ಕಾಪುವಿನಲ್ಲಿ ತಹಶೀಲ್ದಾರ್ ಮತ್ತು ಪೋಲೀಸರಿಂದ ಪಥಸಂಚಲನ
(Kaup) ಕಾಪು: ಚುನಾವಣಾ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದೆ ಶಾಂತಿ, ಸೌಹಾರ್ದತೆಯಿಂದ ಚುನಾವಣೆ ನಡೆಯಬೇಕು ಎಂಬ ಜಾಗೃತಿಯನ್ನು ಮೂಡಿಸುವ ಸಲುವಾಗಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಕಾಪುವಿನ ಪೊಲಿಪು ಮಸೀದಿಯಿಂದ K1 ಹೋಟೆಲ್ ವರೆಗೆ ಪಥ ಸಂಚಲನ ನಡೆಯಿತು.
ಪಥಸಂಚಲನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ತಾಲ್ಲೂಕಿನ ದಂಡಾಧಿಕಾರಿಗಳಾದ ಡಾ. ಪ್ರತಿಭಾ ಆರ್ (Kaup Thahashildar DR Prathibha R) ಮತ್ತು ಪೋಲೀಸ್ ವರಿಷ್ಠಾಧಿಕಾರಿಗಳಾದ ಟಿ ಸಿದ್ದಲಿಂಗಪ್ಪ (T Siddalingappa) ಇವರು ಸ್ವತಃ ಇಡೀ ಪಥಸಂಚನದಲ್ಲಿ ಭಾಗವಹಿಸಿದ್ದರಿಂದ ಜಾಗೃತಿ ಸಂದೇಶ ಪರಿಣಾಮಕಾರಿಯಾಗಿ ತಲುಪಿದೆ.
ಕಾಪು ವಿಧಾನಸಭಾ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ನಡೆಯಲು ಕಂದಾಯ ಇಲಾಖೆ ಸರ್ವ ಸನ್ನದ್ಧವಾಗಿದೆ. ಮತದಾರರು ನಿರ್ಭೀತಿಯಿಂದ ಚುನಾವಣೆಯಲ್ಲಿ ಭಾಗವಹಿಸುವಂತೆ ಮಾಡಲು ಪೋಲೀಸ್ ಇಲಾಖೆ ಸಜ್ಜಾಗಿದ್ದು, ಮುಂಜಾಗ್ರತೆ ಮತ್ತು ಜನಜಾಗೃತಿ ಮೂಡಿಸುವ ಸಲುವಾಗಿ ಪೋಲೀಸ್ ಇಲಾಖೆಯ ಸಿದ್ದತೆ ಇದಾಗಿದೆ ಎಂದು ಚುನಾವಣೆಯ ನೇತೃತ್ವ ವಹಿಸಿರುವ ತಹಶಿಲ್ದಾರ್ ಡಾ ಪ್ರತಿಭಾ ಆರ್ ತಿಳಿಸಿದ್ದಾರೆ.
ಪಥ ಸಂಚಲನದಲ್ಲಿ ಪೋಲೀಸ್ ಹೆಚ್ಚುವರಿ ವರಿಷ್ಠಾಧಿಕಾರಿ ಶ್ರೀ ಟಿ ಸಿದ್ದಲಿಂಗಪ್ಪ, DYSP ಅರವಿಂದ್ (DYSP Aravind), ಸರ್ಕಲ್ ಇನ್ಸ್ಪೆಕ್ಟರ್ ಜಯಶ್ರೀ ಹಾಗೂ ತಹಶಿಲ್ದಾರ್ ಡಾ.ಪ್ರತಿಭಾ ಆರ್ ಭಾಗವಹಿಸಿದ್ದರು.

