• Home  
  • ತೀರ್ಥಹಳ್ಳಿ : ಕಾಂತಾರ-2  : ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ (Thirthahalli: Kantara-2: A major tragedy narrowly avoided)
- ಅಪಘಾತ

ತೀರ್ಥಹಳ್ಳಿ : ಕಾಂತಾರ-2  : ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ (Thirthahalli: Kantara-2: A major tragedy narrowly avoided)

Share: ತೀರ್ಥಹಳ್ಳಿ : ಕಾಂತಾರ-2  : ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ (Thirtha halli)ತೀರ್ಥಹಳ್ಳಿ : ಕಾಂತಾರ-2 ಚಿತ್ರದ ಚಿತ್ರೀಕರಣದ ಪ್ರಾರಂಭದಿಂದ ಸಂದರ್ಭ ಸರಣಿ ಅವಘಡಗಳು ಸಂಭವಿಸಿ, ಈಗಾಗಲೇ ಮೂವರು ಮೃತಪಟ್ಟ ಘಟನೆ ಮಾಸುವ ಮೊದಲೇ ಇನ್ನೊಂದು ಅವಘಡ ಸೇರಿಕೊಂಡಿದೆ. ಕಾಂತಾರ-2  ಚಿತ್ರದ ಚಿತ್ರೀಕರಣ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಡೆಯುತ್ತಿದೆ. ಶನಿವಾರ ರಾತ್ರಿ ಚಿತ್ರೀಕರಣ ಮುಗಿಸಿ ಬರುವಾಗ ದೋಣಿ ಮಗುಚಿ ಬಿದ್ದಿದೆ. ಈ ದೋಣಿಯಲ್ಲಿ ನಟ, ನಿರ್ದೇಶಕ ರಿಷಬ್ […]

ಕಾಂತಾರ-2  ಚಿತ್ರದ ಚಿತ್ರೀಕರಣ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪದ ಮಾಣಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನಡೆಯುತ್ತಿದೆ. ಶನಿವಾರ ರಾತ್ರಿ ಚಿತ್ರೀಕರಣ ಮುಗಿಸಿ ಬರುವಾಗ ದೋಣಿ ಮಗುಚಿ ಬಿದ್ದಿದೆ. ಈ ದೋಣಿಯಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸೇರಿ ಅವರ ತಂಡದ ಸುಮಾರು ಮುವತ್ತು ಮಂದಿ ಪ್ರಯಾಣಿಸುತ್ತಿದ್ದರು. ಇನ್ನನೇನು ದಡ ಸೇರಬೇಕೆನ್ನುವಾಗ ಕ್ಯಾಮೆರಾ ಒಂದು ದೋಣಿಯಿಂದ ಜಾರಿತು ಎನ್ನಲಾಗಿದ್ದು, ಇದನ್ನು ರಕ್ಷಿಸಿಕೊಳ್ಳಲು ಯತ್ನಿಸಿದಾಗ ದೋಣಿ ಆಯತಪ್ಪಿದೆ. ದೋಣಿಯಲ್ಲಿದ್ದ ರಿಷಬ್ ಶೆಟ್ಟಿ ಸೇರಿದಂತೆ ತಂಡದವರು ಜನ ನೀರಿಗೆ ಬಿದ್ದರು ಎನ್ನಲಾಗಿದೆ. ದಡದ ಹತ್ತಿರವೇ ದುರ್ಘಟನೆ ಸಂಭವಿಸಿದ್ದರಿಂದ ನೀರಿಗೆ ಬಿದ್ದವರು ಈಜಿ ದಡ ಸೇರಿದ್ದಾರೆ. ಕೆಮೆರಾ ಸಹಿತ ಚಿತ್ರೀಕರಣದ ಪರಿಕರ ನದಿ ಪಾಲಾಗಿದೆ ಎನ್ನಲಾಗಿದೆ.

ಚಿತ್ರೀಕರಣ ನಡೆಯುತ್ತಿರುವ ಈ ಪ್ರದೇಶಕ್ಕೆ ಕಾಂತಾರ ಚಿತ್ರ ತಂಡ ಸ್ಥಳೀಯರನ್ನು ನಿರ್ಭಂಧಿಸಿದೆ. ಇನ್ನಷ್ಟೆ ಹೆಚ್ಚಿನ ಮಾಹಿತಿ ಲಭ್ಯ ಆಗಬೇಕಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.