• Home  
  • ನಂದಿಕೂರು ಕೋಟಿಚೆನ್ನಯ ಕಂಬಳದಲ್ಲಿ ಸಮ್ಮಾನ (Honor in Nandikuru Koti Chennaya Kambala)
- ಕರಾವಳಿ

ನಂದಿಕೂರು ಕೋಟಿಚೆನ್ನಯ ಕಂಬಳದಲ್ಲಿ ಸಮ್ಮಾನ (Honor in Nandikuru Koti Chennaya Kambala)

Share: ನಂದಿಕೂರು ಕೋಟಿಚೆನ್ನಯ ಕಂಬಳದಲ್ಲಿ ಸಮ್ಮಾನ ತುಳೂ ಭಾಷೆಗೆ ಪ್ರಾಧನ್ಯತೆ, ಕಂಬಳ ಭವನ ನಿರ್ಮಾಣ ಯೋಜನೆಗೆ ಶೀಘ್ರವೇ ಪ್ರಸ್ತಾವನೆ ಸಲ್ಲಿಕೆ: ಶಾಸಕ ಅಶೋಕ್ ಕುಮಾರ್ ರೈ (MLA Ashok kumar Rai) (Nandikuru) ನಂದಿಕೂರು, ಜ. 21: ರೈತಾಪಿ ವರ್ಗದ ಸ್ವಾಭಿಮಾನದ ಕ್ರೀಡೆಯಾಗಿರುವ ಕಂಬಳಕ್ಕೆ ವಿವಿಧ ರೂಪ ಕೊಡುವ ಕೆಲಸ ಮಾಡಬೇಕು. ಐಪಿಎಲ್‌ನ 20-20 cricket ಮಾದರಿಯಲ್ಲಿ ಇದನ್ನು ಆಯೋಜನೆ ಮಾಡುವ ಬಗ್ಗೆಯೂ ಸಲಹೆ ಬಂದಿದೆ. ವರ್ಷದೊಳಗೆ ತುಳುವನ್ನು ಹೆಚ್ಚುವರಿ ಭಾಷೆಯನ್ನಾಗಿಸಲು ಕರಾವಳಿ ಭಾಗದ ಶಾಸಕರು ಸಂಘಟಿತಾರಾಗಿ […]

ನಂದಿಕೂರು ಕೋಟಿಚೆನ್ನಯ ಕಂಬಳದಲ್ಲಿ ಸಮ್ಮಾನ

ತುಳೂ ಭಾಷೆಗೆ ಪ್ರಾಧನ್ಯತೆ, ಕಂಬಳ ಭವನ ನಿರ್ಮಾಣ ಯೋಜನೆಗೆ ಶೀಘ್ರವೇ ಪ್ರಸ್ತಾವನೆ ಸಲ್ಲಿಕೆ: ಶಾಸಕ ಅಶೋಕ್ ಕುಮಾರ್ ರೈ (MLA Ashok kumar Rai)

(Nandikuru) ನಂದಿಕೂರು, ಜ. 21: ರೈತಾಪಿ ವರ್ಗದ ಸ್ವಾಭಿಮಾನದ ಕ್ರೀಡೆಯಾಗಿರುವ ಕಂಬಳಕ್ಕೆ ವಿವಿಧ ರೂಪ ಕೊಡುವ ಕೆಲಸ ಮಾಡಬೇಕು. ಐಪಿಎಲ್‌ನ 20-20 cricket ಮಾದರಿಯಲ್ಲಿ ಇದನ್ನು ಆಯೋಜನೆ ಮಾಡುವ ಬಗ್ಗೆಯೂ ಸಲಹೆ ಬಂದಿದೆ. ವರ್ಷದೊಳಗೆ ತುಳುವನ್ನು ಹೆಚ್ಚುವರಿ ಭಾಷೆಯನ್ನಾಗಿಸಲು ಕರಾವಳಿ ಭಾಗದ ಶಾಸಕರು ಸಂಘಟಿತಾರಾಗಿ ಪ್ರಯತ್ನಿಸುತ್ತೇವೆ. ೫ಎಕರೆ ಜಮೀನು ಹಾಗೂ ಕಂಬಳ ಭವನ ನಿರ್ಮಾಣ ಯೋಜನೆ ಹಾಕಿಕೊಳ್ಳಲಾಗಿದ್ದು, ಮುಖ್ಯಮಂತ್ರಿಗಳಿಗೂ ಶೀಘ್ರವೇ ಈ ಕುರಿತಾದ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಬೆಂಗಳೂರು ಕಂಬಳದ ಯಶಸ್ವೀ ಸಂಘಟಕ, ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಜ. 20ರಂದು ಅಡ್ವೆ ನಂದಿಕೂರು ಜೋಡುಕರೆ ಕಂಬಳ ಸಮಿತಿಯ ಆಶ್ರಯದಲ್ಲಿ ಅಡ್ವೆಯಲ್ಲಿ ನಡೆದಿದ್ದ 31ನೇ ವರ್ಷದ ಹೊನಲು ಬೆಳಕಿನ ಕೋಟಿಚೆನ್ನಯ ಜೋಡುಕರೆ ಕಂಬಳೋತ್ಸವದಲ್ಲಿ ಬೆಂಗಳೂರಿನಲ್ಲಿ ತುಳುನಾಡಿನ ಕಂಬಳವನ್ನು ಸಂಘಟಿಸಿ ಯಶಸ್ವಿಗೊಳಿಸಿದ್ದಕ್ಕಾಗಿ ತಮಗೆ ನೀಡಲಾದ ವಿಶೇಷ ಸಮ್ಮಾನವನ್ನು ಸ್ವೀಕರಿಸಿ ನರೆದಿದ್ದ ಕಂಬಳಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

