ಪಂಚವರ್ಣ ಸಂಘಟನೆ 300ನೇ ಅಭಿಯಾನ : ಆನಂದ್ ಸಿ ಕುಂದರ್ ರವರಿಗೆ ಸಮರ್ಪಣಾ ಗೌರವ
ಸಮಾಜಕ್ಕಾಗಿ ಅರ್ಪಿಸಿಕೊಂಡ ಆನಂದ್ ಸಿ ಕುಂದರ್ : ಶಾಸಕ ಕೊಡ್ಗಿ
(Kota) ಕೋಟ: ಆನಂದ್ ಸಿ ಕುಂದರ್ ಎಂದರೆ ಅದೊಂದು ಶಕ್ತಿ. ಜಿಲ್ಲೆಯ ಸಾಂಸ್ಕೃತಿಕ ಕಾಶಿಯನ್ನಾಗಿಸಿದ ಕೀರ್ತಿ ಆನಂದ ಕುಂದರ್ ರವರಿಗೆ ಲಭಿಸುತ್ತದೆ. ಇಂತಹ ವ್ಯಕ್ತಿಗೆ ಪಂಚವರ್ಣ ಸಂಘಟನೆ 300ನೇ ವಾರದ ಪರಿಸರ ಸ್ನೇಹಿ ಅಭಿಯಾನ ಸಮರ್ಪಿಸಿದ್ದು ಅರ್ಥಪೂರ್ಣ ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಭಿಪ್ರಾಯಪಟ್ಟರು.
ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಜಿಲ್ಲಾಡಳಿತ, ಸ್ಥಳೀಯಾಡಳಿತ, ಗೀತಾನಂದ ಫೌಂಡೇಶನ್ ಮಣೂರು, ಕೋಡಿ ಪಂಚಾಯತ್ ನೇತೃತ್ವದಲ್ಲಿ ಕೋಡಿ ಗ್ರಾ. ಪಂನಿಂದ ಕೋಟ ಪಂಚಾಯತ್ ವರೆಗಿನ ಐದೂವರೆ ಕಿ. ಮೀ ಬೃಹತ್ ಬೀಚ್ ಸ್ವಚ್ಛತಾ ಅಭಿಯಾನದ ಮಣೂರು ಪಡುಕರೆಯಲ್ಲಿ ಸಮಾರೋಪ ಕಾರ್ಯಕ್ರಮದಲ್ಲಿ ಆನಂದ್ ಸಿ ಕುಂದರ್ ರವರನ್ನು ಸನ್ಮಾನಿಸಿಸಲಾಯಿತು.
300 ನೇ ವಾರವನ್ನು ಆನಂದ್ ಸಿ ಕುಂದರ್ ರವರಿಗೆ ಪಂಚವರ್ಣ ಸಂಘಟನೆ ಸಮರ್ಪಿಸಿ ಗೌರವಿಸಿತು.
ಈ ವೇಳೆ ಬೃಹತ್ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಶಿಕ್ಷಣ ಸಂಸ್ಥೆ, ಸಂಘ ಸಂಸ್ಥೆ, ನರ್ಸಿಂಗ್ ಕಾಲೇಜು, ಗೀತಾನಂದ ಫೌಂಡೇಶನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶೌರ್ಯ ತಂಡ, ರೋಟರಿ ಸಮುದಾಯದಳ ಮೂಡು ಗಿಳಿಯಾರು, ತೋಳಾರ್ ಓಷಿಯನ್ ಪ್ರಾಡೆಕ್ಟ್, ಸ್ಥಳೀಯಾಡಳಿತಗಳಿಗೆ ಅಭಿನಂದನಾ ಪತ್ರವನ್ನು ಶಾಸಕರ ಸಮ್ಮುಖದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ಬಾಲಕೃಷ್ಣ ಶೆಟ್ಟಿ, ಕೋಟ ಸಹಕಾರಿ ವ್ಯವಸಾಯಿಕಾ ಸಂಘದ ಅಧ್ಯಕ್ಷ ಡಾ. ಕೃಷ್ಣ ಕಾಂಚನ್, ನಿರ್ದೇಶಕ ತಿಮ್ಮ ಪೂಜಾರಿ, ತೋಳಾರ್ ಓಷಿಯನ್ ಪ್ರಾಡೆಕ್ಟ್ ಮ್ಯಾನೇಜರ್ ಯೋಗೀಶ್ ಕುಮಾರ, ಜಿಲ್ಲಾ ಸ್ವಚ್ಛ ಭಾರತ್ ಮಿಷನ್ ಸಂಯೋಜಕ ರಘುನಾಥ್, ಕೋಡಿ ಪಂಚಾಯತ್ ಪಿಡಿಒ ರವೀಂದ್ರ ರಾವ್, ಕ್ಯಾಪ್ಸ್ ಫೌಂಡೇಶನ್ ಪ್ರವರ್ತಕ ಸಿ ಎ ಚಂದ್ರಶೇಖರ ಶೆಟ್ಟಿ, ಕೋಟ ಲಕ್ಷ್ಮೀ ಸೋಮ ಬಂಗೇರ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಮೇಶ ಆಚಾರ್, ಪಂಚವರ್ಣದ ಅಧ್ಯಕ್ಷ ಮನೋಹರ್ ಪೂಜಾರಿ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಜನತಾ ಸಂಸ್ಥೆಯ ವ್ಯವಸ್ಥಾಪಕ ಶ್ರೀನಿವಾಸ ಕುಂದರ್, ಕೋಡಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಭಾಕರ್ ಮೆಂಡನ್, ಗೀತಾ ಖಾರ್ವಿ, ಕೆ.ಎಂ ಎಫ್ ನಿರ್ದೇಶಕ ಶಿವಮೂರ್ತಿ ಉಪಾಧ್ಯಾ, ಗೀತಾನಂದ ಫೌಂಡೇಶನ್ ಸಮಾಜಕಾರ್ಯ ವಿಭಾಗದ ರವಿಕಿರಣ್ ಕೋಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಾಗೇಶ್, ಉದ್ಯಮಿ ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಲಾವತಿ ಅಶೋಕ್ ಸ್ವಾಗತಿಸಿದರು. ಸುಜಾತ ಬಾಯರಿ ನಿರೂಪಿಸಿದರು. ರವೀಂದ್ರ ಕೋಟ ವಂದಿಸಿದರು.

