• Home  
  • ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನೂತನ ಧ್ವಜಸ್ತಂಭದ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ(Padubidri Shree Mahalingeshwar Temple: Inauguration process of the new flag pillar started)
- ಧಾರ್ಮಿಕ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನೂತನ ಧ್ವಜಸ್ತಂಭದ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ(Padubidri Shree Mahalingeshwar Temple: Inauguration process of the new flag pillar started)

Share: ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ನೂತನ ಧ್ವಜಸ್ತಂಭದ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ  ಮುಂದಿನ ಭಾನುವಾರ (ಡಿ.14)ರಂದು ಭಕ್ತಾದಿಗಳಿಗೆ ತೈಲ ಸಮರ್ಪಣೆಗೆ ಅವಕಾಶ ಕಲ್ಪಿಸಲಾಗಿದೆ ಚಿತ್ರ ಕೃಪೆ: ರವಿ ಡಿಜಿಟಲ್ಸ್‌, ಪಡುಬಿದ್ರಿ.     (Padubidri) ಪಡುಬಿದ್ರಿ, ಡಿ. 12: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು ಶುಕ್ರವಾರ ಶ್ರೀ ದೇಗುಲದ ಅನುವಂಶೀಯ  ತಂತ್ರಿಗಳಾದ ಕಂಬ್ಳಕಟ್ಟ ವೇದಮೂರ್ತಿ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ನೂತನ ಧ್ವಜಸ್ತಂಭ ನಿರ್ಮಾಣಕ್ಕಾಗಿ ತೈಲ ಅಭಿಷೇಕವನ್ನು […]

(Padubidri) ಪಡುಬಿದ್ರಿ, ಡಿ. 12: ಪುರಾಣ ಪ್ರಸಿದ್ಧ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನರ್‌ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿದ್ದು ಶುಕ್ರವಾರ ಶ್ರೀ ದೇಗುಲದ ಅನುವಂಶೀಯ  ತಂತ್ರಿಗಳಾದ ಕಂಬ್ಳಕಟ್ಟ ವೇದಮೂರ್ತಿ ಶ್ರೀ ರಾಧಾಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ನೂತನ ಧ್ವಜಸ್ತಂಭ ನಿರ್ಮಾಣಕ್ಕಾಗಿ ತೈಲ ಅಭಿಷೇಕವನ್ನು ನೆರವೇರಿಸುವ ಮೂಲಕ ತೈಲಾಧಿವಾಸ ಪ್ರಕ್ರಿಯೆಗೆ ಚಾಲನೆ ನೀಡಿದರು.

   ನೂರಾರು ಭಕ್ತಾಧಿಗಳ ಸಮಕ್ಷಮ ಈ ಧಾರ್ಮಿಕ ಕಾರ್ಯಕ್ರಮದ ಬಳಿಕ ತಂತ್ರಿಗಳಾದ ರಾಧಾಕೃಷ್ಣ ಉಪಾಧ್ಯಾಯ ಅವರು ಧ್ವಜಸ್ಥಂಭದ ಮರಕ್ಕೆ ತೈಲಾಭಿಷೇಕವನ್ನು ನಡೆಸಿದರು. ಬಳಿಕ ನೆರೆದಿದ್ದ ನೂರಾರು ಭಕ್ತ ಜನರು ಶುದ್ಧ ಎಳ್ಳೆಣ್ಣೆಯನ್ನು ಆ ಮರಕ್ಕೆ ಅರ್ಪಿಸಿದರು.

   ಶ್ರೀ ದೇಗುಲದ ಆನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರ ರಾಜ್‌ ಅರಸ್‌ ಕಿನ್ಯಕ್ಕ ಬಲ್ಲಾಳ್‌, ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ದೇವಳದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ, ಅರ್ಚಕರಾದ ಪದ್ಮನಾಭ ಭಟ್‌, ಗುರುರಾಜ ಭಟ್‌, ವೈ. ಗಣಪತಿ ಭಟ್‌, ಜೀರ್ಣೕೊದ್ಧಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ, ಕಾರ್ಯದರ್ಶಿಗಳಾದ ಶ್ರೀನಾಥ್‌ ಹೆಗ್ಡೆ, ವೈ. ಸುಕುಮಾರ್‌, ನವೀನ್‌ಚಂದ್ರ ಜೆ. ಶೆಟ್ಟಿ, ಸುಕುಮಾರ್‌ ಶ್ರೀಯಾನ್‌, ಅಶೋಕ್‌ ಸಾಲ್ಯಾನ್‌, ಭಾಸ್ಕರ್‌ ಕೆ., ಶ್ರೀಕೃಷ್ಣಾಪುರ ಶಾಖಾ ಮಠದ ಶ್ರೀನಿವಾಸ ಉಪಾಧ್ಯಾಯ, ನವೀನ್‌ ಎನ್‌. ಶೆಟ್ಟಿ, ಬಾಲಕೃಷ್ಣ ಕೊರ್ನಾಯ, ರಮಾಕಾಂತ ರಾವ್‌, ಪ್ರಕಾಶ್‌ ದೇವಾಡಿಗ, ಅನಿಲ್‌ಕುಮಾರ್‌ ಶೆಟ್ಟಿ, ವಿಶುಕುಮಾರ್‌ ಶೆಟ್ಟಿಬಾಲ್‌ ಶ್ರೀ ದೇಗುಲದ ಸಿಬಂದಿ ವರ್ಗ, ಗ್ರಾಮಸ್ಥರು ಮತ್ತಿತರರಿದ್ದರು.

   ಮುಂದಿನ ಭಾನುವಾರ (ಡಿ.14)ರಂದು ಭಕ್ತಾದಿಗಳಿಗೆ ತೈಲ ಸಮರ್ಪಣೆಗೆ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಶ್ರೀ ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.