• Home  
  • ತ್ರಿಪುರಾದಲ್ಲೂ ಹಿಜಾಬ್ ಗಲಾಟೆ – ಹಿಂದು ಯುವಕರ ಗುಂಪಿನಿಂದ ವಿದ್ಯಾರ್ಥಿಗೆ ಥಳಿತ
- ದೇಶ-ವಿದೇಶ

ತ್ರಿಪುರಾದಲ್ಲೂ ಹಿಜಾಬ್ ಗಲಾಟೆ – ಹಿಂದು ಯುವಕರ ಗುಂಪಿನಿಂದ ವಿದ್ಯಾರ್ಥಿಗೆ ಥಳಿತ

Share: ತ್ರಿಪುರಾದಲ್ಲೂ ಹಿಜಾಬ್ ಗಲಾಟೆ – ಹಿಂದು ಯುವಕರ ಗುಂಪಿನಿಂದ ವಿದ್ಯಾರ್ಥಿಗೆ ಥಳಿತ  ಗುಹವಾಟಿ: ಹಿಜಾಬ್ ಧರಿಸಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಬಲಪಂಥೀಯ ಜನರ ಗುಂಪೊಂದು ಶಾಲೆ ಪ್ರವೇಶಕ್ಕೆ ಅಡ್ಡಿಪಡಿಸಿದ ಮತ್ತು ಇದನ್ನು ಪ್ರಶ್ನಿಸಿದ ಮುಸ್ಲಿಂ ಯುವಕನಿಗೆ ಆ ಗುಂಪು ಥಳಿಸಿದ ಘಟನೆ ತ್ರಿಪುರದಲ್ಲಿ ವರದಿಯಾಗಿದೆ. ಇಲ್ಲಿನ ಸೆಫಾಹಿಜಲ ಜಿಲ್ಲೆಯ ಬಿಷಾಲ್ ಘರ್ ಉಪವಿಭಾಗದಲ್ಲಿ ಈ ಘಟನೆ ನಡೆದಿದ್ದು, ಸದ್ಯಕ್ಕೆ ಇಲ್ಲಿನ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಸ್ಥಳೀಯರು ಹೇಳುವ ಪ್ರಕಾರ, 10ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು […]

ತ್ರಿಪುರಾದಲ್ಲೂ ಹಿಜಾಬ್ ಗಲಾಟೆ – ಹಿಂದು ಯುವಕರ ಗುಂಪಿನಿಂದ ವಿದ್ಯಾರ್ಥಿಗೆ ಥಳಿತ

 ಗುಹವಾಟಿ: ಹಿಜಾಬ್ ಧರಿಸಿ ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು ಬಲಪಂಥೀಯ ಜನರ ಗುಂಪೊಂದು ಶಾಲೆ ಪ್ರವೇಶಕ್ಕೆ ಅಡ್ಡಿಪಡಿಸಿದ ಮತ್ತು ಇದನ್ನು ಪ್ರಶ್ನಿಸಿದ ಮುಸ್ಲಿಂ ಯುವಕನಿಗೆ ಆ ಗುಂಪು ಥಳಿಸಿದ ಘಟನೆ ತ್ರಿಪುರದಲ್ಲಿ ವರದಿಯಾಗಿದೆ.

ಇಲ್ಲಿನ ಸೆಫಾಹಿಜಲ ಜಿಲ್ಲೆಯ ಬಿಷಾಲ್ ಘರ್ ಉಪವಿಭಾಗದಲ್ಲಿ ಈ ಘಟನೆ ನಡೆದಿದ್ದು, ಸದ್ಯಕ್ಕೆ ಇಲ್ಲಿನ ಪರಿಸ್ಥಿತಿ ಹತೋಟಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಸ್ಥಳೀಯರು ಹೇಳುವ ಪ್ರಕಾರ, 10ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ಹೊರಗೆಳೆದು ಶಾಲೆಯ ಎದುರಲ್ಲೇ ಥಳಿಸಲಾಗಿದೆ. ಆದರೆ  ಮುಖ್ಯ ಶಿಕ್ಷಕರು ಸೇರಿದಂತೆ ಯಾವುದೇ ಶಿಕ್ಷಕರಾಗಲಿ ಆ ವಿದ್ಯಾರ್ಥಿಯ ರಕ್ಷಣೆಗೆ ಧಾವಿಸಲಿಲ್ಲ.

 ಈ ಘಟನೆಯಿಂದ ಕೆರಳಿದ ಸ್ಥಳೀಯರು ರಸ್ತೆ ತಡೆಮಾಡಿ ಪ್ರತಿಭಟನೆ ನಡೆಸಿದ್ದಾರೆ. ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿದವರು ಹೊರಗಿನವರೆಂದು ತಿಳಿದುಬಂದಿದ್ದು ಈ ಘಟನೆಗೂ ಶಾಲೆಗೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.

 ಇನ್ನು, ಶಾಲಾ ಆಡಳಿತ ಮಂಡಳಿಯವರು ಹೇಳುವ ಪ್ರಕಾರ, ಕಳೆದ ವಾರ ಬಲಪಂಥೀಯ ಸಂಘಟನೆಗಳ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡು ಬಂದ ಹಳೇವಿದ್ಯಾರ್ಥಿಗಳ ಗುಂಪೊಂದು ಶಾಲೆಗೆ ಬಂದು ಈ ಶಾಲಾ ಆವರಣದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡುತ್ತಿರುವ ವಿಚಾರದಲ್ಲಿ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಶಾಲಾ ಆವರಣದಲ್ಲಿ ಹಿಜಾಬ್ ಗೆ ನಿಷೇಧ ಹೇರುವಂತೆ ಮುಖ್ಯ ಶಿಕ್ಷಕರನ್ನು ಒತ್ತಾಯಿಸಿದ್ದಾರೆ.

 ಕರೈಮುರದಲ್ಲಿರುವ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಪ್ರಿಯತೋಷ್ ನಂದಿ ಹೇಳುವ ಪ್ರಕಾರ, ವಿಶ್ವ ಹಿಂದು ಪರಿಷತ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಇದೇ ಶಾಲೆಯ ಹಳೇ ವಿದ್ಯಾರ್ಥಿಗಳು ಅವರನ್ನು ಭೇಟಿಯಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.