• Home  
  • ಪಡುಬಿದ್ರಿ ದೇವಸ್ಥಾನ ಜೀರ್ಣೋದ್ಧಾರ ಪ್ರಕ್ರಿಯೆಗಳ ಅವಲೋಕನ ಸಭೆ
- ಧಾರ್ಮಿಕ

ಪಡುಬಿದ್ರಿ ದೇವಸ್ಥಾನ ಜೀರ್ಣೋದ್ಧಾರ ಪ್ರಕ್ರಿಯೆಗಳ ಅವಲೋಕನ ಸಭೆ

Share: ಪಡುಬಿದ್ರಿ ದೇವಸ್ಥಾನ ಜೀರ್ಣೋದ್ಧಾರ ಪ್ರಕ್ರಿಯೆಗಳ ಅವಲೋಕನ ಸಭೆ  ಸಮಸ್ತ ಜನರ ಸಹಭಾಗಿತ್ವದಲ್ಲಿ ದೇಗುಲದ ಜೀರ್ಣೋದ್ಧಾರ: ಕೆ. ಪ್ರಕಾಶ್ ಶೆಟ್ಟಿ  (Padubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಜೀರ್ಣೋದ್ಧಾರ ಪ್ರಕ್ರಿಯೆಗಳ ಅವಲೋಕನ ಸಭೆ ಪಡುಬಿದ್ರಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಅವಲೋಕನ ಸಭೆಯ ಅಧ್ಯಕ್ಷತೆಯನ್ನು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಬೆಂಗಳೂರಿನ ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ ವಹಿಸಿ ಮಾತನಾಡಿದರು.  ಸಕಲ ಅಡೆತಡೆಗಳನ್ನು […]

 (Padubidri) ಪಡುಬಿದ್ರಿ : ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಜೀರ್ಣೋದ್ಧಾರ ಪ್ರಕ್ರಿಯೆಗಳ ಅವಲೋಕನ ಸಭೆ ಪಡುಬಿದ್ರಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಅವಲೋಕನ ಸಭೆಯ ಅಧ್ಯಕ್ಷತೆಯನ್ನು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಬೆಂಗಳೂರಿನ ಉದ್ಯಮಿ ಡಾ. ಕೆ. ಪ್ರಕಾಶ್ ಶೆಟ್ಟಿ ವಹಿಸಿ ಮಾತನಾಡಿದರು.

 ಸಕಲ ಅಡೆತಡೆಗಳನ್ನು ಮೀರಿ ಮುನ್ನಡೆದಿದ್ದೇವೆ. ವೆಂಕಟರಮಣನ ಅನುಗ್ರಹವೂ ಇಂದು ನಮ್ಮ ಮೇಲಾಗಿದೆ. ಎ. 23 ರಂದು ನಡೆದ ಭೂಮಿ ಪೂಜೆಯ ಬಳಿಕ ಕೆಲಸ ಕಾರ್ಯಗಳ ಪ್ರಗತಿಯಲ್ಲಿ ಸಹಕರಿಸುತ್ತಿರುವ ಯೋಗ್ಯ ಗುತ್ತಿಗೆದಾರರು, ಎಂಜಿನಿಯರ್ ಹಾಗೂ ದಾರು ಶಿಲ್ಪಗಳ ದಂಡು ನಮ್ಮೊಂದಿಗಿದೆ. ಮುಂದಿನ ಮಳೆಗಾಲದೊಳಗಾಗಿ ಶ್ರೀ ದೇವಸ್ಥಾನದ ಬ್ರಹ್ಮಕಲಶೋತ್ಸವವೂ ಆಗಬೇಕಿದೆ. ಮುಂದೆ ಇನ್ನಷ್ಟು ಧನ ಸಂಗ್ರಹಕ್ಕಾಗಿ ನಾವು ಜತೆಯಾಗಿ ಪ್ರಯತ್ನಿಸೋಣ. ಗ್ರಾಮಸ್ಥರ, ಸಮಷ್ಟಿಯ ಸಹಭಾಗಿತ್ವ, ದೇಣಿಗೆಯೊಂದಿಗೆ ದೇವಾಲಯದ ಪುನರ್ ನಿರ್ಮಾಣವಾಗಬೇಕಿದೆ ಎಂದರು.

  ಕಾಪು ಶಾಸಕ ಸುರೇಶ್ ಶೆಟ್ಟಿ ಮಾತನಾಡಿ, ಶಾಸಕನ ನೆಲೆಯಲ್ಲಿ ನಿಮ್ಮೊಂದಿಗೆ ಧನ ಸಂಗ್ರಹಕ್ಕಾಗಿ ತಾನೂ ಜತೆಗಿದ್ದು ಪ್ರಯತ್ನಿಸುವೆನು. ಇದು ಜೀವಿತಾವಧಿಯ ಸಾಧನೆ ಇದಾಗಿದೆ. ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ. ಸರಕಾರದ ಸಹಾಯಕ್ಕೂ ಪ್ರಯತ್ನಿಸೋಣ ಎಂದರು.

 ಶ್ರೀ ದೇಗುಲದ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ ಅವರು ಮಾತನಾಡಿದರು.

 ಸಭಿಕರೂ ತಮ್ಮ ಅಭಿಪ್ರಾಯ ತಿಳಿಸಿದರು.

 ವೇದಿಕೆಯಲ್ಲಿ ದೇಗುಲದ ಆನುವಂಶಿಕ ಮೊಕ್ತೇಸರ ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ದೇವಸ್ಥಾನದ ಅರ್ಚಕ ಗುರುರಾಜ ಭಟ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ರಾಘವೇಂದ್ರ ನಾವಡ ಉಪಸ್ಥಿತರಿದ್ದರು.

 ಜೀರ್ಣೋದ್ಧಾರ ಸಮಿತಿಯ ಸರ್ವ ಸದಸ್ಯರು, ವಿವಿಧ ದಾನಿಗಳು, ಗಣ್ಯರು, ಗುತ್ತಿಗೆದಾರ ಸುಜಯ್ ಶೆಟ್ಟಿ ಕಾರ್ಕಳ, ಇಂಜಿನಿಯರ್ ವಿಷ್ಣುಮೂರ್ತಿ ಭಟ್ ಎಲ್ಲೂರು, ದಾರು ಶಿಲ್ಪದ ಜವಾಬ್ದಾರಿ ವಹಿಸಿರುವ ಸುಹಾಸ್ ಹೆಗ್ಡೆ ನಂದಳಿಕೆ ಇದ್ದರು.

 ಸಮಿತಿಯ ಕಾರ್ಯದರ್ಶಿ ವೈ. ಸುಕುಮಾರ್ ಸ್ವಾಗತಿಸಿದರು. ಅನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ ಪ್ರಸ್ತಾವಿಸಿದರು. ಜತೆ ಕಾರ್ಯದರ್ಶಿ ನವೀನ್ ಚಂದ್ರ ಜೆ. ಶೆಟ್ಟಿ ಈಗಾಗಲೇ ಆಗಿರುವ, ಆಗಬೇಕಾದ ಖರ್ಚು ವೆಚ್ಚಗಳ ಮಾಹಿತಿಯಿತ್ತರು. ಶ್ರೀಧರ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.