• Home  
  • ರಾಜ್ಯದ ಹೆಸರನ್ನು ಕೇರಳ ಬದಲು ಕೇರಳಂ ಎಂದು ಬದಲಾಯಿಸಿ – ಪಿಣರಾಯಿ ವಿಜಯನ್
- ರಾಜಕೀಯ

ರಾಜ್ಯದ ಹೆಸರನ್ನು ಕೇರಳ ಬದಲು ಕೇರಳಂ ಎಂದು ಬದಲಾಯಿಸಿ – ಪಿಣರಾಯಿ ವಿಜಯನ್

Share: ರಾಜ್ಯದ ಹೆಸರನ್ನು ಕೇರಳ ಬದಲು ಕೇರಳಂ ಎಂದು ಬದಲಾಯಿಸಿ – ಪಿಣರಾಯಿ ವಿಜಯನ್ ಕೇರಳ: ರಾಜ್ಯದ ಹೆಸರನ್ನು ಕೇರಳ ಎಂಬುದರ ಬದಲಾಗಿ ಕೇರಳಂ ಎಂದು ಅಧಿಕೃತವಾಗಿ ಬದಲಾಯಿಸಲು ಅಲ್ಲಿನ ರಾಜ್ಯ ವಿಧಾನಸಭೆ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಬುಧವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಂವಿಧಾನದಲ್ಲಿ ರಾಜ್ಯವನ್ನು ಕೇರಳ ಎಂದು ಉಲ್ಲೇಖಿಸಲಾಗಿದ್ದು, ಇದಕ್ಕೆ ತಿದ್ದುಪಡಿಯನ್ನು ಕೋರಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನಿರ್ಣಯ ಮಂಡಿಸಿದರು.  ಮಲೆಯಾಳಂನಲ್ಲಿ ರಾಜ್ಯದ ಹೆಸರು ಕೇರಳಂ. ಆದರೂ ಸಂವಿಧಾನದ ಮೊದಲ […]

ರಾಜ್ಯದ ಹೆಸರನ್ನು ಕೇರಳ ಬದಲು ಕೇರಳಂ ಎಂದು ಬದಲಾಯಿಸಿ – ಪಿಣರಾಯಿ ವಿಜಯನ್

ಕೇರಳ: ರಾಜ್ಯದ ಹೆಸರನ್ನು ಕೇರಳ ಎಂಬುದರ ಬದಲಾಗಿ ಕೇರಳಂ ಎಂದು ಅಧಿಕೃತವಾಗಿ ಬದಲಾಯಿಸಲು ಅಲ್ಲಿನ ರಾಜ್ಯ ವಿಧಾನಸಭೆ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಸರಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಬುಧವಾರ ಸರ್ವಾನುಮತದಿಂದ ಅಂಗೀಕರಿಸಲಾಯಿತು. ಸಂವಿಧಾನದಲ್ಲಿ ರಾಜ್ಯವನ್ನು ಕೇರಳ ಎಂದು ಉಲ್ಲೇಖಿಸಲಾಗಿದ್ದು, ಇದಕ್ಕೆ ತಿದ್ದುಪಡಿಯನ್ನು ಕೋರಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ನಿರ್ಣಯ ಮಂಡಿಸಿದರು.

 ಮಲೆಯಾಳಂನಲ್ಲಿ ರಾಜ್ಯದ ಹೆಸರು ಕೇರಳಂ. ಆದರೂ ಸಂವಿಧಾನದ ಮೊದಲ ಶೆಡ್ಯೂಲ್ ರಾಜ್ಯವನ್ನು ಕೇರಳ ಎಂದು ಹೇಳುತ್ತದೆ. ಸಂವಿಧಾನ 3ನೇ ಪರಿಚ್ಛೇದದ ಅಡಿಯಲ್ಲಿ ಅದನ್ನು ತಿದ್ದುಪಡಿ ಮಾಡಲು ತುರ್ತು ಕ್ರಮಗಳ ಅಗತ್ಯವಿದೆ ಎಂದು ನಿರ್ಣಯದಲ್ಲಿ ವಿವರಿಸಲಾಗಿದೆ.

 ಆರ್ಟಿಕಲ್ 3 ಹೊಸ ರಾಜ್ಯಗಳ ರಚನೆ ಮತ್ತು ಪ್ರದೇಶಗಳು, ಗಡಿಗಳು ಅಥವಾ ಅಸ್ತಿತ್ವದಲ್ಲಿರುವ ರಾಜ್ಯಗಳ ಹೆಸರುಗಳ ಬದಲಾವಣೆಗೆ ಸಂಬಂಧಪಟ್ಟದ್ದಾಗಿದೆ. 8ನೇ ಶೆಡ್ಯೂಲ್ ನಲ್ಲಿ ಸೇರಿಸಲಾದ ಎಲ್ಲಾ ಭಾಷೆಗಳಲ್ಲಿ ಕೇರಳಂ ಎಂದು ಬಳಸುವಂತೆ ಕೇಂದ್ರವನ್ನು ಆಗ್ರಹಿಸಲಾಗಿದೆ.

 ಈ ವರ್ಷ ಕೇರಳಪ್ಪಿರವಿ (ನವೆಂಬರ್ 1) ಯಂದು ಕೇರಳದ ಇದುವರೆಗಿನ ಸಾಧನೆಗಳು, ವಿವಿಧ ಕ್ಷೇತ್ರಗಳು ಎದುರಿಸುತ್ತಿರುವ ಸವಾಲುಗಳು ಮತ್ತು ಭವಿಷ್ಯದ ನಿರೀಕ್ಷೆಗಳು, ನಮ್ಮ ಅನನ್ಯ ಸಂಪನ್ಮೂಲಗಳು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವ ಪ್ರದರ್ಶನಗಳು, ಚರ್ಚೆಗಳನ್ನು ನವೆಂಬರ್ 1ರಿಂದ ವಾರದವರೆಗೆ ಆಯೋಜಿಸಲು ಸರಕಾರ ನಿರ್ಧರಿಸಿದೆ ಎಂದು ಪಿಣರಾಯಿ ಹೇಳಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.