• Home  
  • ಭರತನಾಟ್ಯ ವಿದ್ವತ್ ಪರೀಕ್ಷೆ : ಕುಮಾರಿ ಸಿಂಚನ ಲಕ್ಷ್ಮಿಕೋಡಂದೂರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ (Bharatanatyam Vidvat Exam: Kumari Sinchana Lakshmi Kodandur passes with distinction)
- ಮನೋರಂಜನೆ

ಭರತನಾಟ್ಯ ವಿದ್ವತ್ ಪರೀಕ್ಷೆ : ಕುಮಾರಿ ಸಿಂಚನ ಲಕ್ಷ್ಮಿಕೋಡಂದೂರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ (Bharatanatyam Vidvat Exam: Kumari Sinchana Lakshmi Kodandur passes with distinction)

Share: ಭರತನಾಟ್ಯ ವಿದ್ವತ್ ಪರೀಕ್ಷೆ : ಕುಮಾರಿ ಸಿಂಚನಲಕ್ಷ್ಮಿ ಕೋಡಂದೂರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ (Putturu) ಪುತ್ತೂರು, ಪೆರ್ನಾಜೆ: ಕರ್ನಾಟಕ ರಾಜ್ಯ  ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು   ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿಧ್ವತ್ ಪರೀಕ್ಷೆಯ ಅಂತಿಮ ವಿಭಾಗದಲ್ಲಿ ಕುಮಾರಿ ಸಿಂಚನಲಕ್ಷ್ಮಿ ಕೋಡಂದೂರುರವರು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರು ನಾಟ್ಯ ವಿದ್ಯಾಲಯ ಕುಂಬಳೆಯ ವಿದುಷಿ ಡಾ. ವಿದ್ಯಾಲಕ್ಷ್ಮಿಯವರ ಶಿಷ್ಯೆ. ವಿಟ್ಲ ಐಟಿಐ ಸುಪ್ರಜೀತ್ ಕಾಲೇಜಿನ  ನಿವೃತ ಪ್ರಾಂಶುಪಾಲರಾದ ಕೆ. ರಘುರಾಮ […]

ಭರತನಾಟ್ಯ ವಿದ್ವತ್ ಪರೀಕ್ಷೆ : ಕುಮಾರಿ ಸಿಂಚನಲಕ್ಷ್ಮಿ ಕೋಡಂದೂರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

(Putturu) ಪುತ್ತೂರು, ಪೆರ್ನಾಜೆ: ಕರ್ನಾಟಕ ರಾಜ್ಯ  ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು   ವಿಶ್ವವಿದ್ಯಾನಿಲಯ ಮೈಸೂರು ಇವರು ನಡೆಸಿದ ಕರ್ನಾಟಕ ಶಾಸ್ತ್ರೀಯ ಭರತನಾಟ್ಯ ವಿಧ್ವತ್ ಪರೀಕ್ಷೆಯ ಅಂತಿಮ ವಿಭಾಗದಲ್ಲಿ ಕುಮಾರಿ ಸಿಂಚನಲಕ್ಷ್ಮಿ ಕೋಡಂದೂರುರವರು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಇವರು ನಾಟ್ಯ ವಿದ್ಯಾಲಯ ಕುಂಬಳೆಯ ವಿದುಷಿ ಡಾ. ವಿದ್ಯಾಲಕ್ಷ್ಮಿಯವರ ಶಿಷ್ಯೆ. ವಿಟ್ಲ ಐಟಿಐ ಸುಪ್ರಜೀತ್ ಕಾಲೇಜಿನ  ನಿವೃತ ಪ್ರಾಂಶುಪಾಲರಾದ ಕೆ. ರಘುರಾಮ ಶಾಸ್ತ್ರಿ ಹಾಗೂ ಸ್ವರ ಸಿಂಚನ ಸಂಗೀತ ಶಾಲೆ ಶಿಕ್ಷಕಿ ಸವಿತಾ ಕೊಡಂದೂರು ಅವರ ಪುತ್ರಿ.

ಕುಮಾರ್ ಪೆರ್ನಾಜೆ  ಸ್ವರ ಸಿಂಚನ ಕಲಾತಂಡದ ಅರಳು ಪ್ರತಿಭೆಯಾಗಿದ್ದು, ಭರತನಾಟ್ಯ ಮತ್ತು ಸಂಗೀತದಲ್ಲಿ  ತನ್ನ ಕಲಾ ಪ್ರೌಡಿಮೆ ಮೆರೆದಿದ್ದಾರೆ.

ಪತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಅಂಡ್ ಟೆಕ್ನಾಲಜಿ ಕಾಏಜಿನಲ್ಲಿ ಅಂತಿಮ ಬಿ ವಿದ್ಯಾರ್ಥಿ.

ಸಿಂಚನಲಕ್ಷ್ಮಿ ಕೋಡಂದೂರುರವರು 2024ರ ನವರಾತ್ರಿ ಸಂದರ್ಭ ಧರ್ಮಸ್ಥಳದಲ್ಲಿ ಸಂಗೀತ ಕಚೇರಿ, ತೃತೀಯ ವಿಶ್ವ ಹವ್ಯಕ ಸಮ್ಮೇಳನ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.

 ಸಿಂಚನಲಕ್ಷ್ಮಿ ಕೋಡಂದೂರುರವರು ಏಪ್ರಿಲ್ ತಿಂಗಳಲ್ಲಿ ಭರತನಾಟ್ಯ ರಂಗ ಪ್ರವೇಶವನ್ನು ನೀಡಲಿದ್ದಾರೆ.  ಇವರಿಗೆ ಈಗಾಗಲೇ ಪೆರ್ನಾಜೆ ಪ್ರಶಸ್ತಿ ಸಹಿತ ಹತ್ತು ಹಲವು ಪ್ರಶಸ್ತಿ ಲಭಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.