• Home  
  • ಪಡುಬಿದ್ರಿಯಲ್ಲಿ ಕಡಲು ಕೊರೆತ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ:  ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಾಂಕಾಳ ವೈಧ್ಯ ಉಪಸ್ಥಿತಿ
- ಕರಾವಳಿ - ವಿಡಿಯೋ

ಪಡುಬಿದ್ರಿಯಲ್ಲಿ ಕಡಲು ಕೊರೆತ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ:  ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಾಂಕಾಳ ವೈಧ್ಯ ಉಪಸ್ಥಿತಿ

Share: ಪಡುಬಿದ್ರಿಯಲ್ಲಿ ಕಡಲು ಕೊರೆತ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ:  ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಾಂಕಾಳ ವೈಧ್ಯ ಉಪಸ್ಥಿತಿ ಪಡುಬಿದ್ರಿ: ಈ ಬಾರಿಯ ಮಳೆ ಗಾಳಿಗೆ ಪಡುಬಿದ್ರಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕೋಟ್ಯಾಂತರ ರುಪಾಯಿ ನಷ್ಟ ಸಂಭವಿಸಿದೆ. ಆಪ್ರಯುಕ್ತ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬೇಟಿ ನೀಡಿ ಕಡಲ್ಕೊರೆತ ವೀಕ್ಷಿಸಿದರು, ಸಿಎಂ ರೊಂದಿಗೆ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಉಪಸ್ಥಿತರಿದ್ದರು.   ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ,   ಕಡಲು ಕೊರೆತ ಮಳೆಗಾಲದಲ್ಲಿ ನಿರಂತರ […]

ಪಡುಬಿದ್ರಿಯಲ್ಲಿ ಕಡಲು ಕೊರೆತ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ:  ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಾಂಕಾಳ ವೈಧ್ಯ ಉಪಸ್ಥಿತಿ

ಪಡುಬಿದ್ರಿ: ಈ ಬಾರಿಯ ಮಳೆ ಗಾಳಿಗೆ ಪಡುಬಿದ್ರಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಕೋಟ್ಯಾಂತರ ರುಪಾಯಿ ನಷ್ಟ ಸಂಭವಿಸಿದೆ. ಆಪ್ರಯುಕ್ತ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಬೇಟಿ ನೀಡಿ ಕಡಲ್ಕೊರೆತ ವೀಕ್ಷಿಸಿದರು, ಸಿಎಂ ರೊಂದಿಗೆ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಉಪಸ್ಥಿತರಿದ್ದರು.

  ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ,

  ಕಡಲು ಕೊರೆತ ಮಳೆಗಾಲದಲ್ಲಿ ನಿರಂತರ ನಡೆಯುತ್ತದೆ.  ಶಾಶ್ವತ ಪರಿಹಾರಕ್ಕೆ ಕ್ರಿಯಾ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅದಕ್ಕೆ ಬೇಕಾದ ಹಣವನ್ನು ಹೇಗೆ ಹೊಂದಿಸುವುದು ಎಂಬ ಬಗ್ಗೆ ಚಿಂತನೆ ಮಾಡ್ತೇನೆ. ಅದಷ್ಟು ಬೇಗ ಶಾಶ್ವತ ಪರಿಹಾರದ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದರು.

 ಈ ಸಂದರ್ಭ ಸಿಎಂ ರೊಂದಿಗೆ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ,ಮಾಜಿ ಸಚಿವರಾದ ವಿನಯಕುಮಾರ್‌ ಸೊರಕೆ, ಅಭಯಚಂದ್ರ ಜೈನ್‌, ಉಡುಪಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಕಾಂಗ್ರೆಸ್‌ ಮುಖಂಡರುಗಳಾದ ಶರ್ಫುದ್ದೀನ್‌ ಶೇಖ್‌, ರಮೀಝ್‌ ಹುಸೈನ್‌, ಕರುಣಾಕರ ಪೂಜಾರಿ, ಗಣೇಶ್‌ ಪಡುಬಿದ್ರಿ,ರಾಜಶೇಖರ ಕೋಟ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.