ನಂದಿಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 10 ಜೊತೆ ಬೆಂಚು ಡೆಸ್ಕ್ ವಿತರಣೆ
(Nandikuru) ನಂದಿಕೂರು: ನಂದಿಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಮುದಾಯ ಅಭಿವೃದ್ಧಿ ವತಿಯಿಂದ 10 ಜೊತೆ ಬೆಂಚು ಡೆಸ್ಕ್ಗಳನ್ನು ವಿತರಣೆ ಮಾಡಲಾಯಿತು.
ನಂದಿಕೂರು ಶಾಲಾ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಲಕ್ಷ್ಮಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಶಾಲಾ ಅಭಿವೃದ್ಧಿ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಶಾಲಾ ಸಮಿತಿ ಸದಸ್ಯರಾದ ಉದಯ ರೈ, ಸಾಯಿನಾಥ್ ಶೆಟ್ಟಿ, ನಂದಿಕೂರು ಒಕ್ಕೂಟದ ಅಧ್ಯಕ್ಷ ಪದ್ಮನಾಭ ಆಚಾರ್ಯ, ಮುಖ್ಯ ಶಿಕ್ಷಕಿ ರಮಣಿ, ಶಾಲಾ ಶಿಕ್ಷಕ ವೃಂದ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಪಡುಬಿದ್ರಿ ಮೇಲ್ವಿಚಾರಕರಾದ ಸರಿತ, ಒಕ್ಕೂಟದ ಸೇವಾ ಪ್ರತಿನಿಧಿ ಪ್ರೀತಿ ಉಪಸ್ಥಿತರಿದ್ದರು.

