• Home  
  •  ನಂದಿಕೂರು : ಎಂ11 ಇಂಡಸ್ಟ್ರಿಸ್‌ ವಿರುದ್ಧ ಆಕ್ರೋಶ : ಪಲಿಮಾರು ವಿಶೇಷ ಗ್ರಾಮಸಭೆ (Outrage against Nandikuru M11 Industries : Special Palimaru Grama Sabha)
- PROBLEMS

 ನಂದಿಕೂರು : ಎಂ11 ಇಂಡಸ್ಟ್ರಿಸ್‌ ವಿರುದ್ಧ ಆಕ್ರೋಶ : ಪಲಿಮಾರು ವಿಶೇಷ ಗ್ರಾಮಸಭೆ (Outrage against Nandikuru M11 Industries : Special Palimaru Grama Sabha)

Share:   ನಂದಿಕೂರು : ಎಂ11 ಇಂಡಸ್ಟ್ರಿಸ್‌ ವಿರುದ್ಧ ಆಕ್ರೋಶ: ಪಲಿಮಾರು ವಿಶೇಷ ಗ್ರಾಮಸಭೆ (Nandikuru) ಪಡುಬಿದ್ರಿ: ನಂದಿಕೂರು ಪರಿಸರದಲ್ಲಿ ಕಾರ್ಯಾರಂಭಗೊಂಡಿರುವ ಬಯೋ ಡೀಸೆಲ್ ಉತ್ಪಾದನಾ ಘಟಕ ಎಂ11 ಕಂಪೆನಿಯಿಂದ ಉಂಟಾಗುತ್ತಿರುವ ಮಾಲಿನ್ಯಕ್ಕೆ ಸಂಬಂಧಿಸಿ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ನೇತೃತ್ವದಲ್ಲಿ ಕಂಪೆನಿ ಸುತ್ತಮುತ್ತಲ ಪರಿಸರದಲ್ಲಿನ ನೀರಿನ ಮಾದರಿಯ ಸಂಗ್ರಹ ಸಹಿತ ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಕೂರಿನಲ್ಲಿ ಕಾರ್ಯಾರಂಭಗೊಂಡಿರುವ ಎಂ-11 ಕಂಪೆನಿಯಿಂದ ಆಸುಪಾಸಿನ ಪರಿಸರದಲ್ಲಿ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರಿನ ಮೇರೆಗೆ […]

  ನಂದಿಕೂರು : ಎಂ11 ಇಂಡಸ್ಟ್ರಿಸ್‌ ವಿರುದ್ಧ ಆಕ್ರೋಶ: ಪಲಿಮಾರು ವಿಶೇಷ ಗ್ರಾಮಸಭೆ

(Nandikuru) ಪಡುಬಿದ್ರಿ: ನಂದಿಕೂರು ಪರಿಸರದಲ್ಲಿ ಕಾರ್ಯಾರಂಭಗೊಂಡಿರುವ ಬಯೋ ಡೀಸೆಲ್ ಉತ್ಪಾದನಾ ಘಟಕ ಎಂ11 ಕಂಪೆನಿಯಿಂದ ಉಂಟಾಗುತ್ತಿರುವ ಮಾಲಿನ್ಯಕ್ಕೆ ಸಂಬಂಧಿಸಿ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ನೇತೃತ್ವದಲ್ಲಿ ಕಂಪೆನಿ ಸುತ್ತಮುತ್ತಲ ಪರಿಸರದಲ್ಲಿನ ನೀರಿನ ಮಾದರಿಯ ಸಂಗ್ರಹ ಸಹಿತ ಐದು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಂದಿಕೂರಿನಲ್ಲಿ ಕಾರ್ಯಾರಂಭಗೊಂಡಿರುವ ಎಂ-11 ಕಂಪೆನಿಯಿಂದ ಆಸುಪಾಸಿನ ಪರಿಸರದಲ್ಲಿ ಮಾಲಿನ್ಯ ಉಂಟಾಗುತ್ತಿದೆ ಎಂಬ ದೂರಿನ ಮೇರೆಗೆ ಪಲಿಮಾರು ಪಂಚಾಯಿತಿ ಸಭಾಂಗಣದಲ್ಲಿ ನಡೆದ ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿದೆ.

  ಕಂಪೆನಿ ಪ್ರತಿನಿತ್ಯ ಶಾಂಭವಿ ನದಿಯಿಂದ ಮೂರೂವರೆ ಲಕ್ಷ ಲೀಟರ್ ನೀರು ಬಳಕೆಗಾಗಿ ಅಳವಡಿಸಿರುವ ಅಪೂರ್ಣ ಪೈಪ್‌ಲೈನ್ ತೆರವುಗೊಳಿಸುವುದು. ಕಂಪೆನಿ ಬಳಿ ಮಳೆ ನೀರು ಸಾಗುವ ಚರಂಡಿಯಲ್ಲಿ ಪೈಪ್ ಅಳವಡಿಸಿದ್ದು, ಅದನ್ನು ಮುಚ್ಚಲು ತೀರ್ಮಾನಿಸಲಾಯಿತು.

ಪಲಿಮಾರು ಮತ್ತು ನಂದಿಕೂರು ಗ್ರಾಮದಲ್ಲಿ ಇನ್ನು ಮುಂದೆ ಯಾವುದೇ ಹೊಸ ಕೈಗಾರಿಕೆಗಳು ಆರಂಭವಾಗಬೇಕಾದಲ್ಲಿ ಗ್ರಾಮಸಭೆ ಅಥವಾ ಗ್ರಾಮಸ್ಥರ ಸಭೆಯಲ್ಲಿ ಅನುಮೋದನೆಯ ನಂತರ ಕೈಗಾರಿಕೆಗಳಿಗೆ ಅನುಮತಿ ನೀಡಲು ಸರ್ವಾನುಮತದಿಂದ  ನಿರ್ಣಯಿಲಾಯಿತು.

 ದಾಮೋದರ ಆಚಾರ್ಯ ಮತ್ತು ರಮೆಶ್ ಶೆಟ್ಟಿ ಅವರ ಮನೆ ಬಾವಿ ನೀರು ಕಲುಷಿತಗೊಂಡಿರುವುದರಿಂದ ಅವರಿಗೆ ಶುದ್ಧ ನೀರನ್ನು ಪೂರೈಸುವುದು.

ಪರಿಸರ ಹೋರಾಟಗಾರರಾದ  ನಾಗೇಶ್ ರಾವ್ ಹಾಗೂ ದಿನೇಶ್ ಫಲಿಮಾರು ಘಟಕದಿಂದ ನಂದಿಕೂರು, ಫಲಿಮಾರು, ಅಡ್ವೆ, ಅವರಾಲು, ಕೊಳಚೂರು, ಪಾದೆಬೆಟ್ಟು ಪ್ರದೇಶಗಳಲ್ಲಿ ಜನ ಹಾಗೂ ವಾಯು ಮಾಲಿನ್ಯ ಉಂಟಾಗುತ್ತಿದೆ. ಇದರಿಂದ ಉಂಟಾಗುವ ಪರಿಸರ ಮಾಲಿನ್ಯದಿಂದ ಈ ಭಾಗದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರತ್ತಿದೆ. ಕಂಪೆನಿಯಿಂದ ಪರಿಸರದ ಮಾಲಿನ್ಯ ಉಂಟಾಗಿರುವುದು ದೃಢಪಟ್ಟಿರುವುದರಿಂದ ಅತೀ ಶೀಘ್ರವಾಗಿ ಕಾನೂನಾತ್ಮಕ ಕ್ರಮಗಳೊಂದಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಎಂ. 11 ಘಟಕವನ್ನು ಮುಚ್ಚಬೇಕು ಎಂದು ಒತ್ತಾಯಿಸಿದರು.

ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಸಭೆಯಲ್ಲಿ ಮಾತನಾಡಿ, ಗ್ರಾಮಸ್ಥರ ಹಾಗೂ ಸಂತ್ರಸ್ತರ ಸಂಕಷ್ಟದ ಪಾಡು ತಮಗರಿವಾಗಿದೆ. ತಾಲ್ಲೂಕಿನ ಜನರ ಆರೋಗ್ಯ, ಪರಿಸರ ಕಾಪಾಡುವುದು ನಮ್ಮ ಕರ್ತವ್ಯ. ಯಾವುದೇ ಕಾರಣಕ್ಕೂ ಕೈಗಾರಿಕೆಗಳು ಪರಿಸರದ ಜನತೆಯ ಆರೋಗ್ಯದ ಮೇಲೆ ದುಃಷ್ಪರಿಣಾಮ ಬೀರಕೂಡದು ಎಂದರು.

ಕೂಡಲೇ ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿ ಕೀರ್ತಿಕುಮಾರ್ ಅವರಲ್ಲಿ ನಾಳೆಯೇ ಜಲ ಮಾಲಿನ್ಯದ ಕುರಿತಾದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಬೇಕಾಗಿ ಸೂಚಿಸಿದರು.

  ಸಭೆಯ ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷೆ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ ಮಾತನಾಡಿ, ತಾನು ಅಧಿಕಾರಕ್ಕೆ ಅಂಟಿಕೊಂಡಿಲ್ಲ. ಗ್ರಾಮದ ಜನರ ಆರೋಗ್ಯ, ಪರಿಸರ ಮುಖ್ಯ. ಪರಿಸರ ವಿರೋಧಿ ಕೈಗಾರಿಕೆಗಳನ್ನು ನಾನು ಯಾವತ್ತು ಬೆಂಬಲಿಸಿಲ್ಲ. ಇನ್ನೂ ಬೆಂಬಲಿಸುವುದಿಲ್ಲ. ತಾನೂ ಈ ಕುರಿತಾಗಿ ಹೋರಾಟ ನಡೆಸುತ್ತಿರುವ ಗ್ರಾಮಸ್ಥರ ಜತೆಗಿರುತ್ತೇನೆ. ಸಂಘಟಿತರಾಗಿ ಇದರ ವಿರುದ್ಧ ಹೋರಾಡೋಣ. ಒಂದು ವೇಳೆ ಕಂಪೆನಿ ಪರ ಒತ್ತಡ ಬಂದಲ್ಲಿ ರಾಜಿನಾಮೆ ನೀಡಿ ನಿಮ್ಮೊಂದಿಗೆ ಹೋರಾಟಕ್ಕೆ ಮುಂದಾಗುತ್ತೇನೆ ಎಂದರು.

ಶಿಕ್ಷಣ ಇಲಾಖಾ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್ಲಮ್ಮ ಸಭೆಯ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಜಿಲ್ಲಾ ಕೈಗಾರಿಕಾ ಇಲಾಖಾ ಜಂಟಿ ನಿರ್ದೆಶಕ ನಾಗರಾಜ್, ಪರಿಸರ ಮಾಲಿನ್ಯ ಇಲಾಖಾ ಜಿಲ್ಲಾ ಅಧಿಕಾರಿ ಕೆ. ಕೀರ್ತಿಕುಮಾರ್ ಮಾತನಾಡಿದರು.

ಸ್ಥಳೀಯರಾದ ಲಕ್ಷ್ಮಣ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ಗಿರೀಶ್ ಪಲಿಮಾರು, ನಾಗರಾಜ ರಾವ್, ಪರಿಸರವಾದಿ ಪ್ರೇಮಾನಂದ ಕಲ್ಮಾಡಿ, ನಿರ್ಮಲಾ ಕಾಮತ್, ಸಂದೀಪ್ ಪಲಿಮಾರು ಮತ್ತಿತರರು ಮಾತನಾಡಿದರು.

ಸಭೆಯಲ್ಲಿ ಕಾಪು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿ`ಸಿಲ್ವ, ಪಲಿಮಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಯೇಶ್ವರ್ ಪೈ, ಪಿಡಿಒ ಶಶಿಧರ ಆಚಾರ್ಯ, ಪಡುಬಿದ್ರಿ ಪೊಲೀಸರು, ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಪಲಿಮಾರು ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.