• Home  
  • ಪಡುಬಿದ್ರಿ : ಅಂತರ್‌ರಾಜ್ಯ ಕಳ್ಳರಿಬ್ಬರ ಬಂಧನ, ಒಂದು ಕಾರು, ನಗದು ವಶ (Padubidri: Two interstate thieves arrested, one car, cash seized
- ಅಪರಾಧ

ಪಡುಬಿದ್ರಿ : ಅಂತರ್‌ರಾಜ್ಯ ಕಳ್ಳರಿಬ್ಬರ ಬಂಧನ, ಒಂದು ಕಾರು, ನಗದು ವಶ (Padubidri: Two interstate thieves arrested, one car, cash seized

Share: ಪಡುಬಿದ್ರಿ : ಅಂತರ್‌ರಾಜ್ಯ ಕಳ್ಳರಿಬ್ಬರ ಬಂಧನ, ಒಂದು ಕಾರು, ನಗದು ವಶ) (Padubidri) ಪಡುಬಿದ್ರಿ : ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್‌ರಾಜ್ಯ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿ, ಅವರಿಂದ ಕೃತ್ಯಕ್ಕೆ ಬಳಸಿದ ಒಂದು ಟಾಟಾ ಪಂಚ್ ಕಾರು ಹಾಗೂ 24000 ನಗದನ್ನು ವಶ ಪಡಿಸಿಕೊಳ್ಳಲಾಗಿದೆ.  ಆರೋಪಿ ಇಬ್ರಾಹಿಂ ಕಲಂದರ್ (42) ಮೋರ್ಗಲ್ ಕಾಸರಗೋಡಿನವನಾಗಿದ್ದು ಒಟ್ಟು 14 ಮನೆ ಕಳ್ಳತನ ಪ್ರಕರಣ ಮ್ತತು 1 ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ.   ಮತ್ತೋರ್ವ ಆರೋಪಿ  […]

(Padubidri) ಪಡುಬಿದ್ರಿ : ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳ್ಳತನ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್‌ರಾಜ್ಯ ಕಳ್ಳರಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿ, ಅವರಿಂದ ಕೃತ್ಯಕ್ಕೆ ಬಳಸಿದ ಒಂದು ಟಾಟಾ ಪಂಚ್ ಕಾರು ಹಾಗೂ 24000 ನಗದನ್ನು ವಶ ಪಡಿಸಿಕೊಳ್ಳಲಾಗಿದೆ.

 ಆರೋಪಿ ಇಬ್ರಾಹಿಂ ಕಲಂದರ್ (42) ಮೋರ್ಗಲ್ ಕಾಸರಗೋಡಿನವನಾಗಿದ್ದು ಒಟ್ಟು 14 ಮನೆ ಕಳ್ಳತನ ಪ್ರಕರಣ ಮ್ತತು 1 ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ.

  ಮತ್ತೋರ್ವ ಆರೋಪಿ  ಮಹಮದ್ ರಿಯಾಜ್ (32) ಮಂಜೇಶ್ವರ ಕಾಸರಗೋಡು ಜಿಲ್ಲೆಯವನಾಗಿದ್ದು, ಈತನ ಮೇಲೆ 1 ಕೊಲೆ ಪ್ರಕರಣ ಮತ್ತು 1 ಗಾಂಜಾ ಪ್ರಕರಣ ದಾಖಲಾಗಿರುತ್ತದೆ.

 ಪಡುಬಿದ್ರಿ ಠಾಣೆಯಲ್ಲಿ ಗಣೇಶ್ ಪ್ರಸಾದ್ ಶೆಟ್ಟಿಯವರ ಮನೆ ಕಳವು, ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ 2 ದೇವಸ್ಥಾನ ಕಳವು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 1 ಮನೆ ಕಳವು, ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 1 ದರೋಡೆಗೆ ಪ್ರಯತ್ನ, ಮೇಲ್ಪರಂಭ ಠಾಣೆಯಲ್ಲಿ ಮನೆ ಕಳವು ಹಾಗೂ ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಮುನಿಯಾಲು ಸೊಸೈಟಿ ದರೋಡೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಬ್ಯಾಂಕ್ ದರೋಡೆ ಪ್ರಕರಣ, ಮೂಡಬಿದ್ರಿ  ಪೊಲೀಸ್ ಠಾಣೆಯಲ್ಲಿ ಅಡಿಕೆ ಕಳವು ಪ್ರಕರಣ, ಪುತ್ತೂರು ನಗರ ಮತ್ತು ಗ್ರಾಮಾಂತರ ಠಾಣೆಯಲ್ಲಿ 4 ಮನೆ ಕಳವು ಪ್ರಕರಣ, ಕಡಬ ಪೊಲೀಸ್ ಠಾಣೆಯಲ್ಲಿ ಸರ ಕಳ್ಳತನ, ಉಪ್ಪಿನಂಗಡಿ ಠಾಣೆಯಲ್ಲಿ ಅಂಗಡಿ ಕಳವು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಂಗಡಿ ಕಳವು, ಮಡಿಕೇರಿ ಜಿಲ್ಲೆಯ ಕುಶಾಲನಗರ ಠಾಣೆಯಲ್ಲಿ ಕಳವು ಪ್ರಕರಣಗಳು ಹಾಗೂ ಮತ್ತು ಕೊಲೆ ಪ್ರಕರಣ, ಗಾಂಜಾ ಮಾರಾಟ ಪ್ರಕರಣ ದಾಖಲಾಗಿವೆ.

 ಇಬ್ರಾಹಿಂ ಕಲಂದರ್ ಏ.15ರಂದು  ಕೇರಳ ರಾಜ್ಯದ ಹೊಸದುರ್ಗ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಹೊಂದಿದ್ದು, ಇನ್ನೋರ್ವ ಆರೋಪಿ ಮೊಹಮ್ಮದ್ ರಿಯಾಜ್ ಮೇ.12ರಂದು ಕಾಸರಗೋಡು ಸಬ್ ಜೈಲಿನಿಂದ ಬಿಡುಗಡೆ ಹೊಂದಿದ್ದ.

 ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್‌, ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ, ಸಹಾಯಕ ಪೊಲೀಸ್ ಅಧೀಕ್ಷಕರ ಕಾರ್ಕಳ ಉಪವಿಭಾಗರವರ ನೇತೃತ್ವದಲ್ಲಿ ಕಾಪು ಪೊಲೀಸ್ ವೃತ್ತ ನಿರೀಕ್ಷಕರು ಜಯಶ್ರೀ ಮಾಣೆಯವರ ಮುಂದಾಳತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪಿ ಎಸ್ ಐ ಸಕ್ತಿವೇಲು, ಪಿ ಎಸ್ ಐ ಅನಿಲ್ ಕುಮಾರ್ ಹಾಗೂ ಠಾಣಾ ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್, ಎ ಎಸ್ ಐ ಗಿರೀಶ್, ಹೆಚ್ ಸಿ ಕೃಷ್ಣಪ್ರಸಾದ್, ಪಿಸಿ ಸಂದೇಶ ಹಾಗೂ ಕಾಪು ಠಾಣಾ ಸಿಪಿಸಿ ಮೋಹನ, ಸಿಪಿಸಿ ರಘು, ಅಜೆಕಾರು ಠಾಣಾ ಹೆಚ್ ಸಿ ಸತೀಶ್, ಹೆಚ್ ಸಿ ಪ್ರದೀಪ್ ಶೆಟ್ಟಿ ಹಾಗೂ ಕಾಪು ವೃತ್ತ ನಿರೀಕ್ಷಕರ ಕಛೇರಿಯ ಸಿಪಿಸಿ ಜೀವನ್ ಇವರು ಪ್ರಕರಣದ ಪತ್ತೆಗೆ ಸಹಕರಿಸಿದ್ದಾರೆ.

 .

Leave a comment

Your email address will not be published. Required fields are marked *

eMedia Kannada  @2025. All Rights Reserved.