
ನಾಲಾಸೋಪಾರಾ ಶ್ರೀ ಅಯ್ಯಪ್ಪ ಭಕ್ತ ವೃಂದದಿಂದ 29ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಸಂಪನ್ನ
ಕನ್ನಡಿಗರ ಸಾಮಾಜಿಕ – ಧಾರ್ಮಿಕ ಸೇವಾ ಕಾರ್ಯ ಶ್ಲಾಘನೀಯ- ನಾಲಾಸೋಪಾರಾ – ವಿರಾರ್ ಶಾಸಕ ರಾಜನ್ ನಾಯಕ್
(Mumbai) ಮುಂಬೈ – ನಾಲಾಸೋಪಾರಾ, ಜ 15 : ನಾಲಾಸೋಪಾರ ಶ್ರೀ ಅಯ್ಯಪ್ಪ ಭಕ್ತ ವೃಂದ ಸಾಮಾಜಿಕ ಸಂಸ್ಥೆಯ ವತಿಯಿಂದ 29ನೇ ವರ್ಷದ ಅಯ್ಯಪ್ಪ ಮಹಾಪೂಜೆ ವಿಜೃಂಭಣೆಯಿಂದ ಜರಗಿತು.
ಮಹಾಪೂಜೆಯಲ್ಲಿ ನಾಲಾಸೋಪಾರಾ – ವಿರಾರ್ ಶಾಸಕ ರಾಜನ್ ನಾಯಕ್ ಭಾಗವಹಿಸಿ ಅನುಗ್ರಹ ಪ್ರಸಾದ ಸ್ವೀಕರಿಸಿದರು.
ಅವರು ಈ ಸಂದರ್ಭ ಮಾತನಾಡಿ, ಕನ್ನಡಿಗರ ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳು ಶ್ಲಾಘನೀಯ. ನಾನು ಪ್ರತಿ ವರ್ಷ ಶ್ರೀ ಅಯ್ಯಪ್ಪ ಮಹಾಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನೀವೆಲ್ಲರೂ ನನ್ನ ಮೇಲೆ ತುಂಬಾ ಪ್ರೀತಿ ವಿಶ್ವಾಸವನ್ನು ತೋರಿ ಸಹಕರಿಸಿದ್ದೀರಿ. ನನ್ನೊದಿಗೆ ಸಹಕರಿಸಿದ ತಮ್ಮೆಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಶಬರಿಮಲೆ ಯಾತ್ರೆ ಗೈಯ್ಯಲಿರುವ ಸ್ವಾಮಿಗಳಿಗೆಲ್ಲರಿಗೂ ಶುಭ ಹಾರೈಸಿದರು.
ಸಂಸ್ಥೆಯ ವತಿಯಿಂದ ಗುರುಸ್ವಾಮಿಗಳಾದ ಪದ್ಮನಾಭ ಗುರುಸ್ವಾಮಿ, ಸದಾಶಿವ ಕರ್ಕೇರ ಗುರುಸ್ವಾಮಿ ಹಾಗೂ ಗೌರವಾಧ್ಯಕ್ಷ ಜಗನ್ನಾಥ್ ಎನ್ ರೈ ಅವರು ಶಾಸಕ ರಾಜನ್ ನಾಯಕ್‌ರವರನ್ನು ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಿದರು.
ಕಳೆದ 31 ವರ್ಷಗಳಿದ ಸತತವಾಗಿ ನೂರಾರು ಸ್ವಾಮಿಗಳೊಂದಿಗೆ 35 ಬಾರಿ ಶಬರಿಮಲೆ ಯಾತ್ರೆ ಗೈದು ಇದೀಗ 36 ನೇ ಬಾರಿಗೆ ಮಾಲಾ ಧಾರಣೆ ಮಾಡಿರುವ ಸದಾಶಿವ ಕರ್ಕೇರ ಇವರ ಅಧ್ಯಕ್ಷತೆಯಲ್ಲಿ ಹಾಗೂ ಸಂಸ್ಥೆಯ ಗೌರವ ಅಧ್ಯಕ್ಷರಾದ ಜಗನ್ನಾಥ್ ಎನ್ ರೈ ಇವರ ನೇತೃತ್ವದಲ್ಲಿ, ಗುರುಸ್ವಾಮಿ ಪದ್ಮನಾಭ ಪೂಜಾರಿ ಇವರ ಮಾರ್ಗದರ್ಶನದಲ್ಲಿ 29 ವರ್ಷದ ಮಹಾ ಪೂಜೆಯು ಪಾಲ್ಗರ್ ಹಾಗೂ ಮುಂಬಯಿಯ ಸಾವಿರಾರು ಮಂದಿ ಅಯ್ಯಪ್ಪ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಯಶಸ್ವಿಯಾಗಿ ನೆರವೇರಿತು.
ಬೆಳಿಗ್ಗೆ ಶರಣು ಘೋಷ, ಗಣಹೋಮ ನಡೆಯಿತು. ಪೂಜಾ ವೃತವನ್ನು ನವದಂಪತಿಗಳಾದ ಪೂಜಾ ಕುನಾಲ್ ಮತ್ತು ಕುನಾಲ್ ಚೌಹಾನ್ ಇವರು ಕೈಗೊಂಡರು.
