀಡಲಾಯಿತು.

     ಶ್ರೀ ಪ್ರಕಾಶಚಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಡೆಂಟಾ ಕೇರ್ ನ ಪ್ರೀತಿ ಸನಿಲ್ ಕಾರ್ಯಕ್ರಮ ನಿರ್ವಹಿಸಿದರು. ಹಾಗೂ ಸುಪ್ರೀತ, ರಕ್ಷ ಹಾಗೂ ಭವಾನಿ, ಡಾ. ಸಂಧ್ಯಾ ಕಾರ್ಯಕ್ರಮ ಸಂಯೋಜಿಸಿದರು.

    ಕೃಷ್ಣ ಲೀಲೋತ್ಸವ ಸಂದರ್ಭ ಡೆಂಟಾ ಕೇರ್ ವತಿಯಿಂದ ಮುಂಬಯಿಯ ತಂಡದಿಂದ ಮಾನವ ಪಿರಮಿಡ್ ರಚಿಸಿ ದಹಿ ಹಂಡಿ- ಮೊಸರು ಗಡಿಗೆ ಒಡೆಯುವ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ನೂರಾರು ಜನರು ಭಾಗವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.