ತುಳು ನಾಟಕ ಪ್ರದರ್ಶನದಲ್ಲಿ ವಿಜಯ ಕಲಾವಿದರಿಂದ ಮತದಾನ ಜಾಗೃತಿ
ಮೂಲ್ಕಿ : ವಿಜಯಾ ಕಲಾವಿದರು ಕಿನ್ನಿಗೋಳಿ ನಾಟಕ ತಂಡದ “ಪಿರಾವುಡು ಒರಿ ಉಲ್ಲೆ” (Piravud ori ulle)ತುಳು ನಾಟಕ ಪ್ರದರ್ಶನ ಹೆಜಮಾಡಿ ಶ್ರೀ ವೀರಮಾರುತಿ ದೇವಳದಲ್ಲಿ ಬಹಳ ಯಶಸ್ವಿಯಾಗಿ ಪ್ರದರ್ಶನ ಗೊಂಡು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಈ ಸಂದರ್ಭ ನಾಟಕ ತಂಡದ ವತಿಯಿಂದ ಮತದಾನ ಜಾಗೃತಿ ನಡೆಯಿತು. ಎಪ್ರಿಲ್26 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಖಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ತಮ್ಮ ಹಕ್ಕನ್ನು ಚಲಾಯಿಸಬೇಕೆಂದು ಕರೆ ನೀಡಲಾಯಿತು.
ನಾಟಕ ಸಂಘಟನೆ ನಡೆಸಿದ ಪಾಂಡುರಂಗ ಕರ್ಕೇರಾ ಹೆಜಮಾಡಿ (Panduranga Karkera), ಓಂದಾಸ್ ಕಣ್ಣಂಗಾರ್(Omdas Kannangaru) , ನಾಟಕ ತಂಡದ ಅಧ್ಯಕ್ಷ ಶರತ್ ಶೆಟ್ಟಿ(Sharath Shetty), ನಿರ್ವಾಹಕ ಸುಧಾಕರ ಸಾಲ್ಯಾನ್, ನಾಟಕ ರಚನೆಕಾರ ಹರೀಶ್ ಪಡುಬಿದ್ರೆ, ತಂಡದ ಎಲ್ಲ ಕಲಾವಿದರಿದ್ದರು.
ತಂಡದ ಕಲಾವಿದ ನರೇಂದ್ರ ಕೆರೆಕಾಡು (Narendra Kerekadu) ಮತದಾನ ಜಾಗೃತಿ ಬಗ್ಗೆ ತಿಳಿಸಿದರು.

