• Home  
  • ನದಿಯಲ್ಲಿ ಬಿದ್ದ 3 ಲಕ್ಷರೂ. ಮೌಲ್ಯದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ ಮಲ್ಪೆ (Social worker Eshwar malpe)
- ಕರಾವಳಿ

ನದಿಯಲ್ಲಿ ಬಿದ್ದ 3 ಲಕ್ಷರೂ. ಮೌಲ್ಯದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ ಮಲ್ಪೆ (Social worker Eshwar malpe)

Share: ನದಿಯಲ್ಲಿ ಬಿದ್ದ 3 ಲಕ್ಷರೂ. ಮೌಲ್ಯದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ ಮಲ್ಪೆ  ಮಲೈ ನ. 30: ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಪೆರ್ಣಂಕಿಲ ಸ್ವರ್ಣ ನದಿಯಲ್ಲಿ (Swarna River)ಎರಡು ದಿನಗಳ ಹಿಂದೆ ಈಜಲು ಹೋದ ಯುವಕನೋರ್ವ ತನ್ನ ಕುತ್ತಿಗೆಯಲ್ಲಿದ್ದ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಳಕೊಂಡಿದ್ದ.   ಎಷ್ಟು ಹುಡುಕಾಡಿದರೂ ಸಿಗಲಿಲ್ಲ. ಕೊನೆಗೆ ಎರಡು ದಿನಗಳ ಬಳಿಕ ಮುಳುಗು ತಜ್ಞ ಈಶ್ವರ ಮಲ್ಪೆ ಗಮನಕ್ಕೆ ತಂದಾಗ ಅವರು ನದಿಯಲ್ಲಿ ಸುಮಾರು ಅರ್ಧ […]

ನದಿಯಲ್ಲಿ ಬಿದ್ದ 3 ಲಕ್ಷರೂ. ಮೌಲ್ಯದ ಚಿನ್ನದ ಸರ ಹುಡುಕಿ ಕೊಟ್ಟ ಈಶ್ವರ ಮಲ್ಪೆ

 ಮಲೈ ನ. 30: ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಪೆರ್ಣಂಕಿಲ ಸ್ವರ್ಣ ನದಿಯಲ್ಲಿ (Swarna River)ಎರಡು ದಿನಗಳ ಹಿಂದೆ ಈಜಲು ಹೋದ ಯುವಕನೋರ್ವ ತನ್ನ ಕುತ್ತಿಗೆಯಲ್ಲಿದ್ದ 3 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಸರವನ್ನು ಕಳಕೊಂಡಿದ್ದ.

  ಎಷ್ಟು ಹುಡುಕಾಡಿದರೂ ಸಿಗಲಿಲ್ಲ. ಕೊನೆಗೆ ಎರಡು ದಿನಗಳ ಬಳಿಕ ಮುಳುಗು ತಜ್ಞ ಈಶ್ವರ ಮಲ್ಪೆ ಗಮನಕ್ಕೆ ತಂದಾಗ ಅವರು ನದಿಯಲ್ಲಿ ಸುಮಾರು ಅರ್ಧ ಗಂಟೆ ಹುಡುಕಾಟ ನಡೆಸಿದರು.

  ತೀರದಿಂದ ಸುಮಾರು 30 ಅಡಿ ದೂರ, 25 ಅಡಿ ಆಳದಲ್ಲಿ ಕೆಸರಿನಲ್ಲಿ ಹೂತು ಹೋಗಿರುವ ಸರದ ಮೇಲ್ಬಾಗ ಮಾತ್ರ ಕಾಣಿಸಿತು. ಇಷ್ಟು ದೊಡ್ಡದಾದ ನದಿಯ ಕೆಸರಿನಲ್ಲಿ ಹೂತು ಹೋಗುವ ಚಿನ್ನದ ಸರ ದೊರಕಿರುವುದು ಒಂದು ಪವಾಡವೇ ಸರಿ ಎನ್ನುತ್ತಾರೆ ಈಶ್ವರ ಮಲ್ಪೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.