• Home  
  • ನಮ್ಮನ್ನು ನಾವು ಉಳಿಸಿ ಕೊಳ್ಳಲು ಮರ ಗಿಡಗಳನ್ನು  ಬೆಳೆಸೋಣ – ಕೇಶವ ಪೂಜಾರಿ (Let’s grow trees to save ourselves – Keshava Poojary)
- social service

ನಮ್ಮನ್ನು ನಾವು ಉಳಿಸಿ ಕೊಳ್ಳಲು ಮರ ಗಿಡಗಳನ್ನು  ಬೆಳೆಸೋಣ – ಕೇಶವ ಪೂಜಾರಿ (Let’s grow trees to save ourselves – Keshava Poojary)

Share: ನಮ್ಮನ್ನು ನಾವು ಉಳಿಸಿ ಕೊಳ್ಳಲು ಮರ ಗಿಡಗಳನ್ನು  ಬೆಳೆಸೋಣ – ಕೇಶವ ಪೂಜಾರಿ  ಉಡುಪಿ ಗಸ್ತು ಅರಣ್ಯ ಪಾಲಕ ಕೇಶವ ಪೂಜಾರಿ (Udyavara) ಉದ್ಯಾವರ : ಇಂದು ನಾವು ಉಸಿರಾಡುವ ಆಮ್ಲಜನಕ ಮರ ಮಟ್ಟುಗಳಿಂದ ನಮಗೆ ಲಭ್ಯವಾಗುತ್ತದೆ. ಒಬ್ಬ ಮನುಷ್ಯನಿಗೆ ಸರಾಸರಿ 6ರಿಂದ 7 ಮರಗಳಿಂದ ಹೊರ ಸೂಸುವ ಆಮ್ಲಜನಕದ ಅವಶ್ಯಕತೆ ಇದೆ. ನಾವು ಇದನ್ನು ಆಲೋಚನೆ ಮಾಡದೆ ಅಭಿವೃದ್ಧಿಯ ಹೆಸರಲ್ಲಿ ಮರಮಟ್ಟುಗಳನ್ನು ಕಡಿದು ಹಾಕಿದರೆ ಮುಂದೊಂದು ದಿನ ನಮಗೆ ಆಮ್ಲಜನಕದ ಕೊರತೆಯಾಗುವಂತಹ ಸಂದರ್ಭ ಬಂದೀತು […]

(Udyavara) ಉದ್ಯಾವರ : ಇಂದು ನಾವು ಉಸಿರಾಡುವ ಆಮ್ಲಜನಕ ಮರ ಮಟ್ಟುಗಳಿಂದ ನಮಗೆ ಲಭ್ಯವಾಗುತ್ತದೆ. ಒಬ್ಬ ಮನುಷ್ಯನಿಗೆ ಸರಾಸರಿ 6ರಿಂದ 7 ಮರಗಳಿಂದ ಹೊರ ಸೂಸುವ ಆಮ್ಲಜನಕದ ಅವಶ್ಯಕತೆ ಇದೆ. ನಾವು ಇದನ್ನು ಆಲೋಚನೆ ಮಾಡದೆ ಅಭಿವೃದ್ಧಿಯ ಹೆಸರಲ್ಲಿ ಮರಮಟ್ಟುಗಳನ್ನು ಕಡಿದು ಹಾಕಿದರೆ ಮುಂದೊಂದು ದಿನ ನಮಗೆ ಆಮ್ಲಜನಕದ ಕೊರತೆಯಾಗುವಂತಹ ಸಂದರ್ಭ ಬಂದೀತು ಎಂದು ಉಡುಪಿ ಗಸ್ತು ಅರಣ್ಯ ಪಾಲಕರಾದ ಶ್ರೀಕೇಶವ ಪೂಜಾರಿ ಹೇಳಿದ್ದಾರೆ.

ಅವರುಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ   ಜರಗಿದ ಸಾಗುವಾನಿ ಗಿಡ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.

  ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಉಪ ಅರಣ್ಯಾಧಿಕಾರಿಗಳಾದ  ಮಹಮ್ಮದ್ ಜುನೈದ್  ಅವರು ಸಂದರ್ಬೋಚಿತವಾಗಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಅಧ್ಯಕ್ಷ  ಉದ್ಯಾವರ ನಾಗೇಶ್ ಕುಮಾರ್ ವಹಿಸಿದ್ದರು.

  ಮುಖ್ಯ ಅತಿಥಿಗಳಾದ   ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅನುರಾಧ ಪಿ. ಶೆಟ್ಟಿ  ಈ ಕಾರ್ಯಕ್ರಮದ ಔಚಿತ್ಯವನ್ನು ಮಕ್ಕಳಿಗೆ ವಿವರಿಸಿದರು.

 ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಚಂದ್ರಾವತಿ ಎಸ್. ಭಂಡಾರಿ  ಯು. ಪದ್ಮನಾಭ ಕಾಮತ್,  ಉಪಸ್ಥಿತರಿದ್ದರು.

  ಈ ಸಂದರ್ಭದಲ್ಲಿ , ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್, ಉಪಾಧ್ಯಕ್ಷ ಶ್ರೀಧರ ಮಾಬಿಯಾನ್ , ಕಾರ್ಯದರ್ಶಿ, ಭಾಸ್ಕರ ಬಂಗೇರ,  ಮಾಜಿ ಪಂಚಾಯತ್ ಸದಸ್ಯರುಗಳಾದ ನಿತಿನ್ ಜೆ. ಸಾಲ್ಯಾನ್, ಆಬಿದ್ ಆಲಿ, ಸದಸ್ಯರಾದ ಪ್ರೇಮ್ ಮಿನೇಜಸ್ ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ರಿಯಾಝ್ ಪಳ್ಳಿ ವಂದಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್  ಕಾರ್ಯಕ್ರಮ ನಿರ್ವಹಿಸಿದರು.

  ಕಾರ್ಯಕ್ರಮದ ನಂತರ ಸುಮಾರು 150 ವಿದ್ಯಾರ್ಥಿಗಳಿಗೆ ವಿವಿಧ ಗಿಡಗಳನ್ನು ವಿತರಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.