ಭಜನೆ, ಸಹಸ್ರ ನಾಮವಳಿ, ಹಾಗೂ ಪಡಿ ಪೂಜೆ ಸಂಪನ್ನಗೊಂಡಿತು.
ಪದ್ಮನಾಭ ಪೂಜಾರಿ ಗುರುಸ್ವಾಮಿ ಹಾಗೂ ಸದಾಶಿವ ಕರ್ಕೇರ ಗುರುಸ್ವಾಮಿಯವರು ಅಯ್ಯಪ್ಪ ಸ್ವಾಮಿಯ ಪುಷ್ಪಾಲಂಕೃತ ಮಂಟಪಕ್ಕೆ ಕರ್ಪೂರ ಆರತಿ ಬೆಳಗಿದರು.
ವರ್ಲಿ ಅಪ್ಪಾಜಿ ಬೀಡು ಹಿರಿಯರಾದ ಶಾಂಭವಿ ರಮೇಶ್ ಗುರುಸ್ವಾಮಿ, ಅಯ್ಯಪ್ಪ ಮಂದಿರ ನಾಲಾಸೋಪಾರ ಗುರುಸ್ವಾಮಿ ಶ್ರೀಕುಮಾರ್, ಸ್ವಾಮಿ ಶರಣಂ ಅಯ್ಯಪ್ಪ ಭಕ್ತ ವೃಂದ ಸಚಿನ್ ಗುರುಸ್ವಾಮಿ, ವಸಾಯಿ ಮಹಾನಗರ ಪಾಲಿಕೆಯ ಪ್ರಥಮ ಮೇಯರ್ ರಾಜೀವ್ ಪಾಟೀಲ್, ಮಹಾರಾಷ್ಟ್ರ ಹೋಟೆಲ್ ಮತ್ತು ರೆಸ್ಟೋರೆಂಟ್ ಫೆಡರೇಷನ್ ಇದರ ಅಧ್ಯಕ್ಷ ಡಾ. ಶಂಕರ್ ಬಿ ಶೆಟ್ಟಿ ವಿರಾರ್, ಸಮಾಜ ಸೇವಕ ಪಾಂಡು ಎಲ್ ಶೆಟ್ಟಿ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಉದ್ಯಮಿ ಹರೀಶ ಶೆಟ್ಟಿ ಗುರ್ಮೆ, ಬಂಟರ ಸಂಘ ಮುಂಬಯಿ ಇದರ ಜತೆ ಕೋಶಾಧಿಕಾರಿ ಶಶಿಧರ್ ಕೆ ಶೆಟ್ಟಿ ಇನ್ನಂಜೆ, ಮಣಿಕಂಠ ಸೇವಾ ಸಮಿತಿ ವಸಾಯಿ ಇದರ ಗೌರವ ಅಧ್ಯಕ್ಷ ಕರ್ನೋರ್ ಶಂಕರ್ ಕೆ ಆಳ್ವ, ಅಧ್ಯಕ್ಷರಾದ ಯಶೋದರ್ ಕೋಟ್ಯಾನ್, ಸಾಯಿಕೇರ್ ಲಾಗಿಸ್ಟಿಕ್ ಇದರ ಆಡಳಿತ ನಿರ್ದೇಶಕ ಸುರೇಂದ್ರ ಪೂಜಾರಿ, ಮೋಹನ್ ಪೂಜಾರಿ ಪವಾಯ್, ಖ್ಯಾತ ಲೇಖಕಿ ಶ್ರೀಮತಿ ಅನಿತ ಪೂಜಾರಿ ತಾಕೋಟೆ, ಭಾರತ್ ಬ್ಯಾಂಕಿನ ನಿರ್ದೇಶಕ ನರೇಶ್ ಪೂಜಾರಿ ಭಾಯಂದರ್, ಭಾರತ್ ಬ್ಯಾಂಕಿನ ಮಾಜಿ ನಿರ್ದೇಶಕ ಕೆ. ಬಿ. ಪೂಜಾರಿ, ಉದ್ಯಮಿ ಅಶೋಕ್ ಎಮ್ ಸಾಲಿಯಾನ್, ಸಮಾಜ ಸೇವಕ ಶ್ರೀನಿವಾಸ್ ನಾಯ್ಡು, ಭಾರತ್ ಬ್ಯಾಂಕ್ ಇದರ ಆಡಳಿತ ನಿರ್ದೇಶಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾನಂದ ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ ಸಾಲಿಯಾನ್, ಮಹಾ ಪ್ರಬಂಧಕ ಮಹೇಶ್ ಬಿ. ಕೋಟ್ಯಾನ್, ಭಾರತ್ ಬ್ಯಾಂಕಿನ ಶೋಭಾ ದಯಾನಂದ್, ಓ. ಪಿ. ಪೂಜಾರಿ ದಂಪತಿಗಳು, ಉದ್ಯಮಿ ಗಂಗಾಧರ್ ಅಮೀನ್ ಕರ್ನಿರೆ, ಮೋಹನ್ ಬಿ ಶೆಟ್ಟಿ, ಮೋಹನ್ ವಿ ಶೆಟ್ಟಿ, ಪ್ರದೀಪ್ ಶೆಟ್ಟಿ ವಿರಾರ್, ವಸಾಯ್ ಉದ್ಯಮಿ ಸತೀಶ್ ಕೋಟ್ಯಾನ್, ಜಯರಾಮ್ ಪೂಜಾರಿ ದಂಪತಿಗಳು, ನಾಗೇಶ್ ಕೋಟ್ಯಾನ್, ಲೋಹಿತಾಕ್ಷ ಅಂಚನ್, ರಾಘವೇಂದ್ರ ಪ್ರಸಾದ್ ಸಾಲಿಯಾನ್, ಕರುಣಾಕರ ಜಿ. ಅಮೀನ್, ಸುಧಾಕರ್ ಪೂಜಾರಿ, ಚಂದ್ರಶೇಖರ ಸಾಲಿಯಾನ್, ರವೀಂದ್ರ ಪೂಜಾರಿ ದಂಪತಿಗಳು, ರಾಜ ಶೆಟ್ಟಿ, ವಾಸು ಶೆಟ್ಟಿ ವಿರಾರ್, ಪ್ರವೀಣ್ ಶೆಟ್ಟಿ ಕಣಾoಜರ್, ಸತೀಶ ಶೆಟ್ಟಿ, ವಸಂತ್ ಶೆಟ್ಟಿ, ಸಮಾಜ ಸೇವಕಿ ಯಶೋದಾ ನಾಗರಾಜ್ ಶೆಟ್ಟಿ, ಭಾರತಿ ರೈ, ಚಂದ್ರಕಲಾ ಆರ್ ಶೆಟ್ಟಿ, ವಿವಿಧ ರಾಜಕೀಯ ಪಕ್ಷಗಳ ಪದಾಧಿಕಾರಿಗಳು, ಸದಸ್ಯರು, ಪಾಲ್ಗರ್ ಜೆಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ನಾಲಾಸೋಪಾರ ಪೊಲೀಸ್ ಇಲಾಖೆಯ ಅದಿಕಾರಿಗಳು, ಮಹಾನಗರ ಪಾಲಿಕೆಯ ಅಧಿಕಾರಿಗಳು, ಉಪಸ್ಥಿತರಿದ್ದರು.
ಸಂಸ್ಥೆಯ ಗೌರವ ಅಧ್ಯಕ್ಷರಾದ ಜಗನ್ನಾಥ್ ಎನ್ ರೈ, ಗುರುಸ್ವಾಮಿ ಹಾಗೂ ಸಂಸ್ಥೆಯ ಅಧ್ಯಕ್ಷ ಸದಾಶಿವ ಎ ಕರ್ಕೇರ, ಗುರುಸ್ವಾಮಿ ಪದ್ಮನಾಭ ಪೂಜಾರಿ, ಉಪಾಧ್ಯಕ್ಷ ಸೀತಾರಾಮ್ ಕೆ ಶೆಟ್ಟಿ, ಗೌರವ ಪ್ರದಾನ ಕಾರ್ಯದರ್ಶಿ ಸುದರ್ಶನ್ ಆರ್ ಸಾಲಿಯಾನ್, ಜೊತೆ ಕಾರ್ಯದರ್ಶಿ ಪ್ರಸನ್ನ ಜೆ ಶೆಟ್ಟಿ, ಗೌರವ ಪ್ರಧಾನ ಕೋಶಾಧಿಕಾರಿ ಹರೀಶ್ ಪೂಜಾರಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ದೇವಕಿ ಎಸ್ ಕರ್ಕೇರ, ಉಪಕಾರ್ಯಧ್ಯಕ್ಷೆಯರಾದ ಶ್ರೀಮತಿ ಪುಷ್ಪಾ ಎಸ್ ಕೋಟ್ಯಾನ್ ಮತ್ತು ಶ್ರೀಮತಿ ಪಾವನಾ ವೇಣುಗೋಪಾಲ್ ಶೆಟ್ಟಿ, ಗೌರವ ಕಾರ್ಯದರ್ಶಿ ಶ್ರೀಮತಿ ಹರಿನಾಕ್ಷಿ ಹೆಚ್ ಪೂಜಾರಿ, ಜೊತೆ ಕಾರ್ಯದರ್ಶಿಗಳಾದ ಶ್ರೀಮತಿ ಸರಿತಾ ಪೂಜಾರಿ, ಶ್ರೀಮತಿ ಜ್ಯೋತಿ ಸುರೇಶ್ ಕೋಟ್ಯಾನ್, ಹಾಗೂ ಶಿಬಿರದ ಸ್ವಾಮಿಗಳು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಜಯಸುವರ್ಣ ಅಭಿಮಾನಿ ಬಳಗದ ಸ್ವಯಂ ಸೇವಕರು ಸಂಯೋಜಿಸಿದರು.
ಗುರುಸ್ವಾಮಿ ಸದಾಶಿವ ಕರ್ಕೇರ ಧನ್ಯವಾದ ಸಲ್ಲಿಸಿದರು.

