• Home  
  • ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಸಾಂಪ್ರದಾಯಿಕ ಕಟ್ಟದಪ್ಪ ಸೇವೆ  
- ಕರಾವಳಿ - ವಿಡಿಯೋ

ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಸಾಂಪ್ರದಾಯಿಕ ಕಟ್ಟದಪ್ಪ ಸೇವೆ  

Share: ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಸಾಂಪ್ರದಾಯಿಕ ಕಟ್ಟದಪ್ಪ ಸೇವೆ   ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಶುಕ್ರವಾರ ಮತ್ತು ಶನಿವಾರ ವಾರ್ಷಿಕ ಕಟ್ಟದಪ್ಪ ಸೇವೆ ನಡೆಯಲಿದೆ. ಪಡುಬಿದ್ರಿ ಗಣಪತಿಯು ಕಟ್ಟದಪ್ಪ ಪ್ರಿಯನಾಗಿದ್ದು, ಈ ಬಾರಿ ಶುಕ್ರವಾರ ಮತ್ತು ಶನಿವಾರ ಸಾರ್ವಜನಿಕ ಅಪ್ಪಸೇವೆ ನಡೆಯಲಿದೆ.  ಪುರಾತನ ಕಾಲದಲ್ಲಿ ಮಳೆಗಾಲದ ಸಂದರ್ಭ ಪಡುಬಿದ್ರಿ ಕಾಮಿನಿ ಹೊಳೆಯ ನೀರನ್ನು ಒಡ್ಡು ಕಟ್ಟಿ ಕೃಷಿ ಚಟುವಟಿಕೆಗೆ ಬಳಸುತ್ತಿದ್ದರು. ಅಧಿಕ ಮಳೆ ಸಂದರ್ಭ ಕಟ್ಟಿದ ಒಡ್ಡು ಪದೇ […]

ಪಡುಬಿದ್ರಿಯ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಸಾಂಪ್ರದಾಯಿಕ ಕಟ್ಟದಪ್ಪ ಸೇವೆ  

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ಶುಕ್ರವಾರ ಮತ್ತು ಶನಿವಾರ ವಾರ್ಷಿಕ ಕಟ್ಟದಪ್ಪ ಸೇವೆ ನಡೆಯಲಿದೆ.

ಪಡುಬಿದ್ರಿ ಗಣಪತಿಯು ಕಟ್ಟದಪ್ಪ ಪ್ರಿಯನಾಗಿದ್ದು, ಈ ಬಾರಿ ಶುಕ್ರವಾರ ಮತ್ತು ಶನಿವಾರ ಸಾರ್ವಜನಿಕ ಅಪ್ಪಸೇವೆ ನಡೆಯಲಿದೆ.

 ಪುರಾತನ ಕಾಲದಲ್ಲಿ ಮಳೆಗಾಲದ ಸಂದರ್ಭ ಪಡುಬಿದ್ರಿ ಕಾಮಿನಿ ಹೊಳೆಯ ನೀರನ್ನು ಒಡ್ಡು ಕಟ್ಟಿ ಕೃಷಿ ಚಟುವಟಿಕೆಗೆ ಬಳಸುತ್ತಿದ್ದರು. ಅಧಿಕ ಮಳೆ ಸಂದರ್ಭ ಕಟ್ಟಿದ ಒಡ್ಡು ಪದೇ ಪದೆ ಕುಸಿಯುತ್ತಿತ್ತು. ಇದನ್ನು ಉಳಿಸಲು ರೈತಾಪಿ ಜನರು ಸಾಮೂಹಿಕವಾಗಿ ಗ್ರಾಮ ದೇವಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ, ಕಟ್ಟದಪ್ಪ ಸೇವೆ ಸಲ್ಲಿಸಿದ ಬಳಿಕ ಕಟ್ಟ ನಿಂತಿತು ಎನ್ನುವುದು ಪ್ರಚಲಿತ ದಲ್ಲಿದೆ.

 ಅಂದಿನಿಂದ ವರ್ಷಂಪ್ರತಿ ತುಳುವರ ಆಟಿ ತಿಂಗಳಲ್ಲಿ ರೈತಾಪಿ ಜನರು ಕಟ್ಟದಪ್ಪ ಸೇವೆ ಸಲ್ಲಿಸುತ್ತಾ ಬಂದಿದ್ದು ಇಂದು ಸಾಮೂಹಿಕ ನೆಲೆಯಲ್ಲಿ ಸಹ ಸ್ರಾರು ಭಕ್ತರು ಸೇವೆ ಸಲ್ಲಿಸುವ ಮೂಲಕ ಕಟ್ಟದಪ್ಪ ಜಗತ್ಪಸಿದ್ಧಿ ಪಡೆದಿದೆ.  

 ಈ ಬಾರಿ ಸುಮಾರು 80 ಮುಡಿ ತಯಾರಿ ಅಕ್ಕಿಯ ಕಟ್ಟದಪ್ಪ ಶ್ರೀ ಮಹಾಗಣಪತಿಗೆ ಸಮರ್ಪಿತವಾಗಲಿದೆ. ಈ 80 ಮುಡಿ ಅಕ್ಕಿಯ ಹುಡಿಗೆ  180 ಕೆಜಿ ಅರಳು, ಸುಮಾರು 700 ಕೆಜಿ ಬಾಳೆಹಣ್ಣು, ಸುಮಾರು 2000 ತೆಂಗಿನ ಕಾಯಿ, 10 ಕೆಜಿ ಏಲಕ್ಕಿ, ಎರಡೂವರೆ ಟನ್ ಬೆಲ್ಲ ಸೇರಿಸಿ ಮಿಶ್ರಣ ತಯಾರಿಸಿಕೊಳ್ಳುತ್ತಾರೆ. ಮುಂಜಾನೆಯೇ ಈ ಎಲ್ಲ ತಯಾರಿಗಳೂ ನಡೆದು ಬೆಳಗ್ಗಿನಿಂದ ಸಂಜೆವರೆಗೂ ಸುಮಾರು 60 ಡಬ್ಬಿ ಎಣ್ಣೆಯನ್ನು ಪೇರಿಸಿ ದೊಡ್ಡ ಬಾಣಲೆಗಳಲ್ಲಿ ಕಾಯಿಸಿಕೊಳ್ಳುತ್ತಾ ಸುಮಾರು 1.50 ಲಕ್ಷದಷ್ಟು ಕಟ್ಟದಪ್ಪಗಳನ್ನು ಬಾಣಸಿಗರು ತಯಾರಿಸುತ್ತಾರೆ.

ಮುಖ್ಯ ಬಾಣಸಿಗರಾಗಿ ಪಡುಬಿದ್ರಿಯ ಯೋಗೀಶ್ ರಾವ್ ಅವರಿದ್ದು, ವಿವಿಧೆಡೆಯ ಬಾಣಸಿಗರು ಈ ಕಟ್ಟದಪ್ಪತಯಾರಿಸಲು ಸಹಕರಿಸುತ್ತಾರೆ.

ಈ ಸಂದರ್ಭ ದೇಗುಲದ ಅನುವಂಶೀಯ ಮೊಕ್ತೇಸರರಾದ ಶ್ರೀ ರತ್ನಾಕರ ರಾಜ್‌ ಕಿನ್ನಕ್ಕ ಬಳ್ಳಾಲ್‌, ರವೀಂದ್ರ ಭಟ್‌ರವರು ಸಮರ್ಪಕ ಮಾಹಿತಿ ನೀಡಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.