• Home  
  • ಪಡುಬಿದ್ರಿ ಯುವವಾಹಿನಿ ಘಟಕದಿಂದ ಹೆಜಮಾಡಿಯಲ್ಲಿ ಮಕ್ಕಳ ಹಬ್ಬ (Childrenʼs Fatival at Hejamady by Padubidri Yuvavahini)
- ಶಾಲಾ ಕಾಲೇಜು - ಸಂಘ, ಸಂಸ್ಥೆಗಳು

ಪಡುಬಿದ್ರಿ ಯುವವಾಹಿನಿ ಘಟಕದಿಂದ ಹೆಜಮಾಡಿಯಲ್ಲಿ ಮಕ್ಕಳ ಹಬ್ಬ (Childrenʼs Fatival at Hejamady by Padubidri Yuvavahini)

Share: ಪಡುಬಿದ್ರಿ ಯುವವಾಹಿನಿ ಘಟಕದಿಂದ ಹೆಜಮಾಡಿಯಲ್ಲಿ ಮಕ್ಕಳ ಹಬ್ಬ (Hejamady) ಹೆಜಮಾಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಪಡುಬಿದ್ರಿ  ಘಟಕದ ಆಯೋಜನೆಯಲ್ಲಿ ಹೆಜಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮ ನೆರವೇರಿತು.   ಶಾಲೆಯ ವಿದ್ಯಾರ್ಥಿ ನಾಯಕ ಲಕ್ಷಿನ್‌ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲೋಕೇಶ್ ಅಮೀನ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮಕ್ಕಳಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಡುಬಿದ್ರಿಯ ಯುವ ವಾಹಿನಿ ಘಟಕದ ಕಾರ್ಯ ಶ್ಲಾಘನೀಯ […]

ಪಡುಬಿದ್ರಿ ಯುವವಾಹಿನಿ ಘಟಕದಿಂದ ಹೆಜಮಾಡಿಯಲ್ಲಿ ಮಕ್ಕಳ ಹಬ್ಬ

(Hejamady) ಹೆಜಮಾಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿಯ ಪಡುಬಿದ್ರಿ  ಘಟಕದ ಆಯೋಜನೆಯಲ್ಲಿ ಹೆಜಮಾಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮ ನೆರವೇರಿತು.

  ಶಾಲೆಯ ವಿದ್ಯಾರ್ಥಿ ನಾಯಕ ಲಕ್ಷಿನ್‌ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಲೋಕೇಶ್ ಅಮೀನ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮಕ್ಕಳಿಗೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಪಡುಬಿದ್ರಿಯ ಯುವ ವಾಹಿನಿ ಘಟಕದ ಕಾರ್ಯ ಶ್ಲಾಘನೀಯ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷೆ  ಶಶಿಕಲಾ ಯಶೋಧರ್ ವಹಿಸಿದ್ದರು.

 ಈ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು.

 ವೇದಿಕೆಯಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್‌ ಸದಸ್ಯ ಶರಣ್ ಕುಮಾರ್ ಮಟ್ಟು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸ್ವಪ್ನ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶ್ರೀಮತಿ ಚೈತ್ರಾ ಮನೋಹರ್, ಕಾರ್ಯದರ್ಶಿ ಸುಜಾತಾ ಪ್ರಸಾದ್ ಉಪಸ್ಥಿತರಿದ್ದರು.

ಈ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖರ ಹೆಜಮಾಡಿಯವರನ್ನು ಘಟಕದ ವತಿಯಿಂದ ಸನ್ಮಾನಿಸಲಾಯಿತು.

 ವಿಧಿತ್ ಹಾಗೂ ಕುಮಾರಿ ಕ್ಷಮ್ಯ ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.