• Home  
  • ಪಡುಬಿದ್ರಿ ಬಂಟರ ಸಂಘದಲ್ಲಿ ಸಿರಿಮುಡಿ ದತ್ತಿನಿಧಿ ವಿತರಣೆ (Sirimudi Endowment Fund Distribution at Padubidri Buntara Sangha)  
- ವ್ಯವಹಾರ - ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಪಡುಬಿದ್ರಿ ಬಂಟರ ಸಂಘದಲ್ಲಿ ಸಿರಿಮುಡಿ ದತ್ತಿನಿಧಿ ವಿತರಣೆ (Sirimudi Endowment Fund Distribution at Padubidri Buntara Sangha)  

Share:  ಸಿರಿಮುಡಿ ಕೋ–ಆಪರೇಟಿವ್ ಸೊಸೈಟಿ ಉದ್ಘಾಟನೆ  (Padubiddri) ಪಡುಬಿದ್ರಿ : ಹುಟ್ಟು ಸಾವಿನ ಮಧ್ಯೆ ಬದುಕನ್ನು ಸಾರ್ಥಕಗೊಳಿಸಲು ಸಾಮಾಜಿಕ ಕಾರ್ಯ ಮುಖ್ಯ. ದೇವರ ಆಶೀರ್ವಾದವೂ ಸಿಗಲಿದೆ. ಕಲಿಕಾ ಆಸಕ್ತಿಯಿದ್ದರೆ, ಬಡತನ ಮುಖ್ಯ ವಿಷಯವಾಗದು.  ವಿದ್ಯಾರ್ಥಿವೇತನದೊಂದಿಗೆ ಶಿಕ್ಷಣ ಪಡೆದವರು ಮುಂದೆ ಉದ್ಯೋಗ ಪಡೆದು ತಮ್ಮ ‌ಆದಾಯದ ಸ್ವಲ್ಪ ಭಾಗ ಅವಶ್ಯವಿದ್ದವರಿಗೆ ಸಹಾಯ ನೀಡಿದಲ್ಲಿ ಸಮಾಜ ಬೆಳೆಯಲು ಸಾಧ್ಯ ಎಂದು ಎಮ್ ಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ. ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಂಟರ […]

 (Padubiddri) ಪಡುಬಿದ್ರಿ : ಹುಟ್ಟು ಸಾವಿನ ಮಧ್ಯೆ ಬದುಕನ್ನು ಸಾರ್ಥಕಗೊಳಿಸಲು ಸಾಮಾಜಿಕ ಕಾರ್ಯ ಮುಖ್ಯ. ದೇವರ ಆಶೀರ್ವಾದವೂ ಸಿಗಲಿದೆ. ಕಲಿಕಾ ಆಸಕ್ತಿಯಿದ್ದರೆ, ಬಡತನ ಮುಖ್ಯ ವಿಷಯವಾಗದು.  ವಿದ್ಯಾರ್ಥಿವೇತನದೊಂದಿಗೆ ಶಿಕ್ಷಣ ಪಡೆದವರು ಮುಂದೆ ಉದ್ಯೋಗ ಪಡೆದು ತಮ್ಮ ‌ಆದಾಯದ ಸ್ವಲ್ಪ ಭಾಗ ಅವಶ್ಯವಿದ್ದವರಿಗೆ ಸಹಾಯ ನೀಡಿದಲ್ಲಿ ಸಮಾಜ ಬೆಳೆಯಲು ಸಾಧ್ಯ ಎಂದು ಎಮ್ ಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ. ಕೆ. ಪ್ರಕಾಶ್ ಶೆಟ್ಟಿ ಹೇಳಿದರು.

ಅವರು ಪಡುಬಿದ್ರಿ ಬಂಟರ ಭವನದಲ್ಲಿ ಜರಗಿದ ಸಿರಿಮುಡಿ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಿರಿಮುಡಿ ಕ್ರೆಡಿಟ್ ಕೋ-ಆಪರೇಟಿವ್ ಸಂಘ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಇದರ ಅಧ್ಯಕ್ಷರಾದ ಸಹಕಾರ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ,  ಅವಿಭಜಿತ ದ.ಕ ಜಿಲ್ಲೆಯು ಬ್ಯಾಂಕುಗಳ ತವರೂರಾಗಿತ್ತು. ಇವತ್ತು ನಮ್ಮ ಬ್ಯಾಂಕುಗಳು ಇತರ ಬ್ಯಾಂಕುಗಳೊಂದಿಗೆ ವಿಲೀನವಾಗಿದೆ. ಉಡುಪಿ – ದ.ಕ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಜನರ ಅಭಿವೃದ್ಧಿಗೆ ಸಹಾಯ ಹಸ್ತ ನೀಡುತ್ತಿದೆ. ಇದರಿಂದ ಸಮಾಜದ ಅಭಿವೃದ್ಧಿಯೂ ಆಗುತ್ತಿದೆ ಎಂದು ರಾಜೇಂದ್ರ ಕುಮಾರ್‌ ಹೇಳಿದರು.

