ನೀರೆಂದು ಆಸಿಡ್ ಕುಡಿದ ಯುವಕ ಮೃತ್ಯು
ಪಡುಬಿದ್ರಿಯ ಪಾದೆಬೆಟ್ಟುವಿನಲ್ಲಿ ನಡೆದ ಘಟನೆ
(Padubidri) ಪಡುಬಿದ್ರಿ : ಯುವಕನೋರ್ವ ಟೈಲ್ಸ್ ಕ್ಲೀನಿಂಗ್ ಆಸಿಡ್ ನ್ನು ನೀರು ಎಂದು ಭಾವಿಸಿ ಕುಡಿದು ಅಸ್ವಸ್ಥನಾಗಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಪಾದೆಬೆಟ್ಟು ಗ್ರಾಮದಲ್ಲಿ ಘಟಿಸಿದೆ.
ಮೃತ ಯುವಕ ಕಿರಣ್ (17) ತನ್ನ ಮಾವನು ಕೆಲಸ ಮಾಡುವ ಸ್ಥಳಕ್ಕೆ ತೆರಳಿ, ಕೆಲಸದವರು ಟೈಲ್ಸ್ ಕ್ಲೀನಿಂಗ್ ಮಾಡಲು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿಟ್ಟಿದ್ದ ಟೈಲ್ಸ್ ಕ್ಲೀನಿಂಗ್ ಮಾಡುವ ಆಸಿಡ್ ನ್ನು ನೀರು ಎಂದು ಭಾವಿಸಿ ಕುಡಿದು ಅಸ್ವಸ್ಥನಾಗಿದ್ದನು.
ತೀರ ಅಸ್ವಸ್ಥನಾದ ಆತನನ್ನು ಮುಕ್ಕಾ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾನೆ.
ಈ ಬಗ್ಗೆ ಬಾಲಕನ ತಾಯಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

