ಪಡುಬಿದ್ರಿಯಲ್ಲಿ ಅದಾನಿ ಪವರ್ ಕಂಪನಿ ವತಿಯಿಂದ ಸ್ಯಾನಿಟರಿ ಪ್ಯಾಡ್ ವಿಲೇವಾರಿ ಘಟಕ ಲೋಕಾರ್ಪಣೆ
ಪಡುಬಿದ್ರಿ : ಪಡುಬಿದ್ರಿ ಗ್ರಾಮದಲ್ಲಿ ಅದಾನಿ ಪವರ್ ಕಂಪನಿ ವತಿಯಿಂದ ಒದಗಿಸಲಾದ ಸ್ಯಾನಿಟರಿ ಪ್ಯಾಡ್ ವಿಲೇವಾರಿ ಘಟಕವನ್ನು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಉದ್ಘಾಟಿಸಿ, ಲೋಕಾರ್ಪಣೆಗೈದರು.
ಕಾರ್ಯಕ್ರಮಗಳನ್ನು ನಿರ್ವಹಿಸುವ ಅಂಗ ಸಂಸ್ಥೆ ಅದಾನಿ ಫೌಂಡೇಷನ್ನ `ಸಿಎಸ್ಆರ್ ಅನುದಾನದಡಿ ಪಡುಬಿದ್ರಿ ಗ್ರಾಮದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಸ್ಯಾನಿಟರ್ ಪ್ಯಾಡ್ ವಿಲೇ ವಾರಿ ಘಟಕವನ್ನು ನಿರ್ಮಿಸಿದೆ.
ಅದಾನಿ ಸಮೂಹವು ಪಡುಬಿದ್ರಿ ಗ್ರಾಮ ಪಂಚಾಯತಿಯನ್ನು ತನ್ನ ಸಿಟಿ ಗ್ಯಾಸ್ ವಿತರಣೆ ಯೋಜನೆಯಡಿ ಪ್ರತಿಯೊಂದು ಮನೆಗೂ ಗ್ಯಾಸ್ ವಿತರಣೆಗೆ ಮೊದಲ ಆದ್ಯತೆಯಾಗಿ ಆಯ್ಕೆ ಮಾಡಿದೆ ಎಂದು ಕಿಶೋರ್ ಆಳ್ವ ತಿಳಿಸಿದರು.
ಪಡುಬಿದ್ರಿ ಗ್ರಾಪಂ ಉಪಾಧ್ಯಕ್ಷ ಹೇಮಚಂದ್ರ, ಸದಸ್ಯರಾದ ನವೀನ್ ಶೆಟ್ಟಿ, ಗಣೇಶ್ ಕೋಟ್ಯಾನ್, ಶೋಭಾ ಜಗದೀಶ್ ಶೆಟ್ಟಿ, ಅಶೋಕ್ ಪೂಜಾರಿ, ರಮೀಜ್ ಹುಸೈನ್, ನಿಯಾಜ್, ಸುನಂದ, ವಿದ್ಯಾಶ್ರೀ, ಜ್ಯೋತಿ ಮೆನನ್, ಸಂದೇಶ್ ಶೆಟ್ಟಿ, ಶಾಫಿ, ಅದಾನಿ ಪವರ್ ಲಿಮಿಟೆಡ್ ಎಜಿಎಂ ರವಿ ಆರ್. ಜೇರೆ, ಅದಾನಿ ಫೌಂಡೇಷನ್ನ ಅನುದೀಪ್ ಉಪಸ್ಥಿತರಿದ್ದರು.

