• Home  
  • ದಟ್ಟ ಹೊಗೆಯುಗುಳಿದ ಹಳೆ ಲಾರಿ, ಸಾರ್ವಜನಿಕರಿಗೆ ತೊಂದರೆ (Old lorry emitting thick smoke, causing inconvenience to the public)
- PROBLEMS - Uncategorised

ದಟ್ಟ ಹೊಗೆಯುಗುಳಿದ ಹಳೆ ಲಾರಿ, ಸಾರ್ವಜನಿಕರಿಗೆ ತೊಂದರೆ (Old lorry emitting thick smoke, causing inconvenience to the public)

Share: ದಟ್ಟ ಹೊಗೆಯುಗುಳಿದ ಹಳೆ ಲಾರಿ, ಸಾರ್ವಜನಿಕರಿಗೆ ತೊಂದರೆ ಸುರತ್ಕಲ್ ಜಂಕ್ಷನ್ ನಲ್ಲಿ ಶನಿವಾರ ನಡೆದ ಘಟನೆ (Surathkal) ಸುರತ್ಕಲ್:  ಸುರತ್ಕಲ್ ಜಂಕ್ಷನ್ ನಲ್ಲಿ ಸಾಗುತ್ತಿದ್ದ ಹಳೆ ಲಾರಿಯೊಂದು ಶನಿವಾರ ಬೆಳಿಗ್ಗೆ     ದಟ್ಟವಾದ ಕಪ್ಪು ಹೊಗೆಯುಗುಳಿದ್ದು, ಇದರಿಂದ ಜಂಕ್ಷನ್‌ ಸಂಪೂರ್ಣ ಹೊಗೆಮಯವಾಯಿತು.    ಏಕಾಏಕಿ ಹೊಗೆ ಆವರಿಸಿದ ಕಾರಣ ರಸ್ತೆಯಲ್ಲಿ ನಡೆಯುತ್ತಿದ್ದ ಜನರ ಆರೋಗ್ಯದಲ್ಲಿ ಏರುಪೇರಾಗಿದೆ.   ಹೊಗೆಯ ತೀವ್ರತೆಗೆ ಹೋಟೆಲ್‌ ಒಳಗೆ ಆಹಾರ ಸೇವಿಸುತ್ತಿದ್ದ ಗ್ರಾಹಕರು ಕೂಡ ಗಾಬರಿಗೊಂಡರು. ಎಲ್ಲಿ ಬೆಂಕಿ ಹೊತ್ತಿಕೊಂಡಿದೆಯೋ ಎಂಬ ಆತಂಕದಲ್ಲಿ ಜನರು […]

(Surathkal) ಸುರತ್ಕಲ್:  ಸುರತ್ಕಲ್ ಜಂಕ್ಷನ್ ನಲ್ಲಿ ಸಾಗುತ್ತಿದ್ದ ಹಳೆ ಲಾರಿಯೊಂದು ಶನಿವಾರ ಬೆಳಿಗ್ಗೆ     ದಟ್ಟವಾದ ಕಪ್ಪು ಹೊಗೆಯುಗುಳಿದ್ದು, ಇದರಿಂದ ಜಂಕ್ಷನ್‌ ಸಂಪೂರ್ಣ ಹೊಗೆಮಯವಾಯಿತು.

   ಏಕಾಏಕಿ ಹೊಗೆ ಆವರಿಸಿದ ಕಾರಣ ರಸ್ತೆಯಲ್ಲಿ ನಡೆಯುತ್ತಿದ್ದ ಜನರ ಆರೋಗ್ಯದಲ್ಲಿ ಏರುಪೇರಾಗಿದೆ.   ಹೊಗೆಯ ತೀವ್ರತೆಗೆ ಹೋಟೆಲ್‌ ಒಳಗೆ ಆಹಾರ ಸೇವಿಸುತ್ತಿದ್ದ ಗ್ರಾಹಕರು ಕೂಡ ಗಾಬರಿಗೊಂಡರು. ಎಲ್ಲಿ ಬೆಂಕಿ ಹೊತ್ತಿಕೊಂಡಿದೆಯೋ ಎಂಬ ಆತಂಕದಲ್ಲಿ ಜನರು ಹೊರಗೆ ಬಂದು ನೋಡಿದಾಗ, ಅದು ಮಾಲಿನ್ಯ ತಪಾಸಣೆ ಇಲ್ಲದ ಹಳೆಯ ಲಾರಿಯಿಂದ ಹೊರಬಂದ ದಟ್ಟ ಹೊಗೆ ಎಂದು ಗೊತ್ತಾಯಿತು.

  ದಿನನಿತ್ಯ ಸಾವಿರಾರು ವಾಹನಗಳು, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಓಡಾಡುವ ಈ ಜಂಕ್ಷನ್‌ನಲ್ಲಿ ಇಂತಹ ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವು ಆರೋಗ್ಯಕ್ಕೆ ತೀವ್ರ ಹಾನಿ ಉಂಟು ಮಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ   ಮಾಲಿನ್ಯ ನಿಯಂತ್ರಣಕ್ಕೆ ಒಳಪಡದ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.