   ಸದಾನಂದ ಕುಡ್ಡು ಶೆಟ್ಟಿ ಸಂಕೀರ್ಣವನ್ನು ಪೂನದ ಉದ್ಯಮಿ ಸದಾನಂದ ಕೆ. ಶೆಟ್ಟಿ ಉದ್ಘಾಟಿಸಿದರು.

    ಹೇರಂಭಾ ಗ್ರೂಪ್ ಆಡಳಿತ ನಿರ್ದೇಶಕ ಡಾ. ಕನ್ಯಾನ ಸದಾಶಿವ ಶೆಟ್ಟಿಯವರು ಸಿರಿಮುಡಿ ಉಳಿತಾಯ ಖಾತೆ ಪಾಸ್ ಪುಸ್ತಕ ವಿತರಿಸಿದರು.

  ವಿ‌.ಕೆ.ಗ್ರೂಪ್ ಆಡಳಿತ ನಿರ್ದೇಶಕ ಕೆ.ಎಮ್. ಶೆಟ್ಟಿ ನಿರಖು ಠೇವಣಿ ಪತ್ರ ಬಿಡುಗಡೆಗೊಳಿಸಿದರು.

    ಪುಣೆ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಸವಲತ್ತುಗಳನ್ನು ವಿತರಿಸಿದರು.

  ಈ ಸಂದರ್ಭ ಸಿರಿಮುಡಿ ದತ್ತಿನಿಧಿ ವಿತರಣೆ, ಬಂಟರ ಮಾಹಿತಿ ಕೈಪಿಡಿ, ತುಳುವ ಐಸಿರಿ 2026 ಸಾಂಸ್ಕೃತಿಕ ಸ್ಪರ್ಧೆಯ ಕರಪತ್ರ ಬಿಡುಗಡೆಗೊಳಿಸಿ, ವಿಶೇಷ ಚೇತನರಿಗೆ, ಆರೋಗ್ಯ ವಿಮೆ, ವಿಧವಾ ವೇತನ ಸೌಲಭ್ಯಗಳನ್ನು ನೀಡಲಾಯಿತು.

   ಎಮ್ ಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕ ಡಾ.ಕೆ. ಪ್ರಕಾಶ್ ಶೆಟ್ಟಿ, ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಉದ್ಯಮಿ ಸದಾನಂದ ಕೆ. ಶೆಟ್ಟಿಯವರನ್ನು ಪಡುಬಿದ್ರಿ ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

  ಬಂಟಾಶ್ರಯ ಯೋಜನೆಗೆ ರೂ.5 ಲಕ್ಷ ದೇಣಿಗೆ ನೀಡಿದ ಸಂಘದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ದಂಪತಿಯನ್ನು ಗೌರವಿಸಲಾಯಿತು.

 ನಾನಾ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಬೆಳಪು ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

   ವೇದಿಕೆಯಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಅಧ್ಯಕ್ಷ, ಸಿರಿಮುಡಿ ದತ್ತಿ ನಿಧಿ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಡಾ.ವೈ.ಎನ್. ಶೆಟ್ಟಿ, ಪ್ರಕಾಶ್ ಶೆಟ್ಟಿ ಪಡುಹಿತ್ಲು, ರವಿ ಶೆಟ್ಟಿ ಗುಂಡ್ಲಾಡಿ, ಶ್ರೀನಾಥ ಹೆಗ್ಡೆ, ಶಶಿಧರ್ ಶೆಟ್ಟಿ, ರವೀಂದ್ರನಾಥ ಜಿ. ಹೆಗ್ಡೆ, ಸುರೇಶ್ ಶೆಟ್ಟಿ ಗುಂಡ್ಲಾಡಿ, ನವೀನ್ ಚಂದ್ರ ಶೆಟ್ಟಿ, ಸಂತೋಷ್ ಶೆಟ್ಟಿ ಪಲ್ಲವಿ, ಮಾಧವ ಸಿ ಶೆಟ್ಟಿ, ಸಂತೃಪ್ತಿ ಶೆಟ್ಟಿ, ಶೋಭಾ ಶೆಟ್ಟಿ, ಭಾರತಿ ಶೆಟ್ಟಿ, ಸುಜಿತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಸಾಂತೂರು ಭಾಸ್ಕರ ಶೆಟ್ಟಿ ಸ್ವಾಗತಿಸಿದರು. ಸತೀಶ್ ಗುಡ್ಡೆಚ್ಚಿ, ಜಯ ಶೆಟ್ಟಿ ಪದ್ರ, ವಿಜೇತಾ ಹರೀಶ್‌ ಶೆಟ್ಟಿ ನಿರೂಪಿಸಿದರು.

 ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು ವಂದಿಸಿದರು.

 ******* ಎಸ್‌ಸಿಡಿಸಿಸಿ ಬ್ಯಾಂಕ್‌ ವತಿಯಿಂದ ಸೊಸೈಟಿ ಕಟ್ಟಡಕ್ಕೆ ರೂ. 10 ಲಕ್ಷ, ಸಂಘದ ಲಿಫ್ಟ್ ಅಳವಡಿಕೆಗೆ ರೂ. 10 ಲಕ್ಷ ಅನುದಾನದ ಜತೆಗೆ ಬಂಟಾಶ್ರಯ ಯೋಜನೆಗೆ ಸೂಕ್ತ ಅನುದಾನ ನೀಡುವುದಾಗಿ ಡಾ. ರಾಜೇಂದ್ರಕುಮಾರ್ ಘೋಷಿಸಿದರು.

 ******* ಕಾಪು, ಪಡುಬಿದ್ರಿ, ಮೂಲ್ಕಿ ಭಾಗದ ಅರ್ಹ ಫಲಾನುಭವಿಗಳಿಗೆ ಆರ್ಥಿಕ ಸಹಾಯ ನೀಡಲು ಮೂಲ್ಕಿ ಸುಂದರರಾಮ ಶೆಟ್ಟಿ ಸ್ಮಾರಕ ಟ್ರಸ್ಟ್‌ನಿಂದ ಅನುದಾನ ಮೀಸಲಿಡಲಾಗುವುದು. ಪಡುಬಿದ್ರಿ ಬಂಟರ ಸಂಘದ ಸಿರಿಮುಡಿ ದತ್ತಿನಿಯು ಮುಂದಿನ 3 ವರ್ಷಗಳಲ್ಲಿ 131 ಕೋಟಿಯಷ್ಟು ಹೆಚ್ಚಳವಾಗಲಿ. ಇದಕ್ಕೆ ಬೇಕಾದ ಸಹಾಯ ನೀಡಲು ಬದ್ಧನಿದ್ದೇನೆ. ಸಂಘದ ಲಿಫ್ಟ್ ಅಳವಡಿಕೆಗೆ ಬೇಕಾದ ಆರ್ಥಿಕ ಸಹಾಯ ನೀಡುತ್ತೇನೆ ಎಂದರು.

 ***** ಸಿರಿಮುಡಿ ದತ್ತಿನಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿ ಒಟ್ಟು ರೂ.17 ಲಕ್ಷ ಸಹಾಯ ಧನ ಸಹಾಯ ವಿತರಿಸಲಾಯಿತು.

 ***** ಈಗಾಗಲೇ ಬಂಟರ ಸಂಘದ ಮಾಜಿ ಅಧ್ಯಕ್ಷ, ಸಿರಿಮುಡಿ ದತ್ತಿ ನಿಧಿ ಸ್ಥಾಪಕ ಸಾಂತೂರು ಭಾಸ್ಕರ ಶೆಟ್ಟಿಯವರ ಮುತುವರ್ಜಿಯಲ್ಲಿ 1ಕೋಟಿ 31 ಲಕ್ಷ ರೂ. ಸಿರಿಮುಡಿ ದತ್ತಿನಿಧಿಯನ್ನು ಸಂಗ್ರಹಿಸಲಾಗಿದ್ದು, ದಾನಿಗಳ ಸಹಕಾರದಲ್ಲಿಇನ್ನಷ್ಟು ಧನ ಸಂಗ್ರಹ ಮಾಡುವ ಭರವಸೆಯನ್ನು ಭಾಸ್ಕರ ಶೆಟ್ಟಿಯವರು ವ್ಯಕ್ತ ಪಡಿಸಿದ್ದಾರೆ.  

Leave a comment

Your email address will not be published. Required fields are marked *

eMedia Kannada  @2025. All Rights Reserved.