• Home  
  • ತೆಂಕ ಎರ್ಮಾಳು : ಸ್ಕೂಟಿಗೆ ಕಾರು ಡಿಕ್ಕಿ, ಕಾಲೇಜು ವಿದ್ಯಾರ್ಥಿಗಳಿಬ್ಬರಿಗೆ ಗಂಭೀರ ಗಾಯ (Tenka Yermal: Car hits scooty, two college students seriously injured)
- ಅಪಘಾತ

ತೆಂಕ ಎರ್ಮಾಳು : ಸ್ಕೂಟಿಗೆ ಕಾರು ಡಿಕ್ಕಿ, ಕಾಲೇಜು ವಿದ್ಯಾರ್ಥಿಗಳಿಬ್ಬರಿಗೆ ಗಂಭೀರ ಗಾಯ (Tenka Yermal: Car hits scooty, two college students seriously injured)

Share:  ತೆಂಕ ಎರ್ಮಾಳು : ಸ್ಕೂಟಿಗೆ ಕಾರು ಡಿಕ್ಕಿ, ಯುವಕ, ಯುವತಿಗೆ ಗಂಭೀರ ಗಾಯ ಗಾಯ ಗೊಂಡವರು ಆರ್ಯನ್‌ ಕಶ್ಯಪ್‌, ಆರೋಹಿ ಖುರಾನಾ (Yermal) ಎರ್ಮಾಳು: ಎರ್ಮಾಳು ತೆಂಕ ನಾರಳ್ತಾಯ ಗುಂಡದ ಎದುರು ರಾಹೆ 66ರಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಮಣಿಪಾಲ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ತೀವ್ರ ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ಘಟಿಸಿದೆ.   ಉಡುಪಿ ಕಡೆಯಿಂದ ಮಂಗಳೂರು ಕಡೆಯಿಂದ ಸಾಗುತ್ತಿದ್ದ ಸ್ಕೂಟಿಗೆ ಎರ್ಮಾಳು ತೆಂಕ […]

(Yermal) ಎರ್ಮಾಳು: ಎರ್ಮಾಳು ತೆಂಕ ನಾರಳ್ತಾಯ ಗುಂಡದ ಎದುರು ರಾಹೆ 66ರಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ಮಣಿಪಾಲ ಕಾಲೇಜಿನ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ತೀವ್ರ ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ಘಟಿಸಿದೆ.

  ಉಡುಪಿ ಕಡೆಯಿಂದ ಮಂಗಳೂರು ಕಡೆಯಿಂದ ಸಾಗುತ್ತಿದ್ದ ಸ್ಕೂಟಿಗೆ ಎರ್ಮಾಳು ತೆಂಕ ನಾರಳ್ತಾಯ ಗುಂಡದ ಎದುರಿನ ತಿರುವಿನಲ್ಲಿ ವಿರುದ್ಧ ದಿಕ್ಕಿನಿಂದ ಬಂದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ.

  ಸ್ಕೂಟಿಯಲ್ಲಿದ್ದ ಮಣಿಪಾಲ ಕಾಲೇಜು ವಿದ್ಯಾರ್ಥಿಗಳಾದ ಆರ್ಯನ್‌ ಕಶ್ಯಪ್‌ ನವೀನ್‌ (22) ಮತ್ತು ಆರೋಹಿ ಖುರಾನಾ(22) ತೀವ್ರ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

  ಘಟನಾ ಸ್ಥಳಕ್ಕೆ ಸಮಾಜ ಸೇವಕ ಉಚ್ಚಿಲದ ಜಲಾಲುದ್ದೀನ್‌ ಮತ್ತು ಹಮೀದ್‌ ರವರು ಆಗಮಿಸಿ, ಎಸ್ಡಿಪಿಐ ಅಂಬುಲೆನ್ಸ್‌ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.