• Home  
  • ತೆಂಕ : ಸರಕಾರಿ ಪ್ರಾಥಮಿಕ ಶಾಲೆಯಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ (Tenka: Government Primary School Alumni Association Anniversary)
- ಕ್ರೀಡೆ - ಸಂಘ, ಸಂಸ್ಥೆಗಳು

ತೆಂಕ : ಸರಕಾರಿ ಪ್ರಾಥಮಿಕ ಶಾಲೆಯಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ (Tenka: Government Primary School Alumni Association Anniversary)

Share: ತೆಂಕ : ಸರಕಾರಿ ಪ್ರಾಥಮಿಕ ಶಾಲೆಯಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಕ್ರೀಡಾಕೂಟ ಉದ್ಘಾಟಿಸಿದ ಶಾಲಾ ಹಳೆ ವಿದ್ಯಾರ್ಥಿ ಡಾ. ವೈ ಎನ್ ಶೆಟ್ಟಿ   (Thenka Yermal) ತೆಂಕ ಎರ್ಮಾಳು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳು ತೆಂಕ ಇದರ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಕ್ರೀಡೋತ್ಸವ ಕಾರ್ಯಕ್ರಮ ಶನಿವಾರ ಶಾಲಾ ಮೈದಾನದಲ್ಲಿ ಜರಗಿತು.    ಕ್ರೀಡಾಕೂಟವನ್ನು ಶಾಲಾ ಹಳೆ ವಿದ್ಯಾರ್ಥಿಯಾಗಿದ್ದ  ಡಾ. ವೈ ಎನ್ ಶೆಟ್ಟಿ ಉದ್ಘಾಟಿಸಿದರು.    ಅವರು ಈ […]

(Thenka Yermal) ತೆಂಕ ಎರ್ಮಾಳು: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಎರ್ಮಾಳು ತೆಂಕ ಇದರ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಕ್ರೀಡೋತ್ಸವ ಕಾರ್ಯಕ್ರಮ ಶನಿವಾರ ಶಾಲಾ ಮೈದಾನದಲ್ಲಿ ಜರಗಿತು.

   ಕ್ರೀಡಾಕೂಟವನ್ನು ಶಾಲಾ ಹಳೆ ವಿದ್ಯಾರ್ಥಿಯಾಗಿದ್ದ  ಡಾ. ವೈ ಎನ್ ಶೆಟ್ಟಿ ಉದ್ಘಾಟಿಸಿದರು.

   ಅವರು ಈ ಶಾಲೆಯಲ್ಲಿ ಕಳೆದ ನೆನಪುಗಳನ್ನು ಸ್ಮರಿಸುತ್ತಾ, ತಾನು ಆಕಾಲದಲ್ಲಿ ಪಡೆದ ಶಿಕ್ಷಣದ ಬಗ್ಗೆ ಸವಿನೆನಪುಗಳನ್ನು ಹಂಚಿಕೊಂಡರು.

   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಲ್ಲದಡಿ ಶಿವಪ್ರಸಾದ್ ಶೆಟ್ಟಿ ಮಾತನಾಡಿ, ಮಾರ್ಚ್ ನಾಲ್ಕರಂದು ಹಳೆ ವಿದ್ಯಾರ್ಥಿ ಸಂಘದಿಂದ ನಡೆಯುವ ಸ್ನೇಹ ಸಮ್ಮೇಳನ ಕಾರ್ಯಕ್ರಮಕ್ಕೆ ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು.

  ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಶೀಲಾ ಕೆ ಶೆಟ್ಟಿ, ತೆಂಕ  ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶ್ರೀಮತಿ ಸುರೇಖಾ, ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪ್ರವೀಣ್, ಮಾಜಿ ತಾ.ಪಂ ಸದಸ್ಯೆ ಶ್ರೀಮತಿ  ಶಾರದಾ ಕೆ. ಪೂಜಾರಿ, ಶ್ರೀಮತಿ ಜ್ಯೋತಿ ಶೆಟ್ಟಿ, ರಾಮಕೃಷ್ಣರಾವ್, ಕೇಶವ ಮೊಯ್ಲಿ, ಪ್ರಶಾಂತ ದೇವಾಡಿಗ, ರವಿಕಿರಣ್, ಆಕಾಶ ವೈ, ದಾಮೋದರ್, ರತ್ನಾಕರ್ ಕೋಟ್ಯಾನ್, ಅಮ್ಮಣಿ, ವಿನೋದ, ಮಲ್ಲಿಕಾ, ಚೈತ್ರ ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Leave a comment

Your email address will not be published. Required fields are marked *

eMedia Kannada  @2025. All Rights Reserved.