ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ ದೇಗುಲದ ಮೊಕ್ತೇಸರರಿಗೆ ಸನ್ಮಾನ
ಆಡಳಿತ ಮೊಕ್ತೇಸರ ಕೃಷ್ಣ ಸಂಪಿಗೆತ್ತಾಯ
(Bengaluru) ಬೆಂಗಳೂರು: ಬೆಂಗಳೂರು ಪೂರ್ಣ ಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಶೀರೂರು ಮಠದ ಭಾವೀ ಪರ್ಯಾಯ ಪೀಠಾಧೀಪತಿಗಳಾದ ಶ್ರೀ ವೇದವರ್ಧನ ಸ್ವಾಮೀಜಿಯವರ ಜಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ವಿದ್ಯಾಪೀಠದ ಮೂಲಸೌಕರ್ಯ ನಿಧಿಗಾಗಿ ರೂ.25 ಕೋಟಿ ಸಂಗ್ರಹಣೆಗಾಗಿ ಅತ್ಯಪೂರ್ವ “ಹನಿ ಕೂಡಿ ಹಳ್ಳ” ಯೋಜನೆಯನ್ನು ರೂಪಿಸಿದ ಬಗ್ಗೆ ತೆಂಕ ಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ದ ಆಡಳಿತ ಮೊಕ್ತೆಸರಾದ ಕೃಷ್ಣ ಸಂಪಿಗೆ ತ್ತಾಯರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು, ಶೀರೂರು ಶ್ರೀಗಳು, ಹೈಕೋರ್ಟ್ ನ್ಯಾಯಾಧೀಶ ರಾಜೇಶ್ ರೈ, ಆನಂದ ಬಳಗದ ಅಧ್ಯಕ್ಷ, ರಾಮಚಂದ್ರ ಉಪಾಧ್ಯಾಯ, ಖ್ಯಾತ ನ್ಯಾಯವಾದಿ ಹಾರನಹಳ್ಳಿ ಅಶೋಕ್, ಖ್ಯಾತ ಪ್ರವಚನಕಾರ ಶ್ರೀ ಬೆ.ನ. ವಿಜಯೇಂದ್ರ ಆಚಾರ್ಯ ಉಪಸ್ಥಿತರಿದ್ದರು.


2 Comments
Krishna sampigethaya
6 September 2025Very good channel.
Wish the team all the best.
Lord vishnu grace you.
Admin
6 September 2025thank u sir, suddi iddare kalisi