• Home  
  • ನಕ್ಸಲ್ ವಿಕ್ರಂ ಗೌಡ ಮರಣೋತ್ತರ ಪರೀಕ್ಷೆ ಪೂರ್ಣ- ಇಂದು ಕುಟುಂಬಕ್ಕೆ ಮೃತದೇಹ ಹಸ್ತಾಂತರ (Postmortem of Naxal Vikaram Gauda complete – Body handed over to family today)
- ಅಪರಾಧ

ನಕ್ಸಲ್ ವಿಕ್ರಂ ಗೌಡ ಮರಣೋತ್ತರ ಪರೀಕ್ಷೆ ಪೂರ್ಣ- ಇಂದು ಕುಟುಂಬಕ್ಕೆ ಮೃತದೇಹ ಹಸ್ತಾಂತರ (Postmortem of Naxal Vikaram Gauda complete – Body handed over to family today)

Share: ನಕ್ಸಲ್ ವಿಕ್ರಂ ಗೌಡ ಮರಣೋತ್ತರ ಪರೀಕ್ಷೆ ಪೂರ್ಣ– ಇಂದು ಕುಟುಂಬಕ್ಕೆ ಮೃತದೇಹ ಹಸ್ತಾಂತರ (Manipala) ಮಣಿಪಾಲ: ಹೆಬ್ರಿಯ ಕಾಡಿನಲ್ಲಿ ನಕ್ಸಲ್ ನಿಗ್ರಹ ಪಡೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್‌ ನಾಯಕ ವಿಕ್ರಂ ಗೌಡನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಶವ ಪರೀಕ್ಷಾಗಾರಕ್ಕೆ ಮಂಗಳವಾರ ಸಂಜೆ ಸುಮಾರು 5 ಗಂಟೆಯ ವೇಳೆ ಪೊಲೀಸ್‌ ಭದ್ರತೆಯಲ್ಲಿ ಆ್ಯಂಬುಲೆನ್ಸ್‌ನಲ್ಲಿ ಮೃತ ದೇಹವನ್ನು ತರಲಾಯಿತು.    ಆದರೆ ತಡರಾತ್ರಿಯವರೆಗೂ ಮರಣೋತ್ತರ ಪರೀಕ್ಷೆ ನಡೆಯಲಿಲ್ಲ. ಮಂಗಳವಾರ ಸಂಜೆ ಆದರೂ ಮೃತರ ಮನೆ ಮಂದಿ […]

ನಕ್ಸಲ್ ವಿಕ್ರಂ ಗೌಡ ಮರಣೋತ್ತರ ಪರೀಕ್ಷೆ ಪೂರ್ಣ– ಇಂದು ಕುಟುಂಬಕ್ಕೆ ಮೃತದೇಹ ಹಸ್ತಾಂತರ

(Manipala) ಮಣಿಪಾಲ: ಹೆಬ್ರಿಯ ಕಾಡಿನಲ್ಲಿ ನಕ್ಸಲ್ ನಿಗ್ರಹ ಪಡೆ ಪೊಲೀಸರ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ನಕ್ಸಲ್‌ ನಾಯಕ ವಿಕ್ರಂ ಗೌಡನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಶವ ಪರೀಕ್ಷಾಗಾರಕ್ಕೆ ಮಂಗಳವಾರ ಸಂಜೆ ಸುಮಾರು 5 ಗಂಟೆಯ ವೇಳೆ ಪೊಲೀಸ್‌ ಭದ್ರತೆಯಲ್ಲಿ ಆ್ಯಂಬುಲೆನ್ಸ್‌ನಲ್ಲಿ ಮೃತ ದೇಹವನ್ನು ತರಲಾಯಿತು.  

 ಆದರೆ ತಡರಾತ್ರಿಯವರೆಗೂ ಮರಣೋತ್ತರ ಪರೀಕ್ಷೆ ನಡೆಯಲಿಲ್ಲ. ಮಂಗಳವಾರ ಸಂಜೆ ಆದರೂ ಮೃತರ ಮನೆ ಮಂದಿ ಬಾರದ ಕಾರಣ ಪಂಚನಾಮೆ ನಡೆಸಲು ಸಾಧ್ಯವಾಗಿಲ್ಲ. ತಡರಾತ್ರಿಯವರೆಗೂ ಮೃತದೇಹವನ್ನು ಪೊಲೀಸರ ಭದ್ರತೆಯಲ್ಲಿ ಪರೀಕ್ಷಾ ಕೇಂದ್ರದೊಳಗೆ ಇರಿಸಲಾಗಿತ್ತು.

  ಬುಧವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಕ್ಕೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ. ಕುಟುಂಬಸ್ಥರು ವಿಕ್ರಂ ಗೌಡನ ಹುಟ್ಟೂರು ಕೂಡ್ಲುವಿನ ಮನೆ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡುವ ಸಾಧ್ಯತೆ ಇದೆ.

 ಇನ್ನೊಂದೆಡೆ ಎನ್‌ಕೌಂಟರ್‌ ನಡೆದ ಸ್ಥಳಕ್ಕೆ ಬುಧವಾರ ಆಂತರಿಕ ಭದ್ರತ ವಿಭಾಗದ ಡಿಜಿಪಿ ಪ್ರಣವ್‌ ಮೊಹಂತಿ ಭೇಟಿ ನೀಡಲಿದ್ದಾರೆ.

ಘಟನೆ ನಡೆದ ಪರಿಸರ ಹಾಗೂ ಹೆಬ್ರಿ ಭಾಗದಲ್ಲಿ ಹೆಚ್ಚುವರಿ ಪೊಲೀಸರು ಹಾಗೂ ಎಎನ್‌ಎಫ್ ಸಿಬಂದಿಯನ್ನು ನಿಯೋಜಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.