ಬೆಂಗಳೂರಿನಲ್ಲಿ ತುಳು ಸಂಘಟನೆಯನ್ನು ಪರಿಚಯಿಸಿ, ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರಾಗಿ ಕಂಬಳವನ್ನು ಯಶಸ್ವಿಗೊಳಿಸಿದ ಉದ್ಯಮಿ, ಬೆಂಗಳೂರಿನ ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ ಬಂಜಾರ ಪ್ರಕಾಶ್ ಶೆಟ್ಟಿ (Banjara Prakash Shetty) ಅವರು ನಂದಿಕೂರು ಕಂಬಳೋತ್ಸವದಲ್ಲಿ ತಮಗಿತ್ತ ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿ, ಬೆಂಗಳೂರು ಕಂಬಳದಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಜತೆ ಕಂಬಳಗಳು ಭಾಗವಹಿಸಿ ದಾಖಲೆ ನಿರ್ಮಿಸಿವೆ. ಕೋಣಗಳ ಯಜಮಾನರೂ ಈ ನಿಟ್ಟಿನಲ್ಲಿ ಶ್ಲಾಘನೀಯರಾಗಿದ್ದಾರೆ. ಜಾನಪದ ಕ್ರೀಡೆಯಾಗಿರುವ ಕಂಬಳವು ಮುಂದಿನ ಪೀಳಿಗೆಗಾಗಿ ಶಾಶ್ವತವಾಗಿ ಉಳಿಯುವಂತಾಗಲಿ ಎಂದು ಹಾರೈಸಿದರು.

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು (DR Deviprasad Shetty) ಮಾತನಾಡಿ, ಕಂಬಳವು ಇಂದು ಅಂತಾರಾಷ್ಟಿçÃಯ ಮಟ್ಟದಲ್ಲೂ ಗುರುತಿಸಲ್ಪಟ್ಟಿದೆ. ಕಂಬಳದಲ್ಲಿ ಸಮಯಪ್ರಜ್ಞೆ ಮೂಡಲು ಗೇಟ್ ಮಾದರಿಯನ್ನು ಐಕಳ ಕಂಬಳೋತ್ಸವದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

ಮಾಜಿ ಶಾಸಕ ರಮಾನಾಥ ರೈ(Ramanath Rai), ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಿಥುನ್ ರೈ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ ಮುಂತಾದವರು ಮಾತನಾಡಿದರು.

ಅದಾನಿ ಯುಪಿಸಿಎಲ್ ಅಧ್ಯಕ್ಷ ಹಾಗೂ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ (ADANI Group President Kishore Alva), ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾ| ಬ್ರಿಜೇಶ್ ಚೌಟ, ಸಾಯಿರಾಧ ಗ್ರೂಪಿನ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ (Manohara Shetty), ಜಿಲ್ಲಾ ಕಂಬಳ ಸಮಿತಿಯ ಗೌರವಾಧ್ಯಕ್ಷ ಭಾಸ್ಕರ ಸುಬ್ಬಯ್ಯ ಕೋಟ್ಯಾನ್, ಮುಂಬಯಿ ಹೊಟೇಲ್ ಉದ್ಯಮಿಗಳಾದ ಕರುಣಾಕರ ಶೆಟ್ಟಿ, ಅಶೋಕ್ ಶೆಟ್ಟಿ, ಪೂನ ಬಂಟರ ಸಂಘದ ಅಧ್ಯಕ್ಷ ಇನ್ನಾ ಕುರ್ಕಿಲ್‌ಬೆಟ್ಟು ಬಾಳಿಕೆ ಸಂತೋಷ್ ಶೆಟ್ಟಿ, ಪಲಿಮಾರು ಗ್ರಾ. ಪಂ. ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ್ ಪೈ, ಚಂದ್ರಹಾಸ್ ಶೆಟ್ಟಿ ಪುಚ್ಚೊಟ್ಟು ಬೀಡು, ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಬಾಲಚಂದ್ರ ಶೆಟ್ಟಿ, ಕಾಪು ಸತೀಶ್ ಶೆಟ್ಟಿ, ಮುಂಡ್ಕೂರು ಅಶೋಕ್ ಶೆಟ್ಟಿ, ಭಾಸ್ಕರ ಶೆಟ್ಟಿ, ರವೀಂದ್ರ ಶೆಟ್ಟಿ, ಗಣೇಶ್ ಶೆಟ್ಟಿ, ಪ್ರಭಾಕರ ಶೆಟ್ಟಿ, ವಿನಯ ಕುಮಾರ್ ಶೆಟ್ಟಿ, ಲೋಕೇಶ್, ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಅಡ್ವೆ ಮೂಡ್ರಗುತ್ತು ಚಿತ್ತರಂಜನ್ ಶೆಟ್ಟಿ, ಅಡ್ವೆ ಮೂಡ್ರಗುತ್ತು ಸುರೇಶ್ ಶೆಟ್ಟಿ, ಅಡ್ವೆ ಕಂಕಣಗುತ್ತು ಅಶ್ರಿತ್ ಹರೀಶ್ ಶೆಟ್ಟಿ, ಕಾರ್ಯಾಧ್ಯಕ್ಷ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ನವೀನಚಂದ್ರ ಸುವರ್ಣ ಅಡ್ವೆ, ಉಪಾಧ್ಯಕ್ಷ ಸತೀಶ್ ಶೆಟ್ಟಿ ಬೆಜ್ಜಬೆಟ್ಟು, ಕಾರ್ಯದರ್ಶಿಗಳಾದ ಶಶಿಧರ ಹೆಗ್ಡೆ ಅಡ್ವೆ, ಉದಯ ರೈ ಅರಂತಡೆ, ಕೃಷ್ಣಕುಮಾರ್ ಶೆಟ್ಟಿ ಸನ್ನೋಣಿ, ಕೋಶಾಧಿಕಾರಿಗಳಾದ ಲಕ್ಷ್ಮಣ್ ಎಲ್. ಶೆಟ್ಟಿ ಅರಂತಡೆ, ಗಣೇಶ್ ಶೆಟ್ಟಿ ಸಾಂತೂರು, ಜತೆ ಕೋಶಾಧಿಕಾರಿಗಳಾದ ಅಮರನಾಥ ಶೆಟ್ಟಿ ಅಣ್ಣಾಜಿಗೋಳಿ, ಸತೀಶ್ ಶೆಟ್ಟಿ ಅಡ್ವೆ ಮೂಡ್ರಗುತ್ತು, ವಿದ್ಯಾನಂದ ಶೆಟ್ಟಿ ಮುಂಡಶೆಟ್ಟಿ ಮನೆ ಅಡ್ವೆ, ರವೀಂದ್ರ ಪ್ರಭು ಸಾಂತೂರು, ಶೇಖರ ಶೆಟ್ಟಿ, ಪ್ರವೀಣ್ ಕುಮಾರ್ ಗರಡಿ ಮನೆ, ವಿನೋದ್ ಶೆಟ್ಟಿ, ಸುಧಾಮ ಶೆಟ್ಟಿ, ಸರೋಜಾಕ್ಷ ಶೆಟ್ಟಿ, ನಿತಿನ್‌ಕುಮಾರ್, ಜಯಂತಿ ಪೂಜಾರ್ತಿ ಅಡ್ವೆ, ಸುಧೀರ್ ಕುಮಾರ್ ಅಡ್ವೆ, ಮತ್ತಿತರರು ವೇದಿಕೆಯಲ್ಲಿದ್ದರು.

ಕಟೀಲು